ಚೆನ್ನೈ: ಇವೋಚೆಫ್ (EVOCHEF) ಒಂದು ನವೀನ ಮತ್ತು ಸ್ಮಾರ್ಟ್ ಕಿಚನ್ ಆಟೊಮೇಷನ್ ಕಂಪನಿಯಾಗಿದ್ದು, ಅತ್ಯಾಧುನಿಕ ಸ್ಮಾರ್ಟ್ ಮತ್ತು ಅನನ್ಯ ಕೊಡುಗೆಗಳೊಂದಿಗೆ ಅಡುಗೆ ಮನೆಯನ್ನು ಪ್ರವೇಶಿಸಲು ಸಿದ್ಧವಾಗಿದೆ. ಈಗ ಇದೇ ಮೊದಲ ಬಾರಿಗೆ, ಅತಿ ವಿಶಿಷ್ಟವಾದ ಇಸಿ ಫ್ಲಿಪ್ (EC FLIP) ಹೆಸರಿನ ದೋಸೆ ಮೇಕರ್ ಯಂತ್ರವನ್ನು ಇಂದು ಮಾರುಕಟ್ಟೆಗೆ ತರಲು ಕಂಪನಿ ಸಜ್ಜಾಗಿದೆ.
ಇಸಿ ಫ್ಲಿಪ್ ಸ್ಮಾರ್ಟ್ ದೋಸೆ ಯಂತ್ರ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಆಯತಾಕಾರದ ದೋಸೆಗಳನ್ನು ತಯಾರಿಸುವ ಮೂಲಕ ಆಹಾರ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದೆ. ಸಾಮಾನ್ಯವಾಗಿ ನಮ್ಮ ದೋಸೆಗಳು ಗುಂಡಗಿದ್ದರೆ ಈ ಯಂತ್ರ ಚೌಕಾಕಾರದ ದೋಸೆಗಳನ್ನು ತಯಾರಿಸಬಲ್ಲದು. ಅಡುಗೆ ಮಾಡಲು ಹೆಚ್ಚು ಸ್ಥಳ ಮತ್ತು ಸಮಯ ಇಲ್ಲದ ಕೆಲಸ ಮಾಡುವ ವೃತ್ತಿಪರರಿಗೆ ಇಸಿ ಫ್ಲಿಪ್ ಸೂಕ್ತವಾಗಿದೆ. ಕೇವಲ 3 ಸುಲಭ ಹಂತಗಳಲ್ಲಿ ದೋಸೆ ತಯಾರಿಸುವ ಮೂಲಕ ಜೀವನವನ್ನು ಸುಲಭಗೊಳಿಸುವುದು ಇಸಿ ಫ್ಲಿಪ್ನ ಏಕೈಕ ಉದ್ದೇಶವಂತೆ.
ಕ್ಲಿಕ್, ಲೋಡ್ ಮಾಡಿ - ತಿನ್ನಿ!: ಸ್ಟೌ ಹೊತ್ತಿಸುವುದು, ಅಡುಗೆಯ ನಂತರ ಪಾತ್ರೆ ತೊಳೆಯುವುದು ಮತ್ತು ದೋಸೆ ತಯಾರಿಸಲು ಅಡುಗೆಮನೆಯ ಅಗತ್ಯ ಈ ಎಲ್ಲ ಕೆಲಸಗಳನ್ನು ಇಸಿ ಫ್ಲಿಪ್ ನಿವಾರಣೆ ಮಾಡುತ್ತದೆ. ಈಗ, ಯಾರಾದರೂ ತಮ್ಮ ನೆಚ್ಚಿನ ದೋಸೆಗಳನ್ನು ಎಲ್ಲಿ ಬೇಕಾದರೂ ಮಾಡಬಹುದು.
