ಲಕ್ನೋ(ಉತ್ತರ ಪ್ರದೇಶ): ಜಗತ್ತು ಕಂಡ ಅತ್ಯಂತ ಮೇಧಾವಿ, ಅಸಾಮಾನ್ಯ ವಿಜ್ಞಾನಿಗಳಲ್ಲಿ ಒಬ್ಬರು ಸ್ಟೀಫನ್ ಹಾಕಿಂಗ್. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಎಂಬ ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದರೂ ಭೌತಶಾಸ್ತ್ರದಲ್ಲಿ ಅವರಿಗಿದ್ದ ಜ್ಞಾನ ಅಪರಿಮಿತ. ಇಂತಹ ಸ್ಟೀಫನ್ ಹಾಕಿಂಗ್ಗೂ ಉತ್ತರ ಪ್ರದೇಶದ ಲಕ್ನೋಗೂ ಸಂಬಂಧ ಇತ್ತು ಎಂಬ ವಿಚಾರ ಇದೀಗ ಬಯಲಾಗಿದೆ. ಸ್ಟೀಫನ್ ಹಾಕಿಂಗ್ ತಂದೆ ಪ್ರಾಂಕ್ ಹಾಕಿಂಗ್ ಇಂಗ್ಲೆಂಡ್ನ ನ್ಯಾಷನಲ್ ಇನ್ಸಿಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್ನ ಮುಖ್ಯಸ್ಥರಾಗಿದ್ದರು. ಅವರು 1950ಕ್ಕೂ ಮುಂಚೆ ಲಕ್ನೋದಲ್ಲಿ ಕೆಲಕಾಲ ವಾಸವಾಗಿದ್ದರು. ಹಾಕಿಂಗ್ ಅವರು ಬಾಲ್ಯದಲ್ಲಿ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ನ್ಯೂನತೆಗೆ ತುತ್ತಾಗುವ ಮೂರು ವರ್ಷ ಮುನ್ನ 1959ರಲ್ಲಿ ಭಾರತಕ್ಕೆ ಬಂದಿದ್ದ ಅವರು, ಲಕ್ನೋಗೆ ಸಣ್ಣ ಪ್ರವಾಸ ಕೈಗೊಂಡಿದ್ದರು ಎಂಬ ಸಂಗತಿ ಈಗ ಬಯಲಾಗಿದೆ.
ಲಕ್ನೋನಲ್ಲಿದ್ದ ಹಾಕಿಂಗ್ ತಂದೆ.. ಪ್ರಾಂಕ್ ಹಾಕಿಂಗ್ ಚಥರ್ ಮನ್ಜಿಲ್ನಲ್ಲಿರುವ ಸೆಂಟ್ರಲ್ ಡ್ರಗ್ ರಿಸರ್ಚ್ ಇನ್ಸಟಿಟ್ಯೂಟ್ (ಸಿಡಿಆರ್ಐ)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ಟೀಫನ್ ಅವರ ಸಹೋದರಿ ಕೂಡ ಲಕ್ನೋ ಶಾಲೆಯಲ್ಲಿ ಕಲಿಯುತ್ತಿದ್ದರು. ಸ್ಟೀಫನ್ ಅವರು ಕೂಡ ತಮ್ಮ ಪುಸ್ತಕ ಮೈ ಬ್ರೀಫ್ ಹಿಸ್ಟರಿಯಲ್ಲಿ ತಮ್ಮ ಹಾಗೂ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಂಬಂಧ ಕುರಿತು ಸವಿವರವಾಗಿ ತಿಳಿಸಿದ್ದಾರೆ. ಈ ಪುಸ್ತಕವನ್ನು ಬಂಟಮ್ ಪ್ರೆಸ್ ಪ್ರಕಟಿಸಿದೆ. ಇದೇ ವೇಳೆ ಅವರು, ಶ್ರೀನಗರ, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಅಲ್ಲಿ ಹೌಸ್ಬೋಟ್ನಲ್ಲಿ ಇದ್ದಿದ್ದರ ಕುರಿತು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅವರು ಆಕ್ಸಫರ್ಡ್ ಯುನಿವರ್ಸಿಟಿಗೆ ಅರ್ಜಿ ಹಾಕುವ ತಯಾರಿಗೆ ಮುನ್ನ ಅಂದರೆ 1959ಕ್ಕೆ ಮುಂಚಿನ ಕಥೆಯಾಗಿದೆ.
