ಟೋಕಿಯೊ (ಜಪಾನ್): ''ನಮ್ಮ ಸೌರವ್ಯೂಹದಲ್ಲಿ ನೆಪ್ಚೂನ್‌ನ ಹಿಂದೆ ಇರುವ 'ಪ್ಲಾನೆಟ್ ನೈನ್' ಭೂಮಿಯ ಸ್ವರೂಪಗಳನ್ನು ಹೋಲುತ್ತದೆ'' ಎಂದು ಜಪಾನಿನ ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಆಸ್ಟ್ರೋನಾಮಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಪ್ಲೂಟೊವನ್ನು 2006ರಲ್ಲಿ ಕುಬ್ಜ ಗ್ರಹವೆಂದು ಘೋಷಿಸಿದ ನಂತರ 'ಪ್ಲಾನೆಟ್ ನೈನ್' ಎಂದು ಕರೆಯಲ್ಪಡುವ ಅಸ್ತಿತ್ವದ ಕುರಿತು ಸದ್ಯ ಚರ್ಚೆ ನಡೆಯುತ್ತಿದೆ. ಒಸಾಕಾದ ಕಿಂಡೈ ವಿಶ್ವವಿದ್ಯಾಲಯದ ಸಂಶೋಧಕರಾದ ಸೋಫಿಯಾ ಲೈಕಾವ್ಕಾ ಮತ್ತು ಜಪಾನ್ ನ್ಯಾಷನಲ್‌ನ ತಕಾಶಿ ಇಟೊ ಖಗೋಳ ವೀಕ್ಷಣಾಲಯವು ಕೈಪರ್ ಬೆಲ್ಟ್‌ನಲ್ಲಿ ಭೂಮಿಯ ತರಹದ ಗ್ರಹದ ಉಪಸ್ಥಿತಿಯನ್ನು ಕಂಡುಹಿಡಿದಿದೆ. ನೆಪ್ಚೂನ್‌ನ ಕಕ್ಷೆಯ ಆಚೆಗೆ ಚಾಚಿಕೊಂಡಿರುವ ಡೋನಟ್-ಆಕಾರದ ಉಂಗುರ ಇದೆ.
ಸಂಶೋಧಕರು ಹೇಳಿದ್ದೇನು?: ಕೈಪರ್ ಬೆಲ್ಟ್ ಎಂಬುದು ಅಂತರತಾರಾ ವಲಯವಾಗಿದೆ. ಇದರಲ್ಲಿ ಕುಬ್ಜ ಗ್ರಹಗಳು, ಕ್ಷುದ್ರ ಗ್ರಹಗಳು, ಇಂಗಾಲದ ದ್ರವ್ಯರಾಶಿಗಳು ಮತ್ತು ಮಿಥೇನ್ ಮತ್ತು ಅಮೋನಿಯದಂತಹ ಹಿಮಾವೃತ ಬಾಷ್ಪಶೀಲ ಅಂಶಗಳಿಂದ ಕೂಡಿದ ಬೃಹತ್ ಉಂಗುರವಾಗಿದೆ. "ಭೂಮಿಯಂತಹ ಗ್ರಹಗಳ ಅಸ್ತಿತ್ವದ ಬಗ್ಗೆ ನಾವು ಊಹಿಸುತ್ತೇವೆ. ಸೌರವ್ಯೂಹದ ಆರಂಭದಲ್ಲಿ ಹಲವು ಗ್ರಹಗಳ ಸ್ವರೂಪಗಳು ಅಸ್ತಿತ್ವದಲ್ಲಿದ್ದವು. ಇದರಿಂದ ದೂರದ ಕೈಪರ್ ಬೆಲ್ಟ್‌ನಲ್ಲಿ ಇರುವ ಗ್ರಹವು ಭೂಮಿಯಂತೆ ಕಾಣಿಸುತ್ತಿದೆ'' ಎಂದು ಸಂಶೋಧಕರು ಹೇಳಿದ್ದಾರೆ.
