ನವದೆಹಲಿ: ಭಾರತದ ಚಂದ್ರಯಾನ -3 ನೌಕೆ ಚಂದ್ರನ ಮೇಲೆ ಇಳಿದ ಸ್ಥಳದ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಲೂನಾರ್ ರಿಕಾನೈಸನ್ಸ್ ಆರ್ಬಿಟರ್ (ಎಲ್ಆಆರ್ಒ) ಸೆರೆಹಿಡಿದಿದೆ. ಆಗಸ್ಟ್ 23 ರಂದು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಪ್ರಸ್ತುತ ಚಂದ್ರನ ದಕ್ಷಿಣ ಧ್ರುವದ ಬಳಿ ಇದೆ. ಚಂದ್ರಯಾನ -3 ಇಳಿದ ಸ್ಥಳ ಚಂದ್ರನ ದಕ್ಷಿಣ ಧ್ರುವದಿಂದ ಸುಮಾರು 600 ಕಿಲೋಮೀಟರ್ ದೂರದಲ್ಲಿದೆ.
-
.@NASA's LRO spacecraft recently imaged the Chandrayaan-3 lander on the Moon’s surface.
— NASA Marshall (@NASA_Marshall) September 5, 2023 " class="align-text-top noRightClick twitterSection" data="
The ISRO (Indian Space Research Organization) Chandrayaan-3 touched down on Aug. 23, 2023, about 600 kilometers from the Moon’s South Pole.
MORE >> https://t.co/phmOblRlGO pic.twitter.com/CyhFrnvTjT
">.@NASA's LRO spacecraft recently imaged the Chandrayaan-3 lander on the Moon’s surface.
— NASA Marshall (@NASA_Marshall) September 5, 2023
The ISRO (Indian Space Research Organization) Chandrayaan-3 touched down on Aug. 23, 2023, about 600 kilometers from the Moon’s South Pole.
MORE >> https://t.co/phmOblRlGO pic.twitter.com/CyhFrnvTjT.@NASA's LRO spacecraft recently imaged the Chandrayaan-3 lander on the Moon’s surface.
— NASA Marshall (@NASA_Marshall) September 5, 2023
The ISRO (Indian Space Research Organization) Chandrayaan-3 touched down on Aug. 23, 2023, about 600 kilometers from the Moon’s South Pole.
MORE >> https://t.co/phmOblRlGO pic.twitter.com/CyhFrnvTjT
ನಾಸಾ ಆರ್ಬಿಟರ್ಗೆ ಜೋಡಿಸಲಾದ ಕ್ಯಾಮೆರಾ ವಿಕ್ರಮ್ ಲ್ಯಾಂಡರ್ ಇಳಿದ ನಾಲ್ಕು ದಿನಗಳ ನಂತರ ಲ್ಯಾಂಡರ್ ಓರೆ ನೋಟವನ್ನು (42 ಡಿಗ್ರಿ ಸ್ಲೀವ್ ಆಂಗಲ್) ಸೆರೆಹಿಡಿದೆ. ಜೂನ್ 18, 2009 ರಂದು ಉಡಾವಣೆಯಾದ ನಾಸಾ ಆರ್ಬಿಟರ್ ಇಲ್ಲಿಯವರೆಗೆ ಅತ್ಯಂತ ಮಹತ್ವದ ಮಾಹಿತಿಯ ಖಜಾನೆಯನ್ನೇ ಸಂಗ್ರಹಿಸಿದ್ದು, ಚಂದ್ರನ ಮೇಲಿನ ಪರಿಸ್ಥಿತಿಗಳ ಬಗ್ಗೆ ಸಾಕಷ್ಟು ಜ್ಞಾನ ಹಂಚಿಕೊಂಡಿದೆ. "ರಾಕೆಟ್ ಹೊಗೆಯಿಂದ ವಾಹನದ ಸುತ್ತಲೂ ಪ್ರಕಾಶಮಾನವಾದ ಹೊಳಪು ಉಂಟಾಗಿದೆ" ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.
ಆಗಸ್ಟ್ 23 ರಂದು ಚಂದ್ರಯಾನ -3 ಲ್ಯಾಂಡರ್ ಮಾಡ್ಯೂಲ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸುವ ಮೂಲಕ ಭಾರತವು ಬಾಹ್ಯಾಕಾಶ ವಿಜ್ಞಾನದಲ್ಲಿ ದೈತ್ಯ ಹೆಜ್ಜೆ ಇಟ್ಟಿದೆ. ಅಮೆರಿಕ, ಚೀನಾ ಮತ್ತು ರಷ್ಯಾದ ನಂತರ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶ ಭಾರತವಾಗಿದೆ.
