ETV Bharat / science-and-technology

ಚಂದ್ರಯಾನ-4ರತ್ತ ಇಸ್ರೋ ಚಿತ್ತ, ಚಂದ್ರನಿಂದ ಕಲ್ಲು-ಮಣ್ಣಿನ ಮಾದರಿ ತರುವ ಗುರಿ - ತಿಹಾಸ ಸೃಷ್ಟಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ISRO Chandrayaan 4 Mission: ಚಂದ್ರಯಾನ-3ಯೋಜನೆಯ ಯಶಸ್ಸಿನೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ಇದೀಗ ಸಂಸ್ಥೆ ಮತ್ತೊಂದು ಮಹತ್ವದ ಯೋಜನೆಗೆ ಸಿದ್ಧವಾಗಿದೆ. ಅದುವೇ ಚಂದ್ರಯಾನ-4.

Chandrayaan 4  ISRO to bring back soil samples from the Moon  ISRO working on ambitious lunar missions LUPEX  ISRO Chandrayaan 4 Mission  ಚಂದ್ರನಿಂದ ಕಲ್ಲು ಮಣ್ಣು ತರುವ ಗುರಿ ಹೊಂದಿದ ಭಾರತ  ಚಂದ್ರಯಾನ 4ರತ್ತ ಹೆಜ್ಜೆ ಹಾಕಿದ ಇಸ್ರೋ  ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸ  ಮತ್ತೊಂದು ಮಹತ್ವದ ಯೋಜನೆಗೆ ಸಿದ್ಧ  ಚಂದ್ರಯಾನ 4 ಅಥವಾ ಲುಪೆಕ್ಸ್ ಎಂಬ ಈ ಯೋಜನೆ  ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್  ತಿಹಾಸ ಸೃಷ್ಟಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ಐದರಿಂದ ಹತ್ತು ವರ್ಷಗಳ ಸಮಯ
ಚಂದ್ರನಿಂದ ಕಲ್ಲು-ಮಣ್ಣು ತರುವ ಗುರಿ ಹೊಂದಿದ ಭಾರತ
author img

By ETV Bharat Karnataka Team

Published : Nov 20, 2023, 9:15 AM IST

ಪುಣೆ(ಮಹಾರಾಷ್ಟ್ರ): ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಚಂದ್ರಯಾನ-4 ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ. ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ, ಚಂದ್ರಯಾನ-4 ಕುರಿತು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು.

ಚಂದ್ರಯಾನ-4: ಉದ್ದೇಶವೇನು?: ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ನಾವು ತಯಾರಿ ನಡೆಸುತ್ತಿದ್ದೇವೆ. ಇಸ್ರೋ ಲುಪೆಕ್ಸ್ ಹೆಸರಿನಲ್ಲಿ ಚಂದ್ರನಿಂದ ಕಲ್ಲು ಮತ್ತು ಮಣ್ಣಿನ ಮಾದರಿ ತರುವ ಯೋಜನೆಯತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ. ಇದಕ್ಕಾಗಿ ಚಂದ್ರನ ಧ್ರುವ ಪರಿಶೋಧನೆ ಮಿಷನ್ ಸಿದ್ಧಪಡಿಸುತ್ತಿದ್ದೇವೆ. ಚಂದ್ರಯಾನ-4ರ ಮೂಲಕ 90 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಇಳಿಸಲಾಗುವುದು. ಇದರ ಜೊತೆಗೆ 350 ಕೆ.ಜಿ ತೂಕದ ರೋವರ್​ ಕಳುಹಿಸಲಾಗುವುದು. ಇದು ಚಂದ್ರನ ಮೇಲೆ ಒಂದು ಕಿಲೋಮೀಟರ್ ಸುತ್ತಲಿದೆ ಎಂದು ನಿಲೇಶ್ ದೇಸಾಯಿ ಹೇಳಿದರು.

'ಐದರಿಂದ 10 ವರ್ಷ ಸಮಯ': ಚಂದ್ರಯಾನ-3 ಮಿಷನ್‌ ಜೀವಿತಾವಧಿಯು ಒಂದು ಚಂದ್ರನ ದಿನವಾಗಿದೆ. ಅಂದರೆ ಭೂಮಿಯ ಮೇಲಿನ 14 ದಿನಗಳಿಗೆ ಸಮ. ಚಂದ್ರಯಾನ-4ರ ಜೀವಿತಾವಧಿಯು ಏಳು ಚಂದ್ರ ದಿನಗಳು. ಇದು ಭೂಮಿಯ ಮೇಲಿನ ಸುಮಾರು 100 ದಿನಗಳಾಗುತ್ತದೆ. ಈ ಸಮಯದಲ್ಲಿ, ರೋವರ್‌ನ ಉಪಕರಣಗಳು ಬಂಡೆಗಳನ್ನು ಸಂಗ್ರಹಿಸುತ್ತವೆ. ಚಂದ್ರನ ಮೇಲೆ ಮಣ್ಣಿನ ಮಾದರಿಗಳನ್ನು ತೆಗೆದುಕೊಂಡು ಭೂಮಿಗೆ ತರುತ್ತದೆ. "ಈ ಯೋಜನೆಗೆ ಎರಡು ಉಡಾವಣಾ ವಾಹನಗಳನ್ನು ಸಿದ್ಧಪಡಿಸಬೇಕು. ಇದಕ್ಕೆ ಐದರಿಂದ ಹತ್ತು ವರ್ಷಗಳ ಸಮಯ ಬೇಕು" ಎಂದು ನೀಲೇಶ್ ದೇಸಾಯಿ ಮಾಹಿತಿ ನೀಡಿದರು. ಚಂದ್ರಯಾನ-3ರ ಯಶಸ್ಸಿನ ನಂತರ ಪ್ರಧಾನಿ ಮೋದಿ ಅವರು ದೊಡ್ಡ ಸವಾಲಿಗೆ ಸಿದ್ಧರಾಗುವಂತೆ ಇಸ್ರೋ ವಿಜ್ಞಾನಿಗಳಿಗೆ ಸೂಚನೆ ನೀಡಿದ್ದಾರೆ. ಈ ಯೋಜನೆಗಾಗಿ ಜಪಾನ್‌ನ ಬಾಹ್ಯಾಕಾಶ ಸಂಸ್ಥೆ JAXAನೊಂದಿಗೆ ಇಸ್ರೋ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಚಂದ್ರಯಾನ-3 ಯೋಜನೆಯ ಕುರಿತು..: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ಈ ಮೂಲಕ ಭಾರತವು ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಯಿತು. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ 14 ದಿನಗಳ ಕಾಲ ಚಂದ್ರನ ಬಗ್ಗೆ ಅಮೂಲ್ಯ ಮಾಹಿತಿ ರವಾನಿಸಿದೆ.

ಇದನ್ನೂ ಓದಿ: ಚಂದ್ರಯಾನ-3 ರಾಕೆಟ್‌ ಭಾಗಗಳು ಭೂಮಿಯ ವಾತಾವರಣಕ್ಕೆ ಮರುಪ್ರವೇಶ: ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.