ETV Bharat / science-and-technology

ಚಂದ್ರಯಾನ-3 ಯಶಸ್ವಿ, ಸೂರ್ಯನತ್ತ ಪಯಣ; 2023ರಲ್ಲಿ ಇಸ್ರೋ ಅಪ್ರತಿಮ ಸಾಧನೆ - etv bharat kannada

2023ನೇ ವರ್ಷವು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ವರ್ಷವಾಗಿ ದಾಖಲಾಗಿದೆ. ಇಸ್ರೋದ ಸಾಧನೆ ಮತ್ತು ಮುಂದಿನ ಗುರಿಗಳ ಬಗ್ಗೆ ಒಂದು ಅವಲೋಕನ.

Chandrayaan-3 historic landing on the Moon

author img

By ETV Bharat Karnataka Team

Published : Dec 20, 2023, 7:42 PM IST

ಹೈದರಾಬಾದ್: 2023ರ ವರ್ಷವು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಸೆಪ್ಟೆಂಬರ್ 7, 2019ರಂದು ಚಂದ್ರಯಾನ -2 ಕಾರ್ಯಾಚರಣೆಯ ವೈಫಲ್ಯದ ನಂತರ, ಮುಂದಿನ ನಾಲ್ಕೇ ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಸ್ಟ್ 23, 2023 ರಂದು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಸಾಫ್ಟ್​ ಲ್ಯಾಂಡಿಂಗ್ ಮಾಡಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿತು. ಅಂದು ಮಾತನಾಡಿದ್ದ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್, "ನಾವು ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ್ದೇವೆ. ಈಗ ಭಾರತ ಚಂದ್ರನ ಮೇಲಿದೆ" ಎಂದು ಹೆಮ್ಮೆಯಿಂದ ಹೇಳಿದರು.

ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್​ ಲ್ಯಾಂಡಿಂಗ್ ಮಾಡಿದ ಮೊದಲ ರಾಷ್ಟ್ರ ಮತ್ತು ಒಟ್ಟಾರೆ ಚಂದ್ರನ ಮೇಲಿಳಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಯುನೈಟೆಡ್ ಸ್ಟೇಟ್ಸ್, ಸೋವಿಯತ್ ಒಕ್ಕೂಟ ಮತ್ತು ಚೀನಾ ನಂತರ ಭಾರತದ ಸಾಧನೆ ಅಪ್ರತಿಮವಾದುದು. ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ -3 ಮಿಷನ್ ಅನ್ನು ಜುಲೈ 14, 2023ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್​ಡಿಎಸ್​ಸಿ -ಶಾರ್) LVM3-M4 ವಾಹನದ ಮೂಲಕ ಆರಂಭವಾಗಿತ್ತು. ಆಗಸ್ಟ್ 23 ರಂದು ಲ್ಯಾಂಡಿಂಗ್ ದಿನದಂದು ಮಿಷನ್ ಚಂದ್ರನ ಮೇಲ್ಮೈಯಲ್ಲಿ ಐತಿಹಾಸಿಕ ಭೂಸ್ಪರ್ಶ ಮಾಡಿತು. ನಂತರ ಪ್ರಜ್ಞಾನ್ ರೋವರ್ ಅನ್ನು ನಿಯೋಜಿಸಲಾಯಿತು.

ಭೂಮಿಗೆ ಮರಳಿ ಬಂದ ಪ್ರೊಪಲ್ಷನ್ ಮಾಡ್ಯೂಲ್: ಇಸ್ರೋ ವಿಜ್ಞಾನಿಗಳಿಗೆ ಚಂದ್ರನ ಮೇಲ್ಮೈ ಬಗ್ಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಅಲ್ಲಿ ಅಧ್ಯಯನ ಉದ್ದೇಶಗಳನ್ನು ಸಾಧಿಸಿದ ನಂತರ, ಚಂದ್ರಯಾನ್ -3 ಪ್ರೊಪಲ್ಷನ್ ಮಾಡ್ಯೂಲ್ 2023ರ ಅಕ್ಟೋಬರ್ 9 ರಂದು ಪ್ರಾರಂಭವಾದ ಸರಣಿ ಕಾರ್ಯಾಚರಣೆಗಳ ನಂತರ 22 ನವೆಂಬರ್ 2023ರಂದು ಭೂಮಿಯ ಕಕ್ಷೆಗೆ ಮರಳಿತು. ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ -3ರ ಸಾಫ್ಟ್ ಲ್ಯಾಂಡಿಂಗ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಮತ್ತೆ ಭೂಮಿಯ ಕಕ್ಷೆಗೆ ಮರಳುವ ನಡುವೆ, ಈ ಮಿಷನ್ ಚಂದ್ರನ ಮೇಲೆ ಎರಡನೇ ಹಾಪ್ ಮಾಡುತ್ತದೆ ಎಂದು ಇಸ್ರೋ ಭಾವಿಸಿತ್ತು, ಆದರೆ ಅದು ಸಂಭವಿಸಲಿಲ್ಲ.

