ETV Bharat / science-and-technology

ಕೊವ್ಯಾಕ್ಸಿನ್​ ಲಸಿಕೆಗೆ ವಿಜ್ಞಾನಿಗಳ ಬಹುಪರಾಕ್​.. ಯಾಕೆ ಗೊತ್ತಾ? - ಕೊವ್ಯಾಕ್ಸಿನ್​ ಲಸಿಕೆ ಬಗ್ಗೆ ಅಧ್ಯಯನ

ಹೈದರಾಬಾದ್​ ಮೂಲದ ಕೊವ್ಯಾಕ್ಸಿನ್ ಲಸಿಕೆ ಕ್ಷೀಣಿಸುತ್ತಿರುವ ಕೊರೊನಾ ವಿರುದ್ಧ ಬಲು ಪ್ರಭಾವಶಾಲಿ - ಅಧ್ಯಯನದಲ್ಲಿ ಬಹಿರಂಗ.

ಕೊವ್ಯಾಕ್ಸಿನ್​ ಲಸಿಕೆಗೆ ವಿಜ್ಞಾನಿಗಳ ಬಹುಪರಾಕ್​

author img

By

Published : Jul 16, 2022, 7:12 AM IST

ನವದೆಹಲಿ: ಹೈದರಾಬಾದ್​ ಮೂಲದ ಭಾರತ ಬಯೋಟೆಕ್​ ಸಂಸ್ಥೆ ರೂಪಿಸಿರುವ ಕೊವ್ಯಾಕ್ಸಿನ್​ ಲಸಿಕೆ ಕೊರೊನಾ ವೈರಸ್​ನ ಹೊಸ ತಳಿಗಳ ವಿರುದ್ಧ ಬಲವಾದ ಪ್ರತಿರಕ್ಷಣಾ ಶಕ್ತಿಯನ್ನು ನೀಡುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಲಸಿಕೆ ಪಡೆದ 6 ತಿಂಗಳವರೆಗೂ ಲಸಿಕೆ ದೇಹದಲ್ಲಿ ವೈರಸ್​ ಹರಡುವುದನ್ನು ಪ್ರತಿಬಂಧಿಸುತ್ತದೆ ಎಂಬ ಮಹತ್ವದ ವಿಚಾರವನ್ನು ಪತ್ತೆ ಮಾಡಿದ್ದಾರೆ.

ರೂಪಾಂತರ ಪಡೆದ ವೈರಸ್​ನ ಟಿ ಕೋಶಗಳ ವಿರುದ್ಧ ಲಸಿಕೆ ದೃಢವಾದ ರಕ್ಷಣೆ ನೀಡುತ್ತದೆ. ಇದು ವೈರಸ್​ನ ವೇಗವಾಗಿ ಹರಡುವ ತೀವ್ರತೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ವ್ಯಾಕ್ಸಿನೇಷನ್​ ಆದ ಕನಿಷ್ಠ 6 ತಿಂಗಳು ಕಾಲ ಲಸಿಕೆ ದೃಢವಾದ ಕೆಲಸ ಮಾಡುತ್ತದೆ ಎಂದಿದ್ದಾರೆ.

97 ಜನರ ಮೇಲೆ ಪ್ರಯೋಗ: ಫರೀದಾಬಾದ್​ನ ಟಿಎಚ್​ಎಸ್​ಟಿಐ, ದೆಹಲಿಯ ಏಮ್ಸ್​, ಫರೀದಾಬಾದ್​ನ ಇಎಸ್​ಐಸಿ ಮೆಡಿಕಲ್ ಕಾಲೇಜ್​, ನವದೆಹಲಿಯ ಎಲ್​ಎನ್​ಜೆಪಿ ಮೆಡಿಕಲ್​ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಮ್ಯುನೊಲಾಜಿ (NII)ನಲ್ಲಿ ವಿಜ್ಞಾನಿ ನಿಮೇಶ್ ಗುಪ್ತಾ ಮತ್ತು ಅವರ ತಂಡ 2 ಡೋಸ್​ ಕೊವ್ಯಾಕ್ಸಿನ್​ ಲಸಿಕೆ ಪಡೆದ 97 ಜನರ ಮೇಲೆ ಈ ಪ್ರಯೋಗ ನಡೆಸಲಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾನೂನುಬದ್ಧ ಸಂಸ್ಥೆಯಾದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿಯ ಬೆಂಬಲದ ಮೇರೆಗೆ ಈ ಅಧ್ಯಯನ ನಡೆಸಲಾಗಿದೆ. ಲಸಿಕೆಯು ವೈರಸ್‌ನ ಸ್ಪೈಕ್, ಆರ್​ಬಿಡಿ ಮತ್ತು ನ್ಯೂಕ್ಲಿಯೊಪ್ರೋಟೀನ್‌ಗಳ ವಿರುದ್ಧ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಕಂಡು ಹಿಡಿಯಲಾಗಿದೆ.

ಡೆಲ್ಟಾ,ಆಲ್ಫಾ, ಬೀಟಾ ವಿರುದ್ಧ ಕಡಿಮೆ: ಆದರೆ, ಭಾರತದಲ್ಲಿ ಕಂಡುಬಂದ ಹೊಸ ರೂಪಾಂತರಿಯಾದ ಡೆಲ್ಟಾ, ದಕ್ಷಿಣಾ ಆಫ್ರಿಕಾ ಬೀಟಾ, ಬ್ರಿಟನ್​ನಲ್ಲಿನ ಆಲ್ಫಾ ವೈರಸ್​ಗಳ ಮೇಲೆ ಈ ಲಸಿಕೆಯ ಪ್ರಭಾವ ಹೆಚ್ಚಿನ ಮಟ್ಟದಲ್ಲಿಲ್ಲ. ಈ ವೈರಸ್​ಗಳ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸುವ ಮತ್ತು ಅವುಗಳಿಂದ ರಕ್ಷಣೆ ನೀಡುವ ಪ್ರಮಾಣ ಕಡಿಮೆ ಎಂಬುದನ್ನು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ.

ಕ್ಷೀಣಿಸುತ್ತಿರುವ ವೈರಸ್​ನ ಶಕ್ತಿಯ ವಿರುದ್ಧ ಕೊವ್ಯಾಕ್ಸಿನ್​ ಲಸಿಕೆಯು ಮೆಮೊರಿ ಬಿ ಕೋಶಗಳನ್ನು ಉತ್ಪಾದಿಸುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ವೈರಸ್ ವಿರುದ್ಧವಾಗಿ ಮಾನವನಲ್ಲಿ ಉತ್ಪತ್ತಿಯಾಗುವ ಪ್ರತಿರಕ್ಷಣಾ ಕಾಯಗಳು ಬಲವಾಗಿರುವುದನ್ನು ಪುರಾವೆಗಳ ಸಮೇತ ಅಧ್ಯಯನ ತಿಳಿಸಿದೆ.

ಓದಿ: ಯಾವ ವಯಸ್ಸಿನವರು ಎಷ್ಟು ಆಲ್ಕೊಹಾಲ್ ಸೇವಿಸಬಹುದು? ಸಂಶೋಧನಾ ವರದಿ ಇಲ್ಲಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.