ETV Bharat / science-and-technology

ಜಾಹೀರಾತು ನೀಡದಿದ್ದರೆ 'gold' tick ರದ್ದು: ಬ್ರ್ಯಾಂಡ್​ಗಳಿಗೆ Twitter ಹೊಸ ನಿಯಮ - ಈಟಿವಿ ಭಾರತ ಕನ್ನಡ

ಟ್ವಿಟರ್​​ನಲ್ಲಿ ಗೋಲ್ಡ್​​ ಚೆಕ್​ಮಾರ್ಕ್ ವೆರಿಫೈಡ್​ ಮಾನ್ಯತೆ ಹೊಂದಿದ ಬ್ರ್ಯಾಂಡ್​ಗಳು ತಮ್ಮ ವೆರಿಫೈಡ್​ ಸ್ಥಿತಿಯನ್ನು ಉಳಿಸಿಕೊಳ್ಳಬೇಕಾದರೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಜಾಹೀರಾತು ನೀಡುವುದು ಕಡ್ಡಾಯವಾಗಲಿದೆ.

Twitter tells brands to spend $1K per month or lose 'gold' tick

author img

By

Published : Jul 27, 2023, 7:09 PM IST

ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್​ನಲ್ಲಿ ತಮ್ಮ ಗೋಲ್ಡ್​​ ಚೆಕ್​ಮಾರ್ಕ್ ವೆರಿಫೈಡ್​ ಮಾನ್ಯತೆ ​ಉಳಿಸಿಕೊಳ್ಳಬೇಕಾದರೆ ಬ್ರ್ಯಾಂಡ್​ಗಳು ಪ್ರತಿ ತಿಂಗಳಿಗೆ ಕನಿಷ್ಠ 1000 ಡಾಲರ್ ಮೊತ್ತದ ಜಾಹೀರಾತು ನೀಡುವುದು ಕಡ್ಡಾಯ ಎಂದು ಟ್ವಿಟರ್​ ಹೊಸ ನಿಯಮ ಜಾರಿ ಮಾಡಿದೆ. ಆಗಸ್ಟ್​ 7ರ ನಂತರ ನಿರ್ದಿಷ್ಟ ಮಿತಿಯಷ್ಟು ಮೌಲ್ಯದ ಜಾಹೀರಾತು ನೀಡದ ಬ್ರ್ಯಾಂಡ್​ಗಳ ವೆರಿಫೈಡ್​ ಸ್ಥಿತಿ ರದ್ದುಗೊಳಿಸಲಾಗುತ್ತದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ವರದಿಯ ಪ್ರಕಾರ, ಖಾತೆಯು ವೆರಿಫೈಡ್​ ಬ್ರ್ಯಾಂಡ್‌ಗೆ ಸೇರಿದೆ ಎಂದು ಸೂಚಿಸುವ ಗೋಲ್ಡ್​​ ಚೆಕ್‌ಮಾರ್ಕ್ ಅನ್ನು ಮುಂದುವರಿಸಲು, ಬ್ರ್ಯಾಂಡ್‌ಗಳು ಹಿಂದಿನ 30 ದಿನಗಳಲ್ಲಿ ಜಾಹೀರಾತುಗಳಿಗಾಗಿ ಕನಿಷ್ಠ $1,000 ಅಥವಾ ಹಿಂದಿನ 180 ದಿನಗಳಲ್ಲಿ $6,000 ಖರ್ಚು ಮಾಡಿರಬೇಕು. ಸ್ಪ್ಯಾಮರ್​ಗಳು ಟ್ವಿಟರ್​ ಪ್ಲಾಟ್​​ಫಾರ್ಮ್​ನಲ್ಲಿ ಲಕ್ಷಾಂತರ ಸಂಖ್ಯೆಯ ನಕಲಿ ಅಕೌಂಟ್​​ಗಳನ್ನು ಸೃಷ್ಟಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ವಲ್ಪ ಹೆಚ್ಚು ಮೊತ್ತದ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ಎಲೋನ್ ಮಸ್ಕ್​ ಹೇಳಿದ್ದಾರೆ.

