ಸ್ಯಾನ್ ಫ್ರಾನ್ಸಿಸ್ಕೊ : ಫೇಸ್ಬುಕ್ ಬಳಕೆದಾರರು ತಮಗಿಷ್ಟವಾದ ಎಫ್ಬಿ ರೀಲ್ಸ್ಗಳು ತಮಗೆ ಕಾಣಿಸುವ ಹಾಗೆ ಸೆಟಿಂಗ್ ಮಾಡಿಕೊಳ್ಳಬಹುದಾದ ಹೊಸ ಪರ್ಸನಲೈಸೇಶನ್ ಕಂಟ್ರೋಲ್ಗಳನ್ನು ಮೆಟಾ ಅಳವಡಿಸಿದೆ. ಯಾವ ರೀತಿಯ ರೀಲ್ಸ್ಗಳನ್ನು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ನೋಡಲು ಬಯಸುತ್ತೇವೆ ಎಂಬುದನ್ನು ಆಧರಿಸಿ ಬಳಕೆದಾರರು ಸೆಟಿಂಗ್ ಮಾಡಿಕೊಳ್ಳಬಹುದು. ಅಂದರೆ ತಮ್ಮ ಅಭಿರುಚಿಗೆ ಸರಿಹೊಂದುವ, ಉಪಯೋಗವಾಗುವಂಥ ವೀಡಿಯೊಗಳು ಹೆಚ್ಚಾಗಿ ಕಾಣಿಸುವಂತೆ ಮಾಡಿಕೊಳ್ಳಬಹುದು.
ಫೇಸ್ಬುಕ್ನಲ್ಲಿ ಮೇಲ್ಭಾಗದ ವಾಚ್ ಟ್ಯಾಬ್ನಲ್ಲಿ ರೀಲ್ಸ್ಗಳನ್ನು ಸೇರಿಸುವ ಮೂಲಕ ಅವು ಬಳಕೆದಾರರಿಗೆ ಸುಲಭವಾಗಿ ಸಿಗುವಂತೆ ಮಾಡುತ್ತಿದ್ದೇವೆ ಮತ್ತು ಹೊಸ ಕಂಟ್ರೋಲ್ಗಳನ್ನು ಅಳವಡಿಸಿದ್ದೇವೆ. ಈ ಕಂಟ್ರೋಲ್ಗಳ ಮುಖಾಂತರ ನೀವು ಯಾವ ರೀತಿಯ ಕಂಟೆಂಟ್ ಅನ್ನು ಹೆಚ್ಚು ಅಥವಾ ಕಡಿಮೆ ನೋಡಲು ಬಯಸುತ್ತೀರಿ ಎಂಬ ಬಗ್ಗೆ ನಮಗೆ ಫೀಡ್ಬ್ಯಾಕ್ ನೀಡಬಹುದು ಎಂದು ಮೆಟಾ ಸಿಇಓ ಮಾರ್ಕ್ ಜುಕರ್ಬರ್ಗ್ ಮಂಗಳವಾರ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.
ಹೊಸ ಕಂಟ್ರೋಲ್ಗಳ ಮೂಲಕ ಇನ್ಉ ಮುಂದೆ ಬಳಕೆದಾರರು ರೀಲ್ಸ್ಗಳನ್ನು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಸ್ಕ್ರೋಲ್ ಮಾಡಬಹುದು ಮತ್ತು ಕಂಟೆಂಟ್ ಕ್ರಿಯೇಟರ್ಗಳು ರಚಿಸಿದ ಉದ್ದನೆಯ ವೀಡಿಯೊಗಳನ್ನು ಸಹ ನೋಡಬಹುದು. "ಫೇಸ್ಬುಕ್ ವಾಚ್ನ ಮುಖ್ಯ ನ್ಯಾವಿಗೇಶನ್ನ ಮೇಲ್ಭಾಗದಲ್ಲಿ ನಾವು ರೀಲ್ಸ್ಗಳನ್ನು ಅಳವಡಿಸಿದ್ದೇವೆ. ಇದರಿಂದ ಬಳಕೆದಾರರು ಸುಲಭವಾಗಿ ರೀಲ್ಸ್ಗಳನ್ನು ನೋಡಲು ಆರಂಭಿಸಬಹುದು. ನಿರ್ದಿಷ್ಟ ರೀಲ್ ತಯಾರಿಸಿದ ಕ್ರಿಯೇಟರ್ ಯಾರು, ಈಗಿನ ಟ್ರೆಂಡ್ ಏನಿದೆ ಎಂಬುದನ್ನು ಮತ್ತು ನಿಮಗೆ ಸರಿಹೊಂದುವ ಕಂಟೆಂಟ್ ಅನ್ನು ಈ ಮೂಲಕ ನೀವು ನೋಡಬಹುದು. ಹೆಚ್ಚುವರಿಯಾಗಿ ಇನ್ನು ಮುಂದೆ ನೀವು ಫೇಸ್ಬುಕ್ನಲ್ಲಿ ವೀಡಿಯೊಗಳನ್ನು ನೋಡುವಾಗ ರೀಲ್ಸ್ ಮತ್ತು ಉದ್ದನೆಯ ವೀಡಿಯೊಗಳ ಮಧ್ಯೆ ಅಡೆತಡೆ ಇಲ್ಲದೆ ಸ್ಕ್ರೋಲ್ ಮಾಡಬಹುದು" ಎಂದು ಬ್ಲಾಗ್ಪೋಸ್ಟ್ನಲ್ಲಿ ಮೆಟಾ ಹೇಳಿದೆ.
