ನವದೆಹಲಿ: ಡೀಸೆಲ್ - ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಜಗತ್ತು ಈಗ ಎಲೆಕ್ಟ್ರಿಕ್ ವಾಗಹನಗಳ ಕಡೆ ದೃಷ್ಟಿ ನೆಟ್ಟಿದೆ. ಅಷ್ಟೇ ಅಲ್ಲ ಈಗ ಜನರು ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿ ಮಾಡಲು ಒಲವು ತೋರುತ್ತಿದ್ದಾರೆ. ಹೀಗಾಗಿ ಪ್ರಸ್ತುತ ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮತ್ತು ಅದರಲ್ಲಿ ಹೊಸ ಪ್ರಯೋಗಗಳು ಮತ್ತು ಆವಿಷ್ಕಾರಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಯುಗ ಆರಂಭವಾಗಿದೆ. ಅಷ್ಟೇ ಅಲ್ಲ ಟಾಟಾ ಸೇರಿದಂತೆ ಹಲವು ಕಂಪನಿಗಳು ಎಲೆಕ್ಟ್ರಾನಿಕ್ಸ್ ಕಾರುಗಳನ್ನು ರೋಡಿಗಿಳಿಸಿವೆ. ಮತ್ತೊಂದೆಡೆ ಯುರೋಪ್ ಮತ್ತು ಅಮೆರಿಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಸಾಗುತ್ತಿದೆ. ಕಾರು ಬಳಕೆದಾರರು ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಹೊಂದಿದ್ದಾರೆ. ಈ ನಡುವೆ ಟೆಸ್ಲಾ ಮಾದರಿಯ ಅಪೆಕ್ಸ್ ಕಾರನ್ನು ಗೆಲ್ಲುವ ಅವಕಾಶವೊಂದು ಒದಗಿ ಬಂದಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಟೆಸ್ಲಾ ಕಾರು ಅತಿ ಹೆಚ್ಚು ಬಳಕೆಯ ಎಲೆಕ್ಟ್ರಿಕ್ ಕಾರಾಗಿದೆ. ಮತ್ತು ವಿಶ್ವಾದ್ಯಂತ ಹೆಚ್ಚು ಚರ್ಚಿಸಲಾದ ಕಾರು ಕಂಪನಿಗಳಲ್ಲಿ ಈ ಟೆಸ್ಲಾ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಕಾರುಗಳ ಬಗ್ಗೆ ಅನೇಕರು ಭಾರಿ ಅಭಿಮಾನ ಹೊಂದಿದ್ದಾರೆ. ಹೀಗಾಗಿಯೇ ಟೆಸ್ಲಾ ವಾಹನಗಳು ಸಹ ಬಹಳ ಜನಪ್ರಿಯವಾಗಿವೆ. ಟೆಸ್ಲಾ ಶೀಘ್ರದಲ್ಲೇ ಭಾರತದಲ್ಲಿ ತನ್ನ ವಾಹನಗಳನ್ನು ಮಾರಾಟ ಮಾಡಲಿದೆ ಎಂಬ ಮಾತು ಕೂಡ ಇದೆ.
ಈ ಕಾರಿನ ವಿಶೇಷತೆ ಏನು?: ಒಮ್ಮೆ ಚಾರ್ಜ್ ಮಾಡಿದರೆ 396-ಮೈಲು ದೂರ ಓಡುವ ಟೆಸ್ಲಾ ಮಾಡೆಲ್ S ಕಾರು, ಕೇವಲ 2 ಸೆಕೆಂಡುಗಳಲ್ಲಿ 60 mph ಅನ್ನು ಮುಟ್ಟಬಹುದು. ಈ ಸುಂದರವಾದ ಮತ್ತು ಅತ್ಯಂತ ವೇಗದ ಕಾರಿನ ಬೆಲೆ $263,749 ಆಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 2 ಕೋಟಿ 17 ಲಕ್ಷದ 77 ಸಾವಿರ ರೂಪಾಯಿ ಆಗಲಿದೆ. ಟೆಸ್ಲಾ ಮಾಡೆಲ್ S-APEX ನ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಟೆಸ್ಲಾ ಮಾಡೆಲ್ ಎಸ್ ಐಷಾರಾಮಿ ಇಂಟೀರಿಯರ್ಸ್ ಹೊಂದಿದೆ. ಇದುವರೆಗೆ ತಯಾರಿಸಿದ ಅತ್ಯಂತ ವೇಗದ ಸೆಡಾನ್ ಇದಾಗಿದ್ದು, ಪ್ಲಾಯಿಡ್ ಅನ್ನು ಆಧರಿಸಿ ನಿರ್ಮಾಣ ಮಾಡಲಾಗಿದೆ. ಟೆಸ್ಲಾ ಮಾಡೆಲ್ S APEX, ಅನ್‌ಪ್ಲಗ್ಡ್ ಪರ್ಫಾರ್ಮೆನ್ಸ್‌ನಿಂದ ಕಸ್ಟಮ್-ನಿರ್ಮಿತ ಆವೃತ್ತಿಯಾಗಿದ್ದು, ಮಾಡೆಲ್ S ಪ್ಲೈಡ್ 1020 ಅಶ್ವಶಕ್ತಿಯನ್ನು ಹೊಂದಿದೆ. ಇದರೊಂದಿಗೆ, ಕಾರ್ಬನ್-ಫೈಬರ್ ವೈಡ್-ಬಾಡಿ ಕಿಟ್ ಮತ್ತು ಕಸ್ಟಮ್ ಲೆದರ್ ಇಂಟೀರಿಯರ್‌ನೊಂದಿಗೆ ಸೀಟ್‌ಗಳಂತಹ ಇತರ ವಿಶಿಷ್ಠ ಸೌಲಭ್ಯಗಳೂ ಇವೆ. ಅದು ಹೋಮ್ಲಿ ಆರ್ಮ್‌ಚೇರ್‌ಗಿಂತ ಕಡಿಮೆ ಏನೂ ಇಲ್ಲ.
