ನವದೆಹಲಿ: ಹಿಂದಿನ ಟ್ವಿಟರ್ ಆಗಿದ್ದ 'ಎಕ್ಸ್' ಅನ್ನು ಅದರ ಮಾಲೀಕ, ವಿಶ್ವದ ನಂ.1 ಧನಿಕ ಎಲಾನ್ ಮಸ್ಕ್ ಪ್ರಯೋಗಶಾಲೆಯಂತೆ ಬಳಸುತ್ತಿರುವುದು ಕೆಲ ನಿರ್ಧಾರಗಳಿಂದ ಗೊತ್ತಾಗುತ್ತಿದೆ. ಇದೀಗ ಮಸ್ಕ್ ಮತ್ತೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಸಾಮಾಜಿಕ ವೇದಿಕೆಯಲ್ಲೇ ಸುದ್ದಿಗಳನ್ನು ಪ್ರಕಟಿಸಲು ಪತ್ರಕರ್ತರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
-
If you’re a journalist who wants more freedom to write and a higher income, then publish directly on this platform!
— Elon Musk (@elonmusk) August 21, 2023 " class="align-text-top noRightClick twitterSection" data="
">If you’re a journalist who wants more freedom to write and a higher income, then publish directly on this platform!
— Elon Musk (@elonmusk) August 21, 2023If you’re a journalist who wants more freedom to write and a higher income, then publish directly on this platform!
— Elon Musk (@elonmusk) August 21, 2023
ಸುದ್ದಿಗಳ ಕುರಿತಾದ ಪ್ರಮುಖಾಂಶ, ಅದರ ಪಠ್ಯ, ಪೋಸ್ಟ್ಗಳನ್ನು ಎಕ್ಸ್ನಿಂದ ಅಳಿಸಿ ಹಾಕುತ್ತಿರುವ ನಡುವೆಯೇ ಮಸ್ಕ್ ನೇರವಾಗಿ ಇಲ್ಲಿಯೇ ಸುದ್ದಿಗಳನ್ನು ಪ್ರಕಟಿಸಲು ಪತ್ರಕರ್ತರಿಗೆ ಅವಕಾಶ ನೀಡಿರುವುದು ಕುತೂಹಲ ಮೂಡಿಸಿದೆ. ಸುದ್ದಿಗಳನ್ನು ಪ್ರಕಟಿಸುವಷ್ಟು ಅಗತ್ಯ ಜಾಗ ಎಕ್ಸ್ನಲ್ಲಿ ಇಲ್ಲವಾದರೂ, ಅದಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಮೈಕ್ರೋಬ್ಲಾಗಿಂಗ್ ಬೆಳೆಯುವ ದೂರದೃಷ್ಟಿ ಇದರ ಹಿಂದಿದೆ ಎಂದು ವಿಶ್ಲೇಷಿಸಲಾಗಿದೆ.
ನೀವು ಬರೆಯಲು ಹೆಚ್ಚಿನ ಸ್ವಾತಂತ್ರ್ಯ ಮತ್ತು ಹೆಚ್ಚು ಆದಾಯ ಗಳಿಸಲು ಬಯಸುವ ಪತ್ರಕರ್ತರಾಗಿದ್ದರೆ, ಈ ವೇದಿಕೆಯಲ್ಲಿ ನೇರವಾಗಿ ಸುದ್ದಿಗಳನ್ನು ಪ್ರಕಟಿಸಿ ಎಂದು ಎಲಾನ್ ಮಸ್ಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಒಬ್ಬ ಫಾಲೋವರ್ ಪ್ರತಿಕ್ರಿಯಿಸಿ, ಹಾಗಾದರೆ ಸುದ್ದಿಗಳನ್ನು ಪ್ರಕಟಿಸುವ ಉತ್ತಮ ಸಾಧನವನ್ನು ನೀಡಿ ಎಂದು ಕೋರಿದ್ದಾರೆ. ಇದಕ್ಕೆ ಮಸ್ಕ್ ಸದ್ಯಕ್ಕೆ ಪ್ರತಿಕ್ರಿಯಿಸಿಲ್ಲ.
