ಬೀಜಿಂಗ್/ಜಿಯುಕ್ವಾನ್: ಚೀನಾ ಮಂಗಳವಾರ ಶೆಂಝೌ-16 ಮಾನವಸಹಿತ ಅಂತರಿಕ್ಷ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಐದು ತಿಂಗಳ ಕಾರ್ಯಾಚರಣೆಗಾಗಿ ತನ್ನ ಬಾಹ್ಯಾಕಾಶ ನಿಲ್ದಾಣ ಸಂಯೋಜನೆಗೆ ಮೊದಲ ನಾಗರಿಕ ಸೇರಿದಂತೆ ಮೂವರು ಗಗನಯಾತ್ರಿಗಳನ್ನು ಕಳುಹಿಸಲಾಗಿದೆ. ಚೀನಾ ಮಾನವ ಸಹಿತ ಬಾಹ್ಯಾಕಾಶ ಸಂಸ್ಥೆ (CMSA) ಪ್ರಕಾರ, ಲಾಂಗ್ ಮಾರ್ಚ್-2F ಕ್ಯಾರಿಯರ್ ರಾಕೆಟ್‌ನ ಬಾಹ್ಯಾಕಾಶ ನೌಕೆಯು ವಾಯುವ್ಯ ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಬೆಳಗ್ಗೆ 9.31ಕ್ಕೆ (ಬೀಜಿಂಗ್ ಸಮಯ) ಆಕಾಶಕ್ಕೆ ಹಾರಿತು.
ಅಂತರಿಕ್ಷ ನೌಕೆ ಉಡಾವಣೆ ಸಂಪೂರ್ಣ ಯಶಸ್ವಿ: ಉಡಾವಣೆಯಾದ ಸುಮಾರು 10 ನಿಮಿಷಗಳ ನಂತರ, ಶೆಂಜೌ-16 ರಾಕೆಟ್‌ನಿಂದ ಬೇರ್ಪಟ್ಟು ಅದರ ಗೊತ್ತುಪಡಿಸಿದ ಕಕ್ಷೆಯನ್ನು ಪ್ರವೇಶಿಸಿತು. ಮೂವರು ಗಗನಯಾತ್ರಿಗಳು ಉತ್ತಮ ಸ್ಥಿತಿಯಲ್ಲಿದ್ದಾರೆ. ಉಡಾವಣೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಸಿಎಂಎಸ್ಎ ಘೋಷಿಸಿತು. ಏಳು ಗಂಟೆಗಳಿಗಿಂತ ಕಡಿಮೆ ಪ್ರಯಾಣದ ನಂತರ, ಗಗನಯಾತ್ರಿಗಳು ನೆಲದಿಂದ ಸುಮಾರು 400 ಕಿಮೀ ಎತ್ತರದಲ್ಲಿರುವ ಟಿಯಾನ್ಹೆ ಕೋರ್ ಮಾಡ್ಯೂಲ್ ನಿಲ್ದಾಣಕ್ಕೆ ತಲುಪುವ ನಿರೀಕ್ಷೆಯಿದೆ.
ಮೊದಲ ಬಾರಿಗೆ, ಚೀನಾ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ಸಿಬ್ಬಂದಿಯಲ್ಲಿ ಒಬ್ಬ ನಾಗರಿಕನನ್ನು ಸೇರಿಸಿದೆ. ಮೂರು ಗಗನಯಾತ್ರಿಗಳಲ್ಲಿ ಪೇಲೋಡ್ ತಜ್ಞ ಎಂದು ಪರಿಗಣಿಸಲ್ಪಟ್ಟ ಬೀಜಿಂಗ್‌ನ ಬೀಹಾಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗುಯಿ ಹೈಚಾವೊ ಒಬ್ಬರು. ಮಿಷನ್‌ನ ಕಮಾಂಡರ್ ಜಿಂಗ್ ಹೈಪೆಂಗ್ ಆಗಿದ್ದಾರೆ. ಅವರು ದಾಖಲೆಯ ನಾಲ್ಕನೇ ಬಾರಿಗೆ ಬಾಹ್ಯಾಕಾಶಕ್ಕೆ ಹೋದ ಮೊದಲ ಚೀನಾದ ಗಗನಯಾತ್ರಿ ಎಂಬ ಇತಿಹಾಸವನ್ನು ನಿರ್ಮಿಸುತ್ತಿದ್ದಾರೆ. ಗಗನಯಾತ್ರಿ ಫ್ಲೈಟ್ ಇಂಜಿನಿಯರ್ ಝು ಯಾಂಗ್ಝು ಕೂಡ ಬಾಹ್ಯಾಕಾಶಕ್ಕೆ ತನ್ನ ಮೊದಲ ಪ್ರಯಾಣವನ್ನು ಮಾಡುತ್ತಿದ್ದಾರೆ.