ಲ್ಯಾಂಡಿಂಗ್ ನಂತರ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಗಂಧಕ ಮತ್ತು ಇತರ ಸಣ್ಣ ಅಂಶಗಳ ಉಪಸ್ಥಿತಿಯನ್ನು ಕಂಡು ಹಿಡಿಯುವುದು, ಸಾಪೇಕ್ಷ ತಾಪಮಾನವನ್ನು ದಾಖಲಿಸುವುದು ಮತ್ತು ಅದರ ಸುತ್ತಲಿನ ಚಲನೆಗಳನ್ನು ಕೇಳುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸಿದೆ.
ಏನಿದು ಲೂನಾರ್ ರಿಕಾನೈಸನ್ಸ್ ಆರ್ಬಿಟರ್?: ಲೂನಾರ್ ರಿಕಾನೈಸನ್ಸ್ ಆರ್ಬಿಟರ್ ಕ್ಯಾಮೆರಾ ಅಥವಾ ಎಲ್ಆರ್ಓಸಿ ಇದು ಲೂನಾರ್ ರಿಕಾನೈಸನ್ಸ್ ಆರ್ಬಿಟರ್ (ಎಲ್ಆಆರ್ಓ) ನಲ್ಲಿ ಅಳವಡಿಸಲಾದ ಮೂರು ಕ್ಯಾಮೆರಾಗಳ ವ್ಯವಸ್ಥೆಯಾಗಿದ್ದು, ಇದು ಹೆಚ್ಚಿನ ರೆಸಲ್ಯೂಶನ್ನ ಕಪ್ಪು ಮತ್ತು ಬಿಳಿ ಚಿತ್ರಗಳನ್ನು ಮತ್ತು ಚಂದ್ರನ ಮೇಲ್ಮೈಯ ಮಧ್ಯಮ ರೆಸಲ್ಯೂಶನ್ನ ಮಲ್ಟಿ-ಸ್ಪೆಕ್ಟ್ರಲ್ ಚಿತ್ರಗಳನ್ನು ಸೆರೆಹಿಡಿಯುತ್ತದೆ.
ಜೂನ್ 2009 ರಲ್ಲಿ ನಾಸಾ ಲೂನಾರ್ ರಿಕಾನೈಸನ್ಸ್ ಆರ್ಬಿಟರ್ ಎಂಬ ರೊಬೊಟಿಕ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತ್ತು. ಇದು ಈಗ ಚಂದ್ರನ ಸುತ್ತ 50-200 ಕಿ.ಮೀ ಎತ್ತರದಲ್ಲಿ ಸುತ್ತುತ್ತಿದೆ. ಚಂದ್ರನ ಬಗ್ಗೆ ಮೂಲ ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡುವುದು ಎಲ್ಆಆರ್ಓದ ಪ್ರಾಥಮಿಕ ಉದ್ದೇಶವಾಗಿದೆ.
ಎಲ್ಆಆರ್ಓ ಲೇಸರ್ ಆಲ್ಟಿಮೀಟರ್ ಅನ್ನು ಹೊಂದಿದ್ದು, ಇದು ಚಂದ್ರನ ಮೇಲ್ಮೈಯಲ್ಲಿ ಲೇಸರ್ಗಳನ್ನು ಶೂಟ್ ಮಾಡುವ ಮೂಲಕ ಮತ್ತು ಪ್ರತಿಫಲನ ಸಮಯವನ್ನು ಅಳೆಯುವ ಮೂಲಕ 3 ಡಿ ನಕ್ಷೆಗಳನ್ನು ಉತ್ಪಾದಿಸುತ್ತದೆ. ನೀರಿನ ಮಂಜುಗಡ್ಡೆಯ ಚಿಹ್ನೆಗಳನ್ನು ಹುಡುಕಲು ಕಪ್ಪು ಕುಳಿಗಳಲ್ಲಿ ಇಣುಕಿ ನೋಡಲು ಸೂಕ್ತವಾದ ಎರಡು ಉಪಕರಣಗಳನ್ನು ಮತ್ತು ಸೌರವ್ಯೂಹದಲ್ಲಿ ಅತ್ಯಂತ ತಂಪಾದ ಸ್ಥಳವನ್ನು ಕಂಡುಹಿಡಿಯಲು ತಾಪಮಾನ ಸಾಧನಗಳು ಕೂಡ ರಿಕಾನೈಸನ್ಸ್ ಆರ್ಬಿಟರ್ನಲ್ಲಿವೆ.
ಇದನ್ನೂ ಓದಿ : ಬದಲಾಗಲಿದೆ ಆಂಡ್ರಾಯ್ಡ್ ಬ್ರಾಂಡಿಂಗ್; ಬರಲಿದೆ 3D ಲೋಗೊ, ಆಕರ್ಷಕ ಲುಕ್!