-
Block is going to be deleted as a “feature”, except for DMs
— Elon Musk (@elonmusk) August 18, 2023 " class="align-text-top noRightClick twitterSection" data="
">Block is going to be deleted as a “feature”, except for DMs
— Elon Musk (@elonmusk) August 18, 2023Block is going to be deleted as a “feature”, except for DMs
— Elon Musk (@elonmusk) August 18, 2023
ಸುದ್ದಿ ಮಾಧ್ಯಮವಾಗುತ್ತಾ X?: ಎಲಾನ್ ಮಸ್ಕ್ ಎಕ್ಸ್ ಮೈಕ್ರೋಬ್ಲಾಗಿಂಗ್ ಅನ್ನು ಸುದ್ದಿ, ಲೇಖನಗಳ ಮಾಧ್ಯಮವಾಗಿ ಬದಲಿಸಲು ಯೋಚಿಸಿದ್ದಾಗಿ ಕಂಡುಬಂದಿದೆ. ಸುದ್ದಿಗಳನ್ನು ಎಕ್ಸ್ನಲ್ಲೇ ಪ್ರಕಟಿಸಿ ಎಂದು ನೇರವಾಗಿ ಅವರೇ ಕೋರುವ ಮೂಲಕ ಎಕ್ಸ್ ಮತ್ತೊಂದು ಬದಲಾವಣೆಗೆ ಸಜ್ಜಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಸದ್ಯ ಎಕ್ಸ್ನಲ್ಲಿ ಸುದ್ದಿ, ಲೇಖನಗಳ ಕುರಿತ ಲಿಂಕ್ಗಳು ಮಾತ್ರ ಲಭ್ಯವಿವೆ. ಅದರ ಪಠ್ಯ, ಪ್ರಮುಖಾಂಶ, ಹೆಡ್ಲೈನ್ಗಳನ್ನು ಅಳಿಸಿ ಹಾಕಲಾಗುತ್ತಿದೆ. ಈಗ ಸುದ್ದಿ ಪ್ರಕಟಕ್ಕೆ ಅವಕಾಶ ನೀಡುವ ಮೂಲಕ ವೈಯಕ್ತಿಕ ಪೋಸ್ಟ್ಗಳನ್ನು ಕಡಿಮೆ ಮಾಡುವ ಉದ್ದೇಶವಿದೆಯಾ ಎಂಬುದು ಪ್ರಶ್ನೆಯಾಗಿದೆ.
ಕೆಲ ದಿನಗಳ ಹಿಂದೆ, X ನಲ್ಲಿ ಸಂದೇಶಗಳನ್ನು ನೇರವಾಗಿ ನಿರ್ಬಂಧಿಸುವ(ಬ್ಲಾಕ್) ಅವಕಾಶವನ್ನು ತೆಗೆದು ಹಾಕಲಾಗಿತ್ತು. ಇದು ಟೀಕೆಗೆ ಗುರಿಯಾಗಿತ್ತು. ಯಾರಾದರೂ ವೈಯಕ್ತಿಕ ಪೋಸ್ಟ್ ಮಾಡಿ ಅದನ್ನು ನಮಗೆ ಟ್ಯಾಗ್ ಮಾಡಿದಾಗ, ಅದು ನಮಗೆ ಬೇಡವಾದಲ್ಲಿ ಆ ಮೆಸೆಜ್ ಅನ್ನು ಬ್ಲಾಕ್ ಮಾಡುವ ಅವಕಾಶ ಬಳಕೆದಾರರಿಂದ ಹಿಂಪಡೆಯಲಾಗಿದೆ. ಈ ನಿರ್ಧಾರ ಅನೇಕ ಬಳಕೆದಾರರನ್ನು ಕೆರಳಿಸಿತ್ತು.
ಬಳಕೆದಾರರು ಸಂವಾದಿಸುವ, ವೀಕ್ಷಿಸುವ ಮತ್ತು ಖಾತೆ ಫಾಲೋ ಬಾಲ್ಕ ಮಾಡುವ ಅವಕಾಶ ಇರುವುದಿಲ್ಲ. ಬ್ಲಾಕ್ ಬದಲಿಗೆ 'ಮ್ಯೂಟ್' ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಡಿಎಂಗಳನ್ನು ಹೊರತುಪಡಿಸಿ ಬ್ಲಾಕ್ ಅನ್ನು ಮ್ಯೂಟ್ ಆಗಿ ಬಳಸಬಹುದು ಎಂದು ಮಸ್ಕ್ ಹೇಳಿದ್ದರು. ಇದು ಅರ್ಥವಿಲ್ಲದ ಬದಲಾವಣೆ ಎಂದು ಬಳಕೆದಾರರು ಟೀಕಿಸಿದ್ದರು. (IANS)
ಇದನ್ನೂ ಓದಿ: ಕ್ಲರಿಕಲ್ ನೌಕರಿಗಳಿಗೆ ಕುತ್ತು ತರಬಹುದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ: ಸಂಶೋಧನಾ ವರದಿ