5 ತಿಂಗಳವರೆಗೆ ಅಂತರಿಕ್ಷದಲ್ಲಿ ಇರಲಿದ್ದಾರೆ 3 ಗಗನಯಾತ್ರಿಗಳು: ಚೀನಾದ ಬಾಹ್ಯಾಕಾಶ ನಿಲ್ದಾಣ ಕಾರ್ಯಕ್ರಮವು ಅಪ್ಲಿಕೇಶನ್ ಮತ್ತು ಅಭಿವೃದ್ಧಿಯ ಹಂತವನ್ನು ಪ್ರವೇಶಿಸಿದ ನಂತರ, ಶೆಂಝೌ-16 ಮೊದಲ ಮಿಷನ್ ಆಗಿದೆ ಎಂದು ಸಿಎಂಎಸ್ಎನ ಉಪ ನಿರ್ದೇಶಕ ಲಿನ್ ಕ್ಸಿಕಿಯಾಂಗ್ ಸೋಮವಾರ ಮಾಧ್ಯಮಗಳಿಗೆ ತಿಳಿಸಿದರು. ಈ ಮೂವರೂ ಸುಮಾರು ಐದು ತಿಂಗಳ ಕಾಲ ಕಕ್ಷೆಯಲ್ಲಿ ಇರುತ್ತಾರೆ ಎಂದು ಅವರು ಮಾಹಿತಿ ನೀಡಿದರು. ರಷ್ಯಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಹಲವಾರು ದೇಶಗಳ ಸಹಯೋಗದ ಯೋಜನೆಯಾಗಿದೆ. ಚೀನಾ ದೇಶದಿಂದ ಬಾಹ್ಯಾಕಾಶ ನಿಲ್ದಾಣ ಸಂಪೂರ್ಣ ಸಿದ್ಧವಾದರೆ, ಇದು ಬಾಹ್ಯಾಕಾಶ ನಿಲ್ದಾಣ ಹೊಂದಿರುವ ಏಕೈಕ ದೇಶ ವಾಗಲಿದೆ.
ಚೀನಾದ ಬಾಹ್ಯಾಕಾಶ ನಿಲ್ದಾಣದ ಗಮನಾರ್ಹ ವೈಶಿಷ್ಟ್ಯವೇನು?: ISS ನಿಲ್ದಾಣವು 2030ರ ವೇಳೆಗೆ ಸ್ಥಗಿತಗೊಳ್ಳಲಿದೆ. ಚೀನಾದ ಬಾಹ್ಯಾಕಾಶ ನಿಲ್ದಾಣದ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ಎರಡು ರೊಬೊಟಿಕ್ ತೋಳುಗಳು, ವಿಶೇಷವಾಗಿ ಬಾಹ್ಯಾಕಾಶದಿಂದ ಉಪಗ್ರಹಗಳು ಸೇರಿದಂತೆ ವಸ್ತುಗಳನ್ನು ಹಿಡಿಯುವ ಸಾಮರ್ಥ್ಯವನ್ನು ಹೊಂದಿರುವಷ್ಟು ಉದ್ದವಾಗಿವೆ. ಕಕ್ಷೆಯನ್ನು ಪ್ರವೇಶಿಸಿದ ನಂತರ, ಶೆಂಝೌ-16 ಅಂತರಿಕ್ಷ ನೌಕೆಯು ಬಾಹ್ಯಾಕಾಶ ನಿಲ್ದಾಣದ ಸಂಯೋಜನೆಯೊಂದಿಗೆ ವೇಗವಾದ, ಸ್ವಯಂಚಾಲಿತ ಸಂಧಿಸುವ ಕೆಲಸದೊಂದಿಗೆ ಡಾಕಿಂಗ್ ಕೂಡಾ ಮಾಡುತ್ತದೆ.
ಶೆಂಝೌ-16 ಗಗನಯಾತ್ರಿಗಳಿಂದ ನಡೆಯಲಿವೆ ದೊಡ್ಡ ಸಂಶೋಧನೆಗಳು: ಶೆಂಝೌ-16 ಗಗನಯಾತ್ರಿಗಳು ಯೋಜಿಸಿದಂತೆ ಕಕ್ಷೆಯಲ್ಲಿ ದೊಡ್ಡ ಪ್ರಮಾಣದ ಪರೀಕ್ಷೆಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಪ್ರಯೋಗಗಳನ್ನು ನಡೆಸಲಿದ್ದಾರೆ. ಕ್ವಾಂಟಮ್ ಮಾದರಿಯ ವಿದ್ಯಮಾನಗಳು, ಹೆಚ್ಚಿನ ನಿಖರವಾದ ಸ್ಥಳ- ಸಮಯ- ಆವರ್ತನ ವ್ಯವಸ್ಥೆಗಳು, ಸಾಮಾನ್ಯ ಸಾಪೇಕ್ಷತೆಯ ಪರಿಶೀಲನೆ ಮತ್ತು ಜೀವಿಗಳ ಮೂಲದ ಅಧ್ಯಯನದಲ್ಲಿ ಅವರು ಉನ್ನತ ಮಟ್ಟದ ವೈಜ್ಞಾನಿಕ ಸಾಧನೆಗಳನ್ನು ಮಾಡುವ ನಿರೀಕ್ಷೆಯಿದೆ. ಉಡಾವಣೆಯು ಲಾಂಗ್ ಮಾರ್ಚ್ ಕ್ಯಾರಿಯರ್ ರಾಕೆಟ್ ಸರಣಿಯ 475ನೇ ಫ್ಲೈಟ್ ಮಿಷನ್ ಇದಾಗಿದೆ.
ಇದನ್ನೂ ಓದಿ: ಇಸ್ರೋದಿಂದ ನ್ಯಾವಿಗೇಷನ್ ಉಪಗ್ರಹ ಯಶಸ್ವಿ ಉಡಾವಣೆ- ವಿಡಿಯೋ