ಸೂರ್ಯನಿಂದ 500 ಅಸ್ಟ್ರಾನಾಮಿಕಲ್ ಯೂನಿಟ್ ದೂರದಲ್ಲಿದೆ ಪ್ಲಾನೆಟ್ ನೈನ್: ಸಂಶೋಧಕರ ಪ್ರಕಾರ, ಪ್ಲಾನೆಟ್ ನೈನ್ ಭೂಮಿಗಿಂತ ಸುಮಾರು 1.5 ರಿಂದ 3 ಪಟ್ಟು ದ್ರವ್ಯರಾಶಿಯನ್ನು ಹೊಂದಿದೆ. ಜೊತೆಗೆ ಸೂರ್ಯನಿಂದ 500 ಅಸ್ಟ್ರಾನಾಮಿಕಲ್ ಯೂನಿಟ್ (astronomical units) ದೂರದಲ್ಲಿದೆ. ಕೈಪರ್ ಬೆಲ್ಟ್ ಲಕ್ಷಾಂತರ ಹೆಪ್ಪುಗಟ್ಟಿದ ವಸ್ತುಗಳನ್ನು ಹೊಂದಿದೆ. ಇದನ್ನು ಟ್ರಾನ್ಸ್-ನೆಪ್ಚೂನಿಯನ್ ಆಬ್ಜೆಕ್ಟ್ಸ್ (TNO) ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ನೆಪ್ಚೂನ್ ಹೊರಗೆ ಇವೆ. ಟ್ರಾನ್ಸ್-ನೆಪ್ಚೂನಿಯನ್ ಆಬ್ಜೆಕ್ಟ್ಸ್ ಸೌರವ್ಯೂಹದ ರಚನೆಯ ಅವಶೇಷಗಳಾಗಿವೆ ಎಂದು ನಂಬಲಾಗಿದೆ. ಕಲ್ಲು, ಅಸ್ಫಾಟಿಕ ಕಾರ್ಬನ್, ನೀರು ಮತ್ತು ಮಿಥೇನ್‌ನಂತಹ ಐಸ್‌ಗಳ ಮಿಶ್ರಣಗಳನ್ನು ಒಳಗೊಂಡಿರುತ್ತದೆ.
"ದೂರದ ಮತ್ತು ಇಳಿಜಾರಿನ ಕಕ್ಷೆಯಲ್ಲಿ ನೆಲೆಗೊಂಡಿರುವ ಭೂಮಿಯಂತಹ ಗ್ರಹವು ದೂರದ ಕೈಪರ್ ಬೆಲ್ಟ್‌ನ ಮೂರು ಮೂಲಭೂತ ಗುಣಲಕ್ಷಣಗಳನ್ನು ವಿವರಿಸುತ್ತದೆ ಎಂದು ನಾವು ನಿರ್ಧರಿಸಿದ್ದೇವೆ. ನೆಪ್ಚೂನ್‌ನ ಗುರುತ್ವಾಕರ್ಷಣೆಯ ಪ್ರಭಾವವನ್ನು ಮೀರಿದ ಕಕ್ಷೆಗಳೊಂದಿಗೆ ಟ್ರಾನ್ಸ್-ನೆಪ್ಚೂನಿಯನ್ ಆಬ್ಜೆಕ್ಟ್ಸ್ ಹೆಚ್ಚಿನ ಇಳಿಜಾರಿನ ವಸ್ತುಗಳ ಗಮನಾರ್ಹ ಸಂಖ್ಯೆ ಮತ್ತು ವಿಚಿತ್ರವಾದ ಕಕ್ಷೆಗಳೊಂದಿಗೆ ಕೆಲವು ವಿಪರೀತ ವಸ್ತುಗಳ ಅಸ್ತಿತ್ವದಲ್ಲಿವೆ" ಎಂದು ಅವರು ಹೇಳಿದರು. "ಟಿಎನ್‌ಒ ಕಕ್ಷೆಯು ಸೌರವ್ಯೂಹದ ಹೊರಗೆ ಕಂಡುಬರದ ಗ್ರಹಗಳ ಉಪಸ್ಥಿತಿಯನ್ನು ಸೂಚಿಸುತ್ತದೆ" ಎಂದರು. ಈ ವಸ್ತುಗಳಲ್ಲಿ ಕೆಲವು ವಿಚಿತ್ರವಾದ ಕಕ್ಷೆಗಳನ್ನು ಹೊಂದಿವೆ. ಅವುಗಳು ಗುರುತ್ವಾಕರ್ಷಣೆಯಿಂದ ಹತ್ತಿರದ ಯಾವುದೋ ಒಂದರಿಂದ ಪ್ರಭಾವಿತವಾಗಿವೆ ಎಂದು ಸೂಚಿಸುತ್ತದೆ.(ಐಎಎನ್ಎಸ್)
ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡ್ ಆದ ಸ್ಥಳದ ಚಿತ್ರ ಸೆರೆಹಿಡಿದ ನಾಸಾ