ETV Bharat / science-and-technology

ಭಾರತೀಯ ಮೂಲದ ಯುವಕರ ಸ್ಟಾರ್ಟಪ್​ನಲ್ಲಿ ಚಾಟ್​ ಜಿಪಿಟಿಯ ಸ್ಯಾಮ್ ಆಲ್ಟಮನ್ ಹೂಡಿಕೆ - ಪ್ರೋಗ್ರಾಮರ್ ಮತ್ತು ಹೂಡಿಕೆದಾರ

ಭಾರತೀಯ ಮೂಲದ ಯುವಕರಿಬ್ಬರು ಆರಂಭಿಸಿದ ಸ್ಟಾರ್ಟಪ್​ನಲ್ಲಿ ಓಪನ್ ಎಐ ಸಿಇಒ ಸ್ಯಾಮ್ ಆಲ್ಟಮನ್ ಹೂಡಿಕೆ ಮಾಡಿದ್ದಾರೆ..

sam altman ai startup
sam altman ai startup
author img

By ETV Bharat Karnataka Team

Published : Oct 4, 2023, 4:44 PM IST

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಮೂಲದ ಇಬ್ಬರು ಹದಿಹರೆಯದ ಆರ್ಯನ್ ಶರ್ಮಾ ಮತ್ತು ಆಯುಷ್ ಪಾಠಕ್ ಎಂಬುವರು ಸ್ಥಾಪಿಸಿದ ಕೃತಕ ಬುದ್ಧಿಮತ್ತೆ (ಎಐ) ಸ್ಟಾರ್ಟ್ಅಪ್​ ಕಂಪನಿಯಲ್ಲಿ ಚಾಟ್​ ಜಿಪಿಟಿ ಡೆವಲಪರ್ ಓಪನ್ಎಐ ಸಿಇಒ ಸ್ಯಾಮ್ ಆಲ್ಟಮನ್ ಹೂಡಿಕೆ ಮಾಡಿದ್ದಾರೆ. "ಮಾನವನಂತಹ ತಾರ್ಕಿಕತೆಯೊಂದಿಗೆ ಕ್ಲೌಡ್​ನಲ್ಲಿ ಬ್ರೌಸರ್​ನ ಕೆಲಸದ ಹರಿವುಗಳ ಕಾರ್ಯಗತಗೊಳಿಸುವಿಕೆಯನ್ನು ಸ್ವಯಂಚಾಲಿತಗೊಳಿಸುವ ವರ್ಚುವಲ್ ಎಐ ಕಾರ್ಮಿಕರನ್ನು ರಚಿಸಲು ನಾವು ಎಲ್ಲರಿಗೂ ಅವಕಾಶ ನೀಡುತ್ತೇವೆ" ಎಂದು ಶರ್ಮಾ ಬುಧವಾರ ಹೇಳಿದರು.

ಬಾಲಾಜಿ ಶ್ರೀನಿವಾಸನ್ (ಮಾಜಿ ಸಿಟಿಒ ಕಾಯಿನ್​ ಬೇಸ್​), ಜೂಲಿಯನ್ ವೈಸರ್ (ಸಹ-ಸಂಸ್ಥಾಪಕ, ಆನ್ ಡೆಕ್), ಟೈಲರ್ ವಿಲ್ಲೀಸ್ (ಸಹ-ಸಂಸ್ಥಾಪಕ, ಅನ್ ಸುಪರ್​ ವೈಸಡ್), ಕೋರಿ ಲೆವಿ (ಝಡ್ ಫೆಲೋಸ್), ನಕುಲ್ ಗುಪ್ತಾ (ಕಾಯಿನ್ ಬೇಸ್), ಅಂಕುರ್ ನಂದ್ವಾನಿ (ಜೀಟಾಚೈನ್ ಸಂಸ್ಥಾಪಕ), ಸುದರ್ಶನ್ ಶ್ರೀಧರನ್ (ಪೈಪ್​ ಲೈನ್ ಸಂಸ್ಥಾಪಕ), ರಾಹುಲ್ ಅಗರ್ವಾಲ್ (ಸಹ-ಸಂಸ್ಥಾಪಕ, ವ್ಯಾಲೆಂಟ್), ಎನ್ಜೋ ಕಾಗ್ಲಿಟೋರ್, ದಕ್ಷ್ ಮಿಗ್ಲಾನಿ (ಸಹ-ಸಂಸ್ಥಾಪಕ, ವ್ಯಾಲೆಂಟ್), ರಾಹುಲ್ ರಾಯ್, ಸನತ್ ಕಪೂರ್ (ಡ್ರ್ಯಾಗನ್​ ಫ್ಲೈ ಕ್ಯಾಪಿಟಲ್), ಕೈಲರ್ ವಾಂಗ್ ಮತ್ತು ಕರಣ್ ದಲಾಲ್ ಈ ಎಂಜೆಲ್ ಇನ್ವೆಸ್ಟರ್​ಗಳು ಕೂಡ ಭಾರತೀಯ ಮೂಲದ ಯುವಕರ ಸ್ಟಾರ್ಟಪ್​​ನಲ್ಲಿ ಹೂಡಿಕೆ ಮಾಡಿದ್ದಾರೆ.

