ETV Bharat / science-and-technology

ಡಿಲೀಟ್ ಆಗ್ತಿವೆ ನಿಷ್ಕ್ರಿಯ Gmail, YouTube ಖಾತೆ! ಅಕೌಂಟ್​ ಉಳಿಸಿಕೊಳ್ಳಲು ಹೀಗೆ ಮಾಡಿ - ನಿಷ್ಕ್ರಿಯ ಜಿಮೇಲ್ ಹಾಗೂ ಯೂಟ್ಯೂಬ್​

ಗೂಗಲ್ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆ ಆರಂಭಿಸಿದೆ.

Google will delete your Gmail and YouTube accounts

author img

By

Published : Jul 23, 2023, 5:03 PM IST

ಬೆಂಗಳೂರು : ನಿಷ್ಕ್ರಿಯ ಜಿಮೇಲ್ ಹಾಗೂ ಯೂಟ್ಯೂಬ್​ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಗೂಗಲ್ ಕೆಲ ವಾರಗಳ ಹಿಂದೆ ಘೋಷಿಸಿತ್ತು. ಕನಿಷ್ಠ ಎರಡು ವರ್ಷಗಳಿಂದ ಬಳಸದ ಅಥವಾ ಸೈನ್ ಇನ್ ಮಾಡದ Google ಖಾತೆಗಳನ್ನು ಡಿಲೀಟ್ ಮಾಡಲು ಪ್ರಾರಂಭಿಸುವುದಾಗಿ ಅದು ಹೇಳಿತ್ತು. ವರದಿಯ ಪ್ರಕಾರ, ಖಾತೆಗಳನ್ನು ಡಿಲೀಟ್ ಮಾಡುವ ಬಗ್ಗೆ ಈಗ ಗೂಗಲ್ ಬಳಕೆದಾರರಿಗೆ ನೋಟಿಫಿಕೇಶನ್ ಕಳುಹಿಸಲಾರಂಭಿಸಿದೆ. ಗೂಗಲ್​ನ ಸೂಚನೆಗಳನ್ನು ಅನುಸರಿಸುವ ಮೂಲಕ ಬಳಕೆದಾರರು ತಮ್ಮ ಖಾತೆಗಳು ಡಿಲೀಟ್ ಆಗದಂತೆ ತಡೆಯಬಹುದು.

ಬಳಕೆದಾರರ ಖಾಸಗಿತನ, ಸುರಕ್ಷತೆ ಕಾಪಾಡುವ ಸಲುವಾಗಿ ಹಾಗೂ ನಿಷ್ಕ್ರಿಯ ಖಾತೆಗಳಿಂದ ಎದುರಾಗಬಹುದಾದ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೂಗಲ್ ಈ ಕ್ರಮಕ್ಕೆ ಮುಂದಾಗಿದೆ.

ಹೊಸ ನೀತಿಯು ಡಿಸೆಂಬರ್ 2023 ರಿಂದ ಜಾರಿಗೆ ಬರಲಿದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್‌ಗಳಲ್ಲಿ ಒಂದರಲ್ಲಿ ತಿಳಿಸಿದೆ. ಖಾತೆಗಳು ಡಿಲೀಟ್​ ಆಗುವಂಥ ಸಾಧ್ಯತೆಗಳಿರುವ ಬಳಕೆದಾರರನ್ನು ಎಚ್ಚರಿಸಲು ಕಂಪನಿಯು 8 ತಿಂಗಳ ಮುಂಚಿತವಾಗಿಯೇ ಎಚ್ಚರಿಕೆ ಇಮೇಲ್‌ಗಳನ್ನು ಕಳುಹಿಸುತ್ತಿದೆ. ಗೂಗಲ್​​ನ ಡಿಲೀಟ್​ ಪ್ರಕ್ರಿಯೆಯು ಜಿಮೇಲ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್, ಯೂಟ್ಯೂಬ್ ಮತ್ತು ಗೂಗಲ್ ಫೋಟೋಗಳು ಸೇರಿದಂತೆ ನಿಷ್ಕ್ರಿಯ ಖಾತೆಗಳಲ್ಲಿ ಸಂಗ್ರಹವಾಗಿರುವ ಎಲ್ಲ ಮಾಹಿತಿಯ ಮೇಲೂ ಪರಿಣಾಮ ಬೀರಲಿದೆ.

ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡಲು ಏನು ಕಾರಣ? : ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ಅಳಿಸಲು ಗೂಗಲ್ ಯೋಜಿಸುತ್ತಿದೆ. ನಿಷ್ಕ್ರಿಯವಾಗಿರುವ ಖಾತೆಗಳು ಟು ಸ್ಟೆಪ್ ವೆರಿಫಿಕೇಶನ್ ಹೊಂದಿರುವ ಸಾಧ್ಯತೆಗಳು ಸಕ್ರಿಯ ಖಾತೆಗಳಿಗಿಂತ 10 ಪಟ್ಟು ಕಡಿಮೆಯಾಗಿದೆ. ಟು ಸ್ಟೆಪ್ ವೆರಿಫಿಕೇಶನ್ ಇಲ್ಲದ ಕಾರಣದಿಂದ ಈ ಖಾತೆಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಗೂಗಲ್ ತಿಳಿಸಿದೆ.