ಇಸಿ ಫ್ಲಿಪ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಇವೊಚೆಫ್ ಸಂಸ್ಥಾಪಕ ಸೆಂಥಿಲ್ನಾಥನ್, ಅಡುಗೆಮನೆಯು ಪ್ರತಿ ಮನೆಯ ಹೃದಯವಾಗಿದೆ ಮತ್ತು ಸ್ಮಾರ್ಟ್ ಕಿಚನ್ ಭವಿಷ್ಯದ ಅಡುಗೆಮನೆಗಳಾಗಿವೆ. ನಾವು ಸಮರ್ಥ ಮತ್ತು ಬಹುಮುಖಿ ಅಡುಗೆಯೊಂದಿಗೆ ಕಿಚನ್ ಅನ್ನು ಮರುವಿನ್ಯಾಸಗೊಳಿಸಲು ಬದ್ಧರಾಗಿದ್ದೇವೆ. ಪ್ರೀಮಿಯಂ ಫಿನಿಶ್ ಮತ್ತು ಸೊಗಸಾದ ಶೈಲಿಯೊಂದಿಗೆ ಅಡುಗೆಮನೆಯ ಅಗತ್ಯಗಳನ್ನು ಇವೋಚೆಫ್ ಪೂರೈಸುತ್ತದೆ ಎಂದು ಅವರು ಹೇಳಿದ್ದಾರೆ.
ಆಕರ್ಷಕ ಬಣ್ಣಗಳಲ್ಲಿ ದೋಸೆ ಮೇಕರ್: ಗೋಲ್ಡನ್ ಬೀಜ್, ಮೆಟಾಲಿಕ್ ಆರೆಂಜ್, ಮೆಟಾಲಿಕ್ ಬ್ಲೂ ಮತ್ತು ವೈಟ್ ಹೀಗೆ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಇವೋಚೆಫ್ ದೋಸೆ ಮೇಕರ್ ಲಭ್ಯವಿದೆ. ಇವೋಚೆಫ್ ಉಪಕರಣಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ. ಇವು ಯುರೋಪಿಯನ್ ವಿನ್ಯಾಸದ ಉನ್ನತ ಗುಣಮಟ್ಟ ಹೊಂದಿದ್ದು, ಪ್ರೀಮಿಯಂ ಗುಣಮಟ್ಟದ ವಸ್ತುಗಳನ್ನು ಬಳಸಿ ಇವನ್ನು ತಯಾರಿಸಲಾಗುತ್ತದೆ.
ಇವೋಚೆಫ್ ನವೀನ ತಂತ್ರಜ್ಞಾನವು ತಯಾರಿಸಿದ ಆಹಾರದ ಗುಣಮಟ್ಟದಲ್ಲಿ ಸ್ಥಿರತೆಯನ್ನು ಖಾತ್ರಿಗೊಳಿಸುತ್ತದೆ, ಶ್ರಮವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಸಮಯವನ್ನು ಉಳಿಸುತ್ತದೆ.
ನಿಮ್ಮ ಇವೋಚೆಫ್ ಇಸಿ ಫ್ಲಿಪ್ ದೋಸೆ ಯಂತ್ರವು ಒಳಗೊಂಡಿರುವ ಸಾಧನಗಳು ಹೀಗಿವೆ: ಡಿಟ್ಯಾಚೇಬಲ್ ಬ್ಲೇಡ್ - ಒಂದು ಸ್ಪಾಟುಲಾ - ಆಯಿಲ್ ಕಂಟೇನರ್ - ರೋಲರ್ ಅನ್ನು ಸ್ವಚ್ಛಗೊಳಿಸಲು ಮೃದುವಾದ ಸ್ಕ್ರಬ್ಬರ್ - ಡಿಟ್ಯಾಚೇಬಲ್ ಹಿಟ್ಟು ವಿಭಜಕಗಳು - ಡಿಟ್ಯಾಚೇಬಲ್ 700 ಎಂಎಲ್ ಹಿಟ್ಟಿನ ಟ್ಯಾಂಕ್ ಅನ್ನು ಮುಚ್ಚಳದೊಂದಿಗೆ - ಕಲೆಕ್ಟಿಂಗ್ ಟ್ರೇ - ಒಂದು ಕೈಪಿಡಿ - ಮತ್ತು ವಾರಂಟಿ ಕಾರ್ಡ್.
