ETV Bharat / science-and-technology

ಜೀವಿಗಳ ಅಸ್ತಿತ್ವಕ್ಕೇ ಕುತ್ತು ತರಲಿದೆ ಹವಾಮಾನ ಬದಲಾವಣೆ: ಅಧ್ಯಯನ ವರದಿ - ಜೀವಿಗಳ ಅಸ್ತಿತ್ವಕ್ಕೆ ಕುತ್ತು ಬರುವ ಸಾಧ್ಯತೆ

ಹವಾಮಾನ ಬದಲಾವಣೆಯಿಂದ ಉಂಟಾಗಬಹುದಾದ ಉಷ್ಣಾಂಶ ಹೆಚ್ಚಳದಿಂದ ಭೂಮಿಯ ಮೇಲಿನ ಬಹಳಷ್ಟು ಜೀವಿಗಳ ಅಸ್ತಿತ್ವಕ್ಕೆ ಕುತ್ತು ತರಲಿದೆ ಎಂದು ಸಂಶೋಧನೆಯೊಮದು ಹೇಳಿದೆ.

Climate change is likely to abruptly push species over tipping points

author img

By

Published : May 22, 2023, 2:21 PM IST

ಬೆಂಗಳೂರು: ಹವಾಮಾನ ಬದಲಾವಣೆಯಿಂದ ಭೂಮಿಯ ಮೇಲಿನ ಹಲವಾರು ಜೀವಿಗಳ ಅಸ್ತಿತ್ವಕ್ಕೆ ಕುತ್ತು ಬರುವ ಸಾಧ್ಯತೆಯಿದೆ ಎಂದು ಸಂಶೋಧನೆಯೊಂದು ಹೇಳಿದೆ. ಹವಾಮಾನ ಬದಲಾವಣೆಯಿಂದ ಜೀವ ಸಂಕುಲಗಳು ತಾವು ವಾಸಿಸುವ ನಿರ್ದಿಷ್ಟ ಭೂಪ್ರದೇಶದಲ್ಲಿ ಉಷ್ಣಾಂಶವು ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾದಲ್ಲಿ ಆ ಜೀವಿಗಳು ಬದುಕುಳಿಯುವುದೇ ದುಸ್ತರವಾಗಲಿದೆ. ಒಟ್ಟಾರೆಯಾಗಿ ಭೂಮಿಯ ತಾಪಮಾನ ಏರುವಿಕೆಯಿಂದ ಬಹಳ ದೊಡ್ಡ ಪರಿಣಾಮಗಳಾಗಲಿವೆ. ನಿರ್ದಿಷ್ಟವಾಗಿ ನೋಡುವುದಾದರೆ- ಭೂಮಿಯ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾದರೆ, ಸಂಶೋಧಕರು ಅಧ್ಯಯನಕ್ಕೆ ಒಳಪಡಿಸಿದ ಜೀವಿಗಳ ಪೈಕಿ ಶೇ 15 ರಷ್ಟು ಜೀವಿಗಳು ಮುಂದಿನ 10 ವರ್ಷಗಳಲ್ಲಿ ತಾವು ವಾಸಿಸುವ ಶೇ 30 ರಷ್ಟು ಪ್ರದೇಶದಲ್ಲಿ ವಿಪರೀತ ಉಷ್ಣಾಂಶವನ್ನು ಎದುರಿಸುವ ಸಾಧ್ಯತೆಯಿದೆ. ಹಾಗೆಯೇ ಉಷ್ಣಾಂಶ 2.5 ಡಿಗ್ರಿ ಹೆಚ್ಚಾದಲ್ಲಿ ಶೇ 30 ರಷ್ಟು ಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.

ಹೊಸ ನೇಚರ್ ಎಕಾಲಜಿ ಮತ್ತು ಎವಲ್ಯೂಷನ್ ಅಧ್ಯಯನವು ಯಾವಾಗ ಮತ್ತು ಎಲ್ಲಿ ಹವಾಮಾನ ಬದಲಾವಣೆಯು ಜಗತ್ತಿನಾದ್ಯಂತ ಇರುವ ಜೀವಿಗಳನ್ನು ಅಪಾಯಕಾರಿ ತಾಪಮಾನಕ್ಕೆ ಒಡ್ಡುವ ಸಾಧ್ಯತೆಯಿದೆ ಎಂಬುದನ್ನು ಊಹಿಸುತ್ತದೆ. ಯುಸಿಎಲ್, ಕೇಪ್ ಟೌನ್ ವಿಶ್ವವಿದ್ಯಾನಿಲಯ, ಕನೆಕ್ಟಿಕಟ್ ವಿಶ್ವವಿದ್ಯಾಲಯ ಮತ್ತು ಬಫಲೋ ವಿಶ್ವವಿದ್ಯಾಲಯದ ಸಂಶೋಧನಾ ತಂಡವು 35,000 ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳಿಂದ (ಸಸ್ತನಿಗಳು, ಉಭಯಚರಗಳು, ಸರೀಸೃಪಗಳು, ಪಕ್ಷಿಗಳು, ಹವಳಗಳು, ಮೀನು, ತಿಮಿಂಗಿಲಗಳು ಮತ್ತು ಪ್ಲ್ಯಾಂಕ್ಟನ್ ಸೇರಿದಂತೆ), ಪ್ರತಿ ಖಂಡದ ಸಮುದ್ರ ಹುಲ್ಲುಗಳಿಂದ ಮತ್ತು ಸಾಗರ ಜಲಾನಯನ ಪ್ರದೇಶಗಳಿಂದ ಡೇಟಾವನ್ನು ವಿಶ್ಲೇಷಿಸಿದೆ. ಇದರ ಜೊತೆಗೆ 2100 ವರೆಗೆ ನಡೆಯುವ ಹವಾಮಾನ ಪ್ರಕ್ಷೇಪಣಗಳನ್ನು ಕೂಡ ಅಧ್ಯಯನ ಮಾಡಿದೆ.