ಒಂದು ಬಾರಿ ಬೇರೆಯವರು ಒಬ್ಬರ ಜಿಮೇಲ್​ ಅನ್ನು ಹ್ಯಾಕ್ ಮಾಡಿದರೆ, ಅದನ್ನು ಐಡೆಂಟಿಟಿ ನಕಲಿನಿಂದ ಹಿಡಿದು ಸ್ಪ್ಯಾಮ್ ಕಳುಹಿಸುವವರೆಗೆ ಯಾವುದಕ್ಕಾದರೂ ಬಳಸಬಹುದು. ನಿಷ್ಕ್ರಿಯ ಖಾತೆಗಳನ್ನು ಅಳಿಸುವುದು ಈ ರೀತಿಯ ದಾಳಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಗೂಗಲ್ ಹೇಳಿದೆ.

"ಮರೆತುಹೋದ ಅಥವಾ ಬಳಕೆಯಲ್ಲಿಲ್ಲದ ಖಾತೆಗಳು ಸಾಮಾನ್ಯವಾಗಿ ಹಳೆಯ ಅಥವಾ ಮರು-ಬಳಸಿದ ಪಾಸ್‌ವರ್ಡ್‌ಗಳನ್ನು ಹೊಂದಿರುತ್ತವೆ. ಇಂಥ ಪಾಸ್​ವರ್ಡ್​ಗಳು ಹ್ಯಾಕ್ ಆಗಿರಬಹುದು ಅಥವಾ ಅದಕ್ಕೆ ಟು ಸ್ಟೆಪ್ ವೆರಿಫಿಕೇಶನ್ ಇಲ್ಲದಿರಬಹುದು. ಹೀಗಾಗಿ ಬಳಕೆದಾರರು ಇಂಥ ಖಾತೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಕಷ್ಟ ಎಂದು ಗೂಗಲ್​​ನ ಎಂದು ಅಧಿಕೃತ ಬ್ಲಾಗ್ ಪೋಸ್ಟ್​ನಲ್ಲಿ ಹೇಳಲಾಗಿದೆ. ಗೂಗಲ್​​ ಹೊಸ ನೀತಿಯು ವೈಯಕ್ತಿಕ ಗೂಗಲ್ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಶಾಲೆಗಳು ಅಥವಾ ವ್ಯವಹಾರಗಳಂತಹ ಸಂಸ್ಥೆಗಳ ಖಾತೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಗೂಗಲ್ ಭರವಸೆ ನೀಡಿದೆ.

ನಿಮ್ಮ ಗೂಗಲ್ ಖಾತೆಯನ್ನು ಸಕ್ರಿಯವಾಗಿರಿಸುವುದು ಹೇಗೆ? : ಕಳೆದ ಹಲವಾರು ತಿಂಗಳು ಅಥವಾ ವರ್ಷಗಳಿಂದ ಬಳಸದ ಗೂಗಲ್ ಖಾತೆಯನ್ನು ಹೊಂದಿದ್ದರೆ ಮತ್ತು ಡಿಲೀಟ್ ಆಗದಂತೆ ತಡೆಯಲು ಏನು ಮಾಡಬಹುದು ಎಂಬ ಮಾಹಿತಿ ಇಲ್ಲಿದೆ. ಎರಡೂ ವರ್ಷಕ್ಕಿಂತಲೂ ಹೆಚ್ಚು ಅವಧಿಯಿಂದ ನಿಷ್ಕ್ರಿಯವಾದ ಖಾತೆ ಇದ್ದರೆ ಮೊದಲಿಗೆ ಅದಕ್ಕೆ ಸೈನ್ ಇನ್ ಮಾಡಿ ಹಾಗೂ ಕೆಳಗಿನ ಕ್ರಮಗಳನ್ನು ಅನುಸರಿಸಿ.

  • ಇಮೇಲ್​ಗಳನ್ನು ಓಪನ್ ಮಾಡಿ ಓದಿ ಅಥವಾ ಯಾರಿಗಾದರೂ ಇಮೇಲ್ ಕಳುಹಿಸಿ
  • ಗೂಗಲ್​ ಡ್ರೈವ್ ಅನ್ನು ಬಳಕೆ ಮಾಡಿ
  • ಯೂಟ್ಯೂಬ್​ನಲ್ಲಿ ವೀಡಿಯೊ ವೀಕ್ಷಿಸಿ
  • ಖಾತೆಯ ಮೂಲಕ Google Play Store ನಲ್ಲಿ ಯಾವುದಾದರೂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
  • ಗೂಗಲ್ ಸರ್ಚ್ ಬಳಸುವುದು
  • ಥರ್ಡ್​ ಪಾರ್ಟಿ ಅಪ್ಲಿಕೇಶನ್ ಅಥವಾ ಸೇವೆಗೆ ಸೈನ್ ಇನ್ ಮಾಡಲು ಗೂಗಲ್​​ನೊಂದಿಗೆ ಸೈನ್ ಇನ್ ಅನ್ನು ಬಳಸುವುದು
  • ನೀವು ನಿಮ್ಮ ಜಿಮೇಲ್ ಖಾತೆಯ ಮೂಲಕ ಯಾವುದಾದರೂ ಅಸ್ತಿತ್ವದಲ್ಲಿರುವ ಚಂದಾದಾರಿಕೆಯನ್ನು ಹೊಂದಿದ್ದರೆ ಹಾಗೂ ಅದನ್ನು ಎರಡು ವರ್ಷಗಳಿಂದ ಬಳಸಿಲ್ಲವಾದರೂ ಅದು ಡಿಲೀಟ್ ಆಗಲ್ಲ.

ಇದನ್ನೂ ಓದಿ: 15 ದಿನಗಳಲ್ಲಿ ಶೇ 75ರಷ್ಟು ಟ್ರಾಫಿಕ್ ಕಳೆದುಕೊಂಡ Threads; ಕಾರಣ ಇಲ್ಲಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.