ಸ್ಯಾಮ್ ಆಲ್ಟಮನ್ ಓರ್ವ ಅಮೇರಿಕನ್ ಉದ್ಯಮಿ, ಪ್ರೋಗ್ರಾಮರ್ ಮತ್ತು ಹೂಡಿಕೆದಾರರಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಎಐ ಸಂಶೋಧನೆ ಮತ್ತು ನಿಯೋಜನೆ ಕಂಪನಿ ಓಪನ್ಎಐನ ಸಹ-ಸಂಸ್ಥಾಪಕರಾಗಿದ್ದಾರೆ. ಇಲಿನಾಯ್ಸ್​ನ ಚಿಕಾಗೋದಲ್ಲಿ ಜನಿಸಿದ ಆಲ್ಟಮನ್ ತನ್ನ ಶಾಲಾ ಶಿಕ್ಷಣವನ್ನು ಮಿಸ್ಸೌರಿಯ ಸೇಂಟ್ ಲೂಯಿಸ್ನ ಜಾನ್ ಬರ್ರೋಸ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಅವರು ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿಗಾಗಿ 2005 ರಲ್ಲಿ ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯಕ್ಕೆ ಸೇರಿದರು. ಆದರೆ ಒಂದು ವರ್ಷದ ನಂತರ ಕಾಲೇಜು ತೊರೆದರು.

ಟೆಸ್ಲಾ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್, ಲಿಂಕ್ಡ್ಇನ್ ಸಹ-ಸಂಸ್ಥಾಪಕ ರೀಡ್ ಹಾಫ್ಮನ್ ಮತ್ತು ಪೀಟರ್ ಥೀಲ್ ಅವರೊಂದಿಗೆ ಸೇರಿಕೊಂಡು ಆಲ್ಟಮನ್ ಓಪನ್ಎಐ ಅನ್ನು ಪ್ರಾರಂಭಿಸಿದರು. ಓಪನ್ಎಐನ ತಾನು ಯಾವ ರೀತಿ ಕೆಲಸ ಮಾಡಲಿದೆ ಎಂಬುದನ್ನು ತಿಳಿದ ನಂತರ ಅಸಮಾಧಾನಗೊಂಡ ಮಸ್ಕ್​ 2018 ರಲ್ಲಿ ಸಂಸ್ಥೆಯನ್ನು ತೊರೆದರು. ಪ್ರಸ್ತುತ, ಓಪನ್ಎಐ ಮೌಲ್ಯವು $ 29 ಬಿಲಿಯನ್ ಆಗಿದೆ. ಆದರೆ ಆಲ್ಟಮನ್ ಕಂಪನಿಯಲ್ಲಿ ಯಾವುದೇ ಈಕ್ವಿಟಿ ಪಾಲನ್ನು ಹೊಂದಿಲ್ಲ.

ಇದನ್ನೂ ಓದಿ : ಮತ್ತೆ ಹೆಚ್ಚಾಗಲಿದೆ ನೆಟ್​ಫ್ಲಿಕ್ಸ್​ ಚಂದಾದಾರಿಕೆ ಶುಲ್ಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.