ETV Bharat / science-and-technology

ಊಟದೊಂದಿಗೆ ನಿಯಮಿತವಾಗಿ ವೈನ್ ಕುಡಿಯುವುದರಿಂದ 2 ರೀತಿಯಲ್ಲಿ ಮಧುಮೇಹ ನಿಯಂತ್ರಿಸಬಹುದಂತೆ!

ಊಟದೊಂದಿಗೆ ನಿಯಮಿತವಾಗಿ ವೈನ್ ಕುಡಿಯುವುದರಿಂದ ಎರಡು ರೀತಿಯಲ್ಲಿ ಮಧುಮೇಹ ನಿಯಂತ್ರಿಸಬಹುದು ಎಂದು ಒಂದು ಅಧ್ಯಯನ ಹೇಳಿದೆ. ಅಮೆರಿಕದಲ್ಲಿ ನಡೆದ ಸಂಶೋಧನೆಯು ನಿಯಮಿತವಾಗಿ ಮದ್ಯ ಸೇವಿಸುವುದು, ವಿಶೇಷವಾಗಿ ಊಟದೊಂದಿಗೆ ವೈನ್ ಸೇವನೆ ಮಾಡುವುದರಿಂದ 2 ರೀತಿಯ ಮಧುಮೇಹಗಳನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಹೇಳಿದೆ.

Drinking wine with meals linked to lower type 2 diabetes risk
ಊಟದೊಂದಿಗೆ ನಿಯಮಿತವಾಗಿ ವೈನ್ ಕುಡಿಯುವುದರಿಂದ ಎರಡು ರೀತಿಯ ಮಧುಮೇಹಗಳನ್ನು ನಿಯಂತ್ರಿಸಬಹುದು : ಅಧ್ಯಯನ
author img

By

Published : Mar 7, 2022, 9:44 AM IST

ನ್ಯೂಯಾರ್ಕ್​ (ಅಮೆರಿಕ): ಊಟದೊಂದಿಗೆ ನಿಯಮಿತವಾಗಿ ವೈನ್ ಕುಡಿಯುವುದರಿಂದ ಎರಡು ರೀತಿಯ ಮಧುಮೇಹಗಳನ್ನು ನಿಯಂತ್ರಿಸಬಹುದು ಎಂದು ಒಂದು ಅಧ್ಯಯನ ಹೇಳಿದೆ. ಈ ಸಂಶೋಧನೆಯು ನಿಯಮಿತವಾಗಿ ಮದ್ಯ ಸೇವಿಸುವುದು, ವಿಶೇಷವಾಗಿ ಊಟದೊಂದಿಗೆ ವೈನ್ ಸೇವನೆ ಮಾಡುವುದರಿಂದ 2 ರೀತಿಯಲ್ಲಿ ಮಧುಮೇಹ ನಿಯಂತ್ರಿಸಲು ಸಾಧ್ಯ ವಾಗುವುದು ಎಂದು ಹೇಳಿದೆ.

ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಆದರೆ, ಅಧ್ಯಯನವು ಮದ್ಯದ ನಿಯಮಿತ ಸೇವನೆಯು ಆರೋಗ್ಯಕ್ಕೆ ಲಾಭಕರ ಎಂದು ಹೇಳುತ್ತದೆ. ಮದ್ಯವು ಯಾವ ಪ್ರಮಾಣದಲ್ಲಿ ಸೇವಿಸಲ್ಪಡುತ್ತದೆ ಎಂಬುದರ ಮೇಲೆ ಅದರ ಉಪಯುಕ್ತತೆ ನಿರ್ಧರಿತವಾಗುತ್ತದೆ ಎಂದು ತುಲಾನೆ ವಿಶ್ವವಿದ್ಯಾಲಯದ ಹಾವೊ ಮಾ ಹೇಳಿದ್ದಾರೆ.

ಅತಿಯಾದ ಮದ್ಯ ಪಾನದಿಂದ ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ, ಪಾರ್ಶ್ವವಾಯು, ಸ್ತನ ಕ್ಯಾನ್ಸರ್, ಪಿತ್ತಜನಕಾಂಗದ ಕಾಯಿಲೆ, ಖಿನ್ನತೆ, ಆತ್ಮಹತ್ಯೆ, ಅಪಘಾತಗಳು ಮುಂತಾದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತೆಯೇ ವ್ಯಕ್ತಿಯ ಮದ್ಯ ಸೇವನೆ ಪ್ರಮಾಣ ಹೆಚ್ಚಾದಂತೆ ಅಪಾಯವು ಹೆಚ್ಚಾಗುತ್ತದೆ ಎಂದು ಹೇಳಿದೆ. ಕೆಲವೊಂದು ಕ್ಯಾನ್ಸರ್ ಮತ್ತು ಆರೋಗ್ಯ ಸಂಬಂಧಿ ಕಾಯಿಲೆಗೆ ಕಡಿಮೆ ಪ್ರಮಾಣದ ಮದ್ಯ ಸೇವನೆಯಿಂದ ಅಪಾಯದ ಮಟ್ಟ ಕಡಿಮೆಗೊಳಿಸಲು ಸಹಕಾರಿಯಾಗಿದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಈ ಅಧ್ಯಯನಕ್ಕಾಗಿ, ಸಂಶೋಧಕರು 3,12,400 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರು, ಎಲ್ಲರೂ ಮಧುಮೇಹ ಹೊಂದಿರುವವರಾಗಿದ್ದರು. ಹನ್ನೊಂದು ವರ್ಷಗಳ ಅಧ್ಯಯನದ ಅವಧಿಯಲ್ಲಿ ಆಹಾರ ಸೇವಿಸದೇ ಮದ್ಯಪಾನ ಮಾತ್ರ ಮಾಡುವುದನ್ನು, ಊಟದೊಂದಿಗೆ ಮದ್ಯ ಸೇವನೆ ಮಾಡುವುದಕ್ಕೆ ಹೋಲಿಸಿದಾಗ ಶೇ.14 ಪ್ರತಿಶತ ಎರಡು ರೀತಿಯ ಮಧುಮೇಹದ ಅಪಾಯದ ಮಟ್ಟವನ್ನು ನಿಯಂತ್ರಿಸುವುದಾಗಿ ಅಧ್ಯಯನ ಹೇಳಿದೆ.

ಓದಿ :Russia - Ukraine War: ರಷ್ಯಾ- ಉಕ್ರೇನ್​ ಯುದ್ಧದ ಭೀತಿ..ರಷ್ಯಾಕ್ಕೆ ಆರ್ಥಿಕ ಹೊಡೆತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.