ಬಳಕೆದಾರರು ತಮ್ಮ ಅಭಿರುಚಿಯ ವೀಡಿಯೊಗಳು ಯಾವುವು ಎಂಬುದನ್ನು ಸೆಟ್ ಮಾಡುವ ಸಲುವಾಗಿ ವೀಡಿಯೊ ಪ್ಲೇಯರ್ನಲ್ಲಿರುವ ಥ್ರೀ ಡಾಟ್ ಮೆನುವನ್ನು ಕ್ಲಿಕ್ ಮಾಡಿ Show More or Show Less ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು. ಈ ಆಪ್ಷನ್ ಇನ್ನುಮುಂದೆ ರೀಲ್ಸ್ ಕೆಳಗಡೆ ಹಾಗೂ ಅವರ ವೀಡಿಯೊಗಳ ವಾಚ್ ಫೀಡ್ನಲ್ಲಿಯೂ ಲಭ್ಯವಾಗಲಿದೆ. Show More ಆಯ್ಕೆ ಮಾಡಿಕೊಂಡಾಗ ಅದೇ ಮಾದರಿಯ ವೀಡಿಯೊಗಳು ತಾತ್ಕಾಲಿಕವಾಗಿ ರ್ಯಾಂಕಿಂಗ್ನಲ್ಲಿ ಮೇಲೆ ಬರಲಿವೆ. ಹಾಗೆಯೇ Show Less ಎಂಬುದನ್ನು ಆಯ್ಕೆ ಮಾಡಿದಾಗ ಅಂಥ ವೀಡಿಯೊಗಳು ಕಾಣಿಸುವುದು ಕಡಿಮೆಯಾಗುತ್ತದೆ.
ರೀಲ್ಸ್ ವೀಡಿಯೊ ಪ್ಲೇಯರ್ನಲ್ಲಿ ಮೆಟಾ ಇನ್ನು ಮುಂದೆ ಹೊಸ 'contextual labels' ಕೂಡ ಅಳವಡಿಸಿದೆ. ಅಂದರೆ ನಿರ್ದಿಷ್ಟ ಬಳಕೆದಾರನೊಬ್ಬನಿಗೆ ನಿರ್ದಿಷ್ಟ ರೀತಿಯ ರೀಲ್ಸ್ ಯಾಕೆ ಕಾಣಿಸುತ್ತಿವೆ ಎಂಬುದನ್ನು ಇದು ಹೇಳುತ್ತದೆ. ಉದಾಹರಣೆಗೆ- ಬಳಕೆದಾರನ ಫ್ರೆಂಡ್ ಒಬ್ಬಾತ ಆ ವೀಡಿಯೊ ಲೈಕ್ ಮಾಡಿದ್ದರಿಂದ ಅದನ್ನು ನಿಮಗೂ ತೋರಿಸಲಾಗುತ್ತಿದೆ ಎಂಬ ರೀತಿಯ ಮಾಹಿತಿ ನೀಡಲಾಗುತ್ತದೆ.
ಇದನ್ನೂ ಓದಿ : ಆಂಡ್ರಾಯ್ಡ್ ಪ್ರಕರಣ: ಸಿಸಿಐ ವಿಧಿಸಿದ್ದ 1338 ಕೋಟಿ ರೂ. ದಂಡ ಪಾವತಿಸಿದ ಗೂಗಲ್