ನಾನಾ ಬಗೆ ದೋಸೆ ಮಾಡುವ ಯಂತ್ರ:
ಇಸಿ ಫ್ಲಿಪ್ ಯಂತ್ರವು ಸಾದಾ ದೋಸೆಗಳಿಂದ ಹಿಡಿದು ರವಾ ದೋಸೆ, ಬಾಜ್ರಾ ದೋಸೆ ಮತ್ತು ಓಟ್ಸ್ ದೋಸೆಯವರೆಗೆ ವಿವಿಧ ರೀತಿಯ ಹಿಟ್ಟುಗಳಿಂದ ದೋಸೆ ಮಾಡಬಲ್ಲದು. ಒಮ್ಮೆ ದೋಸೆ ಮೇಕರ್‌ನಲ್ಲಿ ಆಯ್ಕೆಗಳನ್ನು ಹೊಂದಿಸಿದ ನಂತರ ಯಂತ್ರವು ಬಿಸಿ A4-ಗಾತ್ರದ ದೋಸೆಗಳನ್ನು ತಯಾರಿಸಲಾರಂಭಿಸುತ್ತದೆ.
ಹಿಟ್ಟನ್ನು ನುಣ್ಣಗೆ ಕತ್ತರಿಸಿದ ತರಕಾರಿಗಳೊಂದಿಗೆ ಬೆರೆಸುವುದು ಅಥವಾ ದಾಲ್ ಮೆಣಸಿನ ಪುಡಿ, ಚೀಸ್, ಮೇಯೊನೀಸ್ ಮತ್ತು ಚಾಕೊಲೇಟ್‌ನಂತಹ ವಿಭಿನ್ನ ಮೇಲೋಗರಗಳನ್ನು ಸೇರಿಸುವುದು ಹೀಗೆ ಹಲವಾರು ಕೆಲಸಗಳನ್ನು ಮಾಡುವುದು ಈ ಯಂತ್ರದ ವೈಶಿಷ್ಟ್ಯವಾಗಿದೆ.
ಇಸಿ ಫ್ಲಿಪ್ ವಿದ್ಯುಚ್ಛಕ್ತಿಯಿಂದ ಕೆಲಸ ಮಾಡುತ್ತದೆ. ಇವೋಚೆಫ್ 1600W ಮತ್ತು 230 V ಸಾಮರ್ಥ್ಯವಿರುವ ಮಾದರಿಯೊಂದಿಗೆ ಹೊಂದಿಕೊಳ್ಳುವ ದೇಶಗಳಿಗೆ ಯಂತ್ರವನ್ನು ರವಾನಿಸುತ್ತದೆ. ಪ್ರಪಂಚದಾದ್ಯಂತದ ಆಸಕ್ತ ಖರೀದಿದಾರರು ಇಸಿ ಫ್ಲಿಪ್ ದೋಸೆ ಯಂತ್ರವನ್ನು ವೆಬ್ಸೈಟ್ ಮೂಲಕ ಖರೀದಿಸಬಹುದು ಅಥವಾ ಇಂದಿರಾ ನಗರ, ಅಡ್ಯಾರ್, ಚೆನ್ನೈನಲ್ಲಿರುವ ಸ್ಟೋರ್‌ಗೆ ಭೇಟಿ ನೀಡಬಹುದು.
ಇದನ್ನೂ ಓದಿ: ಹೀಗೂ ಉಂಟೆ..? ಮುತ್ತಿನ ನಗರಿಯಲ್ಲಿ ಭಯಂಕರ ಬಿಸಿಲು.. ಸ್ಕೂಟರ್ ಮೇಲೆ ಗರಿಗರಿ ದೋಸೆ ಹಾಕಿದ ವ್ಯಕ್ತಿ!