ಪ್ರತಿ ಜೀವಿಯು ವಾಸಿಸುವ ಭೌಗೋಳಿಕ ವ್ಯಾಪ್ತಿಯಲ್ಲಿರುವ ಪ್ರದೇಶಗಳು ಉಷ್ಣದ ಮಾನ್ಯತೆಯ ಮಿತಿಯನ್ನು ದಾಟಿದಾಗ ಏನಾಗಬಹುದು ಎಂಬುದನ್ನು ಸಂಶೋಧನೆ ನಡೆಸಲಾಯಿತು. ಇದನ್ನು ಇತ್ತೀಚಿನ ಇತಿಹಾಸದಲ್ಲಿ (1850-2014) ಜೀವಿಗಳ ಭೌಗೋಳಿಕ ಶ್ರೇಣಿಯಾದ್ಯಂತ ಒಂದು ಪ್ರಭೇದವು ಅನುಭವಿಸುವ ಅತ್ಯಂತ ತೀವ್ರವಾದ ಮಾಸಿಕ ತಾಪಮಾನವನ್ನು ಸತತವಾಗಿ ಮೀರುವ ಮೊದಲ ಐದು ಸತತ ವರ್ಷಗಳು ಎಂದು ವ್ಯಾಖ್ಯಾನಿಸಲಾಗಿದೆ.

ಒಂದು ಬಾರಿ ಉಷ್ಣತಾಮಾನವು ನಿರ್ದಿಷ್ಟ ಮಿತಿಯನ್ನು ಅನ್ನು ದಾಟಿದ ನಂತರ ಅಲ್ಲಿ ವಾಸಿಸುವ ಪ್ರಾಣಿಗಳು ಸತ್ತೇ ಹೋಗುತ್ತವೆ ಎಂದು ಹೇಳಲಾಗದು. ಆದರೆ ಹಾಗಂತ ಹೆಚ್ಚಿನ ತಾಪಮಾನದಲ್ಲಿ ಅವು ಬದುಕಬಲ್ಲವು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಂದರೆ ಅನೇಕ ಜೀವ ಪ್ರಭೇದಗಳು ಹಠಾತ್ ಆಗಿ ಕಣ್ಮರೆಯಾಗಬಹುದು. "ಹವಾಮಾನ ಬದಲಾವಣೆಯು ಕ್ರಮೇಣವಾಗಿ ಪ್ರಾಣಿಗಳಿಗೆ ಬದುಕಲು ಪರಿಸರವನ್ನು ಹೆಚ್ಚು ಕಷ್ಟಕರವಾಗಿಸುತ್ತದೆ" ಎಂದು ಪ್ರಮುಖ ಸಂಶೋಧನಕಾರ UCL ಸೆಂಟರ್ ಫಾರ್ ಬಯೋಡೈವರ್ಸಿಟಿ & ಎನ್ವಿರಾನ್ಮೆಂಟ್ ರಿಸರ್ಚ್ UC ಬಯೋಸೈನ್ಸ್ ನ ಡಾ ಅಲೆಕ್ಸ್ ಪಿಗೋಟ್ ಹೇಳಿದರು.

ಹವಾಮಾನ ಬದಲಾವಣೆಯು ತಾಪಮಾನ ಮತ್ತು ಹವಾಮಾನ ಮಾದರಿಗಳಲ್ಲಿನ ದೀರ್ಘಾವಧಿಯ ಬದಲಾವಣೆಗಳನ್ನು ಸೂಚಿಸುತ್ತದೆ. ಸೂರ್ಯನ ಚಟುವಟಿಕೆಯಲ್ಲಿನ ಬದಲಾವಣೆಗಳು ಅಥವಾ ದೊಡ್ಡ ಜ್ವಾಲಾಮುಖಿ ಸ್ಫೋಟಗಳಿಂದಾಗಿ ಇಂತಹ ಬದಲಾವಣೆಗಳು ನೈಸರ್ಗಿಕವಾಗಿರಬಹುದು. ಆದರೆ 1800 ರ ದಶಕದಿಂದಲೂ, ಮಾನವ ಚಟುವಟಿಕೆಗಳು ಹವಾಮಾನ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಪ್ರಾಥಮಿಕವಾಗಿ ಕಲ್ಲಿದ್ದಲು, ತೈಲ ಮತ್ತು ಅನಿಲದಂತಹ ಪಳೆಯುಳಿಕೆ ಇಂಧನಗಳ ಸುಡುವಿಕೆಯಿಂದಾಗಿ ಹವಾಮಾನ ಬದಲಾವಣೆ ತೀವ್ರವಾಗುತ್ತಿದೆ.

ಇದನ್ನೂ ಓದಿ : 2022-23ರಲ್ಲಿ 1.39 ಕೋಟಿ ಉದ್ಯೋಗಿಗಳು EPFO ಸೇರ್ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.