ETV Bharat / science-and-technology

ಪಾಕ್ ಅಣ್ವಸ್ತ್ರ ಪಿತಾಮಹ ಎ.ಕ್ಯೂ. ಖಾನ್ ನಿಧನ - Khan Research Laboratories

ಭಾರತದಲ್ಲಿ ಹುಟ್ಟಿ ಪಾಕ್ ಅಣ್ವಸ್ತ್ರ ಕಾರ್ಯಕ್ರಮಗಳ ಪಿತಾಮಹ ಎನಿಸಿಕೊಂಡ ಎ.ಕ್ಯೂ. ಖಾನ್ ಇಸ್ಲಾಮಾಬಾದ್​ನಲ್ಲಿ ಅನಾರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ.

Father of Pakistan's nuclear programme AQ Khan passes away
ಪಾಕ್ ಅಣ್ವಸ್ತ್ರ ಪಿತಾಮಹಾ ಎ.ಕ್ಯೂ.ಖಾನ್ ನಿಧನ
author img

By

Published : Oct 10, 2021, 12:19 PM IST

ಇಸ್ಲಾಮಾಬಾದ್(ಪಾಕಿಸ್ತಾನ): ನೆರೆಯ ರಾಷ್ಟ್ರವಾದ ಪಾಕಿಸ್ತಾನವನ್ನು ಅಣ್ವಸ್ತ್ರ ಸಹಿತ ರಾಷ್ಟ್ರವನ್ನಾಗಿ ಮಾಡಿದ, ಪಾಕ್ ಅಣ್ವಸ್ತ್ರ ಯೋಜನೆಯ ಪಿತಾಮಹ ಎಂದೇ ಕರೆಯಲ್ಪಡುವ ಎ.ಕ್ಯೂ. ಖಾನ್ (ಅಬ್ದುಲ್ ಖಾದಿರ್ ಖಾನ್) ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ.

85 ವರ್ಷ ವಯಸ್ಸಿನ ಅಬ್ದುಲ್ ಖಾದಿರ್ ಖಾನ್ ಅವರಿಗೆ ಆರೋಗ್ಯ ಸಮಸ್ಯೆಯಿದ್ದು, ಬೆಳಗ್ಗೆ 7 ಗಂಟೆಗೆ ಇಸ್ಲಾಮಾಬಾದ್​​ನ ಖಾನ್ ರಿಸರ್ಚ್ ಲ್ಯಾಬೋರೇಟರೀಸ್ (KRL) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟ ಸಂಬಂಧಿ ಸಮಸ್ಯೆಯಿಂದ ಅವರನ್ನು ಮುಂಜಾನೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನಹೊಂದಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

  • إِنَّا لِلّهِ وَإِنَّـا إِلَيْهِ رَاجِعونَ
    Deeply grieved at the sad demise of Dr Abdul Qadeer Khan. Great loss! Pakistan will forever honor his services to the nation! Nation is heavily indebted to him for his contributions in enhancing our defence capabilities.

    — Pervez Khattak (@PervezKhattakPK) October 10, 2021 " class="align-text-top noRightClick twitterSection" data=" ">

ಅಬ್ದುಲ್ ಖಾದಿರ್ ಖಾನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪಾಕ್ ರಕ್ಷಣಾ ಸಚಿವ ಪರ್ವೇಜ್ ಖತ್ತಕ್ ಇದು ದೇಶಕ್ಕೆ ಬಹುದೊಡ್ಡ ನಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ನೀಡಿರುವ ಕೊಡುಗೆಯನ್ನು ರಾಷ್ಟ್ರ ಸ್ಮರಿಸುತ್ತದೆ ಎಂದಿದ್ದಾರೆ.

ಭೋಪಾಲ್ ಮೂಲದ ಎ.ಕ್ಯೂ. ಖಾನ್

ಅಬ್ದುಲ್ ಖಾದಿರ್ ಖಾನ್ ಏಪ್ರಿಲ್ 1, 1936ರಂದು ಮಧ್ಯಪ್ರದೇಶ ಭೋಪಾಲ್​ನಲ್ಲಿ ಜನಿಸಿದ್ದರು. ಪಶ್ತೂನ್ ಸಮುದಾಯಕ್ಕೆ ಸೇರಿದ ಅವರು, ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪಡೆದಿದ್ದರು. ಭಾರತ-ಪಾಕ್​ ವಿಭಜನೆಯಾದ ನಂತರ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು.

ಇದನ್ನೂ ಓದಿ: ವಿಶ್ವ ಮಾನಸಿಕ ಆರೋಗ್ಯ ದಿನ: ವಾಸ್ತವಿಕ ನೆಲೆಯಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಕಾಳಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.