ಬೀಜಿಂಗ್: ಮಂಗಳ ಗ್ರಹದ ಹೈ ರೆಸೆಲ್ಯೂಷನ್ ಇಮೇಜನ್ನು ಚೀನಾದ ರಾಷ್ಟ್ರೀಯ ಸಂಸ್ಥೆ ಬಿಡುಗಡೆ ಮಾಡಿದ್ದು ಅದನ್ನು ಟಿಯಾನ್ವೆನ್-1 ಬಾಹ್ಯಾಕಾಶ ನೌಕೆ ಸೆರೆ ಹಿಡಿದಿದ್ದು, ಈಗ ಮಂಗಳ ಸುತ್ತ ಕಕ್ಷೆಯಲ್ಲಿ ಸುತ್ತುತ್ತಿದೆ.
ಮಂಗಳ ಗ್ರಹದ ಮೇಲೆ ಮುಂದಿನ ತಿಂಗಳಲ್ಲಿ ರೋವರ್ ಇಳಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಕಕ್ಷೆಯಲ್ಲಿ ತಾತ್ಕಾಲಿಕವಾಗಿ ಟಿಯಾನ್ವೆನ್-1 ಸ್ಪೇಸ್ ಕ್ರಾಫ್ಟ್ ಇಳಿಸಲಾಗಿದೆ ಎಂದು ಚೀನಾ ತಿಳಿಸಿದೆ.
ಮಂಗಳ ಗ್ರಹವನ್ನು ಸುತ್ತುವ ಚೀನಾದ ಬಾಹ್ಯಾಕಾಶ ನೌಕೆ ಟಿಯಾನ್ವೆನ್ -1 ಗ್ರಹದ ಅತ್ಯಧಿಕ ರೆಸೆಲ್ಯೂಷನ್ ಚಿತ್ರಗಳನ್ನು ಕ್ಲಿಕ್ ಮಾಡಿದೆ. ಮಂಗಳ ಗ್ರಹದ ಮೇಲ್ಮೈಯಿಂದ 330 ರಿಂದ 350 ಕಿ.ಮೀ. ದೂರ ಎರಡು ಪಂಚ್ರೊಮ್ಯಾಟಿಕ್ ಚಿತ್ರಗಳು ಸೇರಿವೆ.
ಇದನ್ನೂ ಓದಿ: EXPLAINER: ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ-2021 ಹಾಗೂ ಭಾರತದ ಸ್ಥಾನ
ಈ ಫೋಟೋಗಳಲ್ಲಿ ಮಂಗಳ ಗ್ರಹದ ಸಣ್ಣ ಕುಳಿಗಳು, ಪರ್ವತ ಶ್ರೇಣಿಗಳು ಮತ್ತು ಮರಳು ದಿಬ್ಬಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅದರಲ್ಲಿ 620 ಮೀಟರ್ ಅಗಲದ ಕುಳಿ ಕೂಡ ಕಂಡು ಬಂದಿದೆ.
ಟಿಯಾನ್ವೆನ್ -1 ತನ್ನ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ನೊಂದಿಗೆ ಕಳೆದ ತಿಂಗಳು 24ರಂದು ಮಂಗಳ ಕಕ್ಷೆಗೆ ಪ್ರವೇಶಿಸಿತ್ತು. ಈ ವರ್ಷದ ಮೇ ಅಥವಾ ಜೂನ್‌ನಲ್ಲಿ ದಕ್ಷಿಣ ಗೋಳಾರ್ಧದಲ್ಲಿ ಯುಟೋಪಿಯಾ ಪ್ಲಾನೆಸಿಯಾ ಎಂಬ ಪ್ರದೇಶದಲ್ಲಿ ಲ್ಯಾಂಡರ್ ಮತ್ತು ರೋವರ್ ಅನ್ನು ಚೀನಾ ಇಳಿಸಲಿದೆ. ರೋವರ್ 240 ಕೆ.ಜಿ. ತೂಗುತ್ತದೆ. ಅದರ ಆರು ಚಕ್ರಗಳ ಸಹಾಯದಿಂದ ಗಂಟೆಗೆ 200 ಮೀಟರ್ ವರೆಗೆ ಚಲಿಸಬಹುದು.