ಇದನ್ನೂ ಓದಿ..ಈ ವಾರಾಂತ್ಯದಲ್ಲಿ ಆಕಾಶದಿಂದ ಭೂಮಿಗೆ ಬೀಳಲಿದೆ 38 ವರ್ಷದ ಹಿಂದಿನ ನಾಸಾ ಉಪಗ್ರಹ
ಭಾರತದ ಕಡೆಯ ಭೇಟಿ: ಹಾಕಿಂಗ್ ಕಡೆಯದಾಗಿ ಭಾರತಕ್ಕೆ 2001ರಲ್ಲಿ ಕಾನ್ಫರೆನ್ಸ್ ಸಲುವಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿ ಆಗಿದ್ದ ಕೆ ಆರ್ ನಾರಾಯಣನ್ ಅವರನ್ನು ಭೇಟಿ ಮಾಡಿದ್ದ ಅವರು, ಮುಂಬೈ ಮತ್ತು ದೆಹಲಿಯಲ್ಲಿ ಉಪನ್ಯಾಸ ನೀಡಿದ್ದರು. ಇನ್ನು, ಅವರ ಲಕ್ನೋ ನೆನಪಿನ ಕುರಿತು ಮಾತನಾಡಿರುವ ಲಕ್ನೋದ ಪ್ರಾದೇಶಿಕ ವಿಜ್ಞಾನ ನಗರದ ನಿರ್ದೇಶಕ ಮೊಯಿನುದ್ದೀನ್ ಅನ್ಸಾರಿ ಅವರು, ಮೂರು ವರ್ಷದ ಹಿಂದೆ ಸೈನ್ಸ್ ಸಿಟಿಯಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವೇಳೆ ಸ್ಟಿಫನ್ ಹಾಕಿಂಗ್ ಅವರ ಕುರಿತು ಸಂಪೂರ್ಣ ವಿವರಣೆಯನ್ನು ಪ್ರದರ್ಶಿಸಲಾಗಿತ್ತು. ಆದರೆ, ಈಗ ಅದನ್ನು ತೆಗೆದು ಹಾಕಲಾಗಿದೆ. ಆದರೆ, ವಿಜ್ಞಾನ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿದಾಗ ಸ್ಟೀಫನ್ ಹಾಕಿಂಗ್ ಅವರ ಜೀವನ ಚರಿತ್ರೆ ಕುರಿತಾದ ಶೋವನ್ನು ನಾವು ಪ್ರದರ್ಶಿಸುತ್ತೇವೆ ಎಂದು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
1942 ಜ. 8ರಂದು ಜನಿಸಿದ ಸ್ಟೀಫನ್ ಹಾಕಿಂಗ್ ತಮ್ಮ 21ನೇ ವಯಸ್ಸಿನಲ್ಲಿ ಮೋಟಾರ್ ನ್ಯೂರಾನ್ ಸಮಸ್ಯೆಗೆ ಒಳಗಾದರು. ಈ ವೇಳೆ ಅವರನ್ನು ಪರೀಕ್ಷಿಸಿದ ವೈದ್ಯರು, ಅವರು ಕೇವಲ ಕೆಲ ಕಾಲ ಮಾತ್ರ ಬದುಕುತ್ತಾರೆ ಎಂದಿದ್ದರು. ಆದರೆ, ಅವರು ನಿರೀಕ್ಷೆಗೂ ಮೀರಿದ ಕಾಲ ಬಾಳಿ ಬದುಕಿದರು. ಅವರು ಸಾವನ್ನಪ್ಪುವಾಗ ಅವರಿಗೆ 76 ವರ್ಷ ವಯಸ್ಸಾಗಿತ್ತು. ವ್ಹೀಲ್ಚೇರ್ ಮೇಲೆ ಕುಳಿತು ಭೌತವಿಜ್ಞಾನದ ಕುರಿತು ಸಂಶೋಧನೆ ನಡೆಸಿದ್ದು, ಈ ಕುರಿತು ಜಗತ್ತಿಗೂ ಪರಿಚಯಿಸಿದರು. 20 ಮತ್ತು 21ನೇ ಶತಮಾನದ ಪ್ರೇರಣಾದಾಯಕ ವ್ಯಕ್ತಿಗಳಲ್ಲಿ ಸ್ಟೀಫನ್ ಹಾಕಿಂಗ್ ಕೂಡ ಒಬ್ಬರಾಗಿದ್ದಾರೆ.
ಇದನ್ನೂ ಓದಿ: ತಾಯಿಯ ಅಪಘಾತದಿಂದಲೇ ಪ್ರೇರಣೆ: ವಿದ್ಯಾರ್ಥಿನಿಯೇ ತಯಾರಿಸಿದಳು ಸ್ಮಾರ್ಟ್ ಹೆಲ್ಮೆಟ್.. ಏನಿದರ ವಿಶೇಷತೆ ಅಂತೀರಾ?