ಸಿಯೋಲ್ (ದಕ್ಷಿಣ ಕೊರಿಯಾ): ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳ ನಿರಂತರ ಪೂರೈಕೆಗಾಗಿ ದಕ್ಷಿಣ ಕೊರಿಯಾದ ಬ್ಯಾಟರಿ ತಯಾರಕ ಕಂಪೆನಿ ಎಸ್.ಕೆ. ಇನೊವೇಶನ್ ಮತ್ತು ಅಮೆರಿಕಾದ ವಾಹನ ತಯಾರಕ ಫೋರ್ಡ್ ಮೋಟಾರ್ ಸಂಸ್ಥೆ ಅಮೆರಿಕದಲ್ಲಿ ಬ್ಯಾಟರಿ ಜಂಟಿ ಉದ್ಯಮ ಸ್ಥಾಪಿಸಲು ಸಜ್ಜಾಗಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಈ ವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರನ್ನು ವಾಷಿಂಗ್ಟನ್‌ನಲ್ಲಿ ಭೇಟಿಯಾಗುತ್ತಿದ್ದು, ಎಲೆಕ್ಟ್ರಿಕ್ ವೆಹಿಕಲ್ ಉದ್ಯಮದ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ತಿಳಿಸಿದೆ.
ದಕ್ಷಿಣ ಕೊರಿಯಾದ ನಂ.3 ಸಂಘಟಿತ ಎಸ್‌ಕೆ ಗ್ರೂಪ್‌ನ ಅಡಿಯಲ್ಲಿರುವ ಸಂಸ್ಕರಣಾಗಾರ ಮತ್ತು ಬ್ಯಾಟರಿ ಘಟಕವಾದ ಎಸ್‌ಕೆ ಇನೊವೇಶನ್ ಜಾರ್ಜಿಯಾದಲ್ಲಿ $2.6 ಬಿಲಿಯನ್ ಬ್ಯಾಟರಿ ಕಾರ್ಖಾನೆಯನ್ನು ನಿರ್ಮಿಸುತ್ತಿದ್ದು, ಇದು ಫೋರ್ಡ್ನ ಎಫ್ -150 ಇವಿಗಳಿಗೆ ಬ್ಯಾಟರಿಗಳನ್ನು ಪೂರೈಸಲಿದೆ.