ಮಿಷನ್ 2035 ರ ಹಾದಿಯಲ್ಲಿ ಒಂದು ಮೈಲಿಗಲ್ಲು: ಚಂದ್ರಯಾನ -3 ಮಿಷನ್, ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಇಳಿಯುವ ಮೊದಲ ರಾಷ್ಟ್ರವಾಗುವುದು ಮಾತ್ರವಲ್ಲದೆ 2035 ರ ವೇಳೆಗೆ ಮೊದಲ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮತ್ತು ಚಂದ್ರನ ಮೇಲ್ಮೈಗೆ ಮೊದಲ ಭಾರತೀಯನನ್ನು ಕಳುಹಿಸುವ ಭಾರತದ ಮಿಷನ್ 2035 ಗೆ ಸಂಬಂಧಿಸಿದಂತೆ ಇದೊಂದು ಗೇಮ್ ಚೇಂಜರ್ ಎಂದೇ ಹೇಳಬಹುದು. ಚಂದ್ರಯಾನ -3 ಮಿಷನ್‌ನ ಯಶಸ್ಸು ಬಾಹ್ಯಾಕಾಶ ಸಂಶೋಧನೆಯನ್ನು ಖಾಸಗಿಯವರಿಗೆ ಮುಕ್ತಗೊಳಿಸಲು ದಾರಿ ಮಾಡಿದೆ.

ಇಸ್ರೋ ಮುಂದಿವೆ ದೊಡ್ಡ ಗುರಿಗಳು: ಚಂದ್ರಯಾನ -3 ಮಿಷನ್ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ನಂತರ, ಇಸ್ರೋ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್​ಡಿಎಸ್​ಸಿ) ಇಸ್ರೋ ಸೆಪ್ಟೆಂಬರ್ 2 ರಂದು ಮಹತ್ವಾಕಾಂಕ್ಷೆಯ ಆದಿತ್ಯ-ಎಲ್ 1 ಸೌರ ಮಿಷನ್ ಪ್ರಾರಂಭಿಸಿತು. ನಂತರದ ಕಾರ್ಯಾಚರಣೆಯಲ್ಲಿ ಬಾಹ್ಯಾಕಾಶ ನೌಕೆಯು 125 ದಿನಗಳಲ್ಲಿ ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ಪ್ರಯಾಣಿಸಿತು ಮತ್ತು ಸೂರ್ಯನಿಗೆ ಹತ್ತಿರವೆಂದು ಪರಿಗಣಿಸಲಾದ ಲ್ಯಾಗ್ರಾಂಜಿಯನ್ ಬಿಂದು ಎಲ್ 1 ಸುತ್ತಲೂ ಹ್ಯಾಲೋ ಕಕ್ಷೆಯಲ್ಲಿ ಇರಿಸುವ ನಿರೀಕ್ಷೆಯಿದೆ. ಸೌರ ಮೇಲ್ಮೈಯನ್ನು ತನಿಖೆ ಮಾಡುವ ಇತರ ಕಾರ್ಯಗಳ ನಡುವೆ, ಭಾರತದ ಆದಿತ್ಯ ಎಲ್ 1 ಮಿಷನ್ ಸೂರ್ಯನ ಚಿತ್ರಗಳನ್ನು ಸೆರೆಹಿಡಿದು ಅವನ್ನು ವೈಜ್ಞಾನಿಕ ಪ್ರಯೋಗಗಳಿಗಾಗಿ ಇಸ್ರೋಗೆ ರವಾನಿಸಲಿದೆ.