-
Model S Apex.. the best of the best is built by @UnpluggedTesla pic.twitter.com/MHpivLpHPi
— lvl2EV (@theblakeman9) September 15, 2022 " class="align-text-top noRightClick twitterSection" data="
">Model S Apex.. the best of the best is built by @UnpluggedTesla pic.twitter.com/MHpivLpHPi
— lvl2EV (@theblakeman9) September 15, 2022Model S Apex.. the best of the best is built by @UnpluggedTesla pic.twitter.com/MHpivLpHPi
— lvl2EV (@theblakeman9) September 15, 2022
ಈ ಕಾರು ಗೆಲ್ಲಲು ನೀವು ಮಾಡಬೇಕಾಗಿರುವುದೇನು?: ಎಸ್ ಇಂತಿಪ್ಪ ಐಶಾರಾಮಿ ಟೆಸ್ಲಾ ಎಸ್ ಮಾಡೆಲ್ ಕಾರು ಗೆಲ್ಲಲು ಏನು ಮಾಡಬೇಕು ಎಂದು ನೀವು ಕೇಳಬಹುದು. ಅದನ್ನು ಗೆಲ್ಲಲು ಈ ರೀತಿ ಮಾಡಿ. Omaze ಪ್ರಕಾರ, "ಈ ಸ್ವೀಪ್‌ಸ್ಟೇಕ್‌ಗಳನ್ನು ಪ್ರವೇಶಿಸಲು ಅಥವಾ ಗೆಲ್ಲಲು ಯಾವುದೇ ದೇಣಿಗೆ ಅಥವಾ ಪಾವತಿ ಅಗತ್ಯವಿಲ್ಲ. ನೀವು ಈ ಆಸಕ್ತಿದಾಯಕ EV -ಎಲೆಕ್ಟ್ರಿಕ್ ಕಾರ್ ಅನ್ನು ಹೊಂದಲು ಬಯಸಿದರೆ, ಜನವರಿ 26, 2023 ರೊಳಗೆ 11:59 PM (ಪೆಸಿಫಿಕ್ ಸಮಯ) ಕ್ಕೆ ಕೆಳಗಿನ ಎರಡು ಲಿಂಕ್‌ಗಳನ್ನು ಕ್ಲಿಕ್ ಮಾಡಿ. ಈ ಸ್ಪರ್ಧೆಯಲ್ಲಿ ಭಾಗವಹಿಸಿ. ( http://shrsl.com/3v7kq ) (https://www.omaze.com/products/custom-tesla-model-s-plaid?sscid=11k7_4tysl&oa_h=H2c0AvOLQMRtRK6k7UgnmA&utm_term=&utm_medium=affiliate&utm_source=ShareasalePage) ಈ ಮೇಲಿನ ಲಿಂಕ್ಗಳ ಮೇಲೆ ಕ್ಲಿಕ್ ಮಾಡಿ ಒಳ ಪ್ರವೇಶಿಸಿ.
-
My previous APEX Model S.. Can't wait for the new one, been in development for ~10 months.. pic.twitter.com/k7lSQsUQGz
— Derek Collison (@derekcollison) June 22, 2022 " class="align-text-top noRightClick twitterSection" data="
">My previous APEX Model S.. Can't wait for the new one, been in development for ~10 months.. pic.twitter.com/k7lSQsUQGz
— Derek Collison (@derekcollison) June 22, 2022My previous APEX Model S.. Can't wait for the new one, been in development for ~10 months.. pic.twitter.com/k7lSQsUQGz
— Derek Collison (@derekcollison) June 22, 2022
ಒಮೇಜ್ ಪ್ರಕಾರ, ದೇಣಿಗೆ ಸ್ವತಃ ಪೀಟರ್ಸನ್ ಆಟೋಮೋಟಿವ್ ಮ್ಯೂಸಿಯಂನ ಪ್ರಯೋಜನವನ್ನು ನೀಡುತ್ತದೆ. ಪೀಟರ್ಸನ್ ಆಟೋಮೋಟಿವ್ ಮ್ಯೂಸಿಯಂ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಅದು ಆಟೋಮೊಬೈಲ್ ಇತಿಹಾಸವನ್ನು ಅನ್ವೇಷಿಸುತ್ತದೆ ಮತ್ತು ಪ್ರಸ್ತುತಪಡಿಸುತ್ತದೆ. ಜಾಗತಿಕ ಜೀವನ ಮತ್ತು ಸಂಸ್ಕೃತಿ ಬಗ್ಗೆ ತಿಳಿಸಿಕೊಡುತ್ತದೆ.
ಇದನ್ನು ಓದಿ:ದೇಶದ ಹಳಿಗಳ ಮೇಲೆ ಹೈಡ್ರೋಜನ್ ಚಾಲಿತ ರೈಲು ಸಂಚಾರ.. ಇದರ ವಿಶೇಷತೆಗಳೇನು?