ಮಿಷನ್ ಉದ್ದೇಶಗಳು: ಇಸ್ರೋ ವೆಬ್​ಸೈಟ್ ಪ್ರಕಾರ, ಎಲ್ 1 ಪಾಯಿಂಟ್​ಗೆ ಆಗಮಿಸಿದ ನಂತರ, ಮತ್ತೊಂದು ಕಾರ್ಯಾಚರಣೆಯು ಆದಿತ್ಯ-ಎಲ್ 1 ಅನ್ನು ಭೂಮಿ ಮತ್ತು ಸೂರ್ಯನ ನಡುವಿನ ಸಮತೋಲಿತ ಗುರುತ್ವಾಕರ್ಷಣೆಯ ಸ್ಥಳವಾದ ಎಲ್ 1ರ ಸುತ್ತಲಿನ ಕಕ್ಷೆಯಲ್ಲಿ ಬಂಧಿಸುತ್ತದೆ. ಎಲ್ 1 ಲ್ಯಾಗ್ರೇಂಜ್ ಪಾಯಿಂಟ್​ನಲ್ಲಿನ ಕಾರ್ಯತಂತ್ರದ ಸ್ಥಾನದಿಂದ ಆದಿತ್ಯ-ಎಲ್ 1ಗೆ ಸೂರ್ಯನ ಸ್ಥಿರ, ತಡೆರಹಿತ ನೋಟ ಕಾಣಿಸಲಿದೆ ಎಂದು ಇಸ್ರೋ ಹೇಳಿದೆ. ಆದಿತ್ಯ ಎಲ್ 1 ಸೌರ ಮಿಷನ್ ಯಶಸ್ವಿ ಉಡಾವಣೆಯ ನಂತರ, ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ನವೆಂಬರ್ ನಲ್ಲಿ ಮಿಷನ್ ಜಾರಿಯಲ್ಲಿದೆ ಮತ್ತು ಅಂತಿಮ ಹಂತವನ್ನು ಸಮೀಪಿಸುತ್ತಿದೆ ಎಂದು ಹೇಳಿದರು.

ಇಸ್ರೋ ಮುಂದಿನ ದಾರಿ: ಮೊದಲ ಸೌಂಡಿಂಗ್ ರಾಕೆಟ್ ಉಡಾವಣೆಯ 60ನೇ ವರ್ಷಾಚರಣೆಯಂದು ಇಸ್ರೋ ಭಾರತದಲ್ಲಿ ಬಾಹ್ಯಾಕಾಶ ಉಡಾವಣೆಯ ಐತಿಹಾಸಿಕ ಅಂಶಗಳು ಮತ್ತು ಇಸ್ರೋದಲ್ಲಿನ ಬದಲಾವಣೆಗಳ ಬಗ್ಗೆ ದಾಖಲೆಯನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ಇಸ್ರೋ ಪ್ರಾರಂಭದಿಂದಲೂ ಬಹಳ ದೂರ ಸಾಗಿದೆ ಮತ್ತು ಈಗ ವಿಶ್ವ ದರ್ಜೆಯ ಪ್ರೊಪೆಲ್ಲಂಟ್ಗಳನ್ನು ಆಂತರಿಕವಾಗಿ ಉತ್ಪಾದಿಸುತ್ತಿದೆ ಎಂದು ಹೇಳಿದರು.

ಆದಿತ್ಯ-ಎಲ್ 1 ಮುಂದಿನ ತಿಂಗಳ ಆರಂಭದಲ್ಲಿ ತನ್ನ ಗಮ್ಯಸ್ಥಾನವಾದ ಲ್ಯಾಗ್ರೇಂಜ್ ಪಾಯಿಂಟ್ 1 ಅನ್ನು ತಲುಪಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಸೋಮವಾರ ಹೇಳಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಎಂಟರ್​ಟೇನ್​ಮೆಂಟ್ ಉದ್ಯಮ ಮೂರು ಪಟ್ಟು ಬೆಳವಣಿಗೆ ಸಾಧ್ಯತೆ: ಅಧ್ಯಯನ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.