ವೆರಿಫೈಡ್​ ಕಂಪನಿಯ ಮಾನ್ಯತೆ ಪಡೆಯಲು ಕಂಪನಿಯು ನಿರ್ದಿಷ್ಟ ಗಾತ್ರದ ಕಂಪನಿಯಾಗಿರಬೇಕು ಮತ್ತು ಸ್ಪ್ಯಾಮರ್​​ಗಳು ಲಕ್ಷಾಂತರ ನಕಲಿ ಅಕೌಂಟ್​​ಗಳನ್ನು ಸೃಷ್ಟಿಸುವುದನ್ನು ತಡೆಗಟ್ಟಲು ತಿಂಗಳಿಗೆ 1000 ಡಾಲರ್​ನಷ್ಟು ಜಾಹೀರಾತು ಖರ್ಚಿನ ಮಟ್ಟವನ್ನು ವಿಧಿಸಲಾಗಿದೆ ಎಂದು ಮಸ್ಕ್​ ತಿಳಿಸಿದ್ದಾರೆ. ಹಿಂದಿನಿಂದ ಬಂದ ಸಾಲ ಹಾಗೂ ಜಾಹೀರಾತು ಆದಾಯದಲ್ಲಿ ಅರ್ಧದಷ್ಟು ಕುಸಿತವಾಗಿರುವುದರಿಂದ ಟ್ವಿಟರ್​ ಈಗಲೂ ನಷ್ಟದಲ್ಲಿದೆ ಎಂದು ಈ ಹಿಂದೆ ಮಸ್ಕ್ ಹೇಳಿದ್ದರು.

ಹೊಸ ವೈಶಿಷ್ಟ್ಯ ಪರಿಚಯಿಸಿದ ಟ್ವಿಟರ್: ಟ್ವಿಟರ್ ಈಗ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಇದರ ಮೂಲಕ ಬ್ಲೂ ಟಿಕ್ ಚಂದಾದಾರರು ಇನ್ನು ಮುಂದೆ ವೇದಿಕೆಯಲ್ಲಿ ಇತರ ಬಳಕೆದಾರರು ಹಂಚಿಕೊಂಡ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ. ಈ ವೈಶಿಷ್ಟ್ಯವು ಪ್ರೀಮಿಯಂ ಚಂದಾದಾರಿಕೆ ಸೇವೆ Twitter Blue ಟಿಕ್​ ಅನ್ನು ಆಯ್ಕೆಮಾಡಿದ ವೆರಿಫೈಡ್​ ಬಳಕೆದಾರರಿಗೆ ಮಾತ್ರ ನಿರ್ದಿಷ್ಟವಾಗಿ ಲಭ್ಯವಿದೆ.

ವೆರಿಫೈಡ್ ಬಳಕೆದಾರರು ಈಗ ಆಫ್‌ಲೈನ್ ವೀಕ್ಷಣೆಗಾಗಿ ನಿರ್ದಿಷ್ಟ ಟ್ವೀಟ್‌ಗಳಿಂದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಬಹುದು ಅಥವಾ ಹೊಸ ಕಂಟೆಂಟ್​ ಅನ್ನು ರಚಿಸಲು ಅವುಗಳನ್ನು ಸೃಜನಾತ್ಮಕವಾಗಿ ಬಳಸಬಹುದು. ಆದಾಗ್ಯೂ, ಈ ವೈಶಿಷ್ಟ್ಯಕ್ಕೆ ಕೆಲವು ಮಿತಿಗಳಿವೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರ ವೆರಿಫೈಡ್​ ಖಾತೆಗಳಿಗೆ ಇದು ಲಭ್ಯ ಇರುವುದಿಲ್ಲ.

X ಹೆಲ್ಪ್​ ಸೆಂಟರ್​ ಪ್ರಕಾರ, ವೆರಿಫೈಡ್​ ಟ್ವಿಟರ್ ಬಳಕೆದಾರರು ಮೂಲ ಪೋಸ್ಟರ್ ನಿರ್ದಿಷ್ಟವಾಗಿ ಈ ವೈಶಿಷ್ಟ್ಯದಿಂದ ಹೊರಗುಳಿದಿರುವಾಗ ಹೊರತುಪಡಿಸಿ ಎಲ್ಲಾ ಹೊಸ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು. ಇದರರ್ಥ ಟ್ವಿಟರ್ ಬ್ಲೂ ಚಂದಾದಾರರು ಇತರ ಬಳಕೆದಾರರು ಹಂಚಿಕೊಂಡ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಅವುಗಳನ್ನು ಮೂಲ ಪೋಸ್ಟರ್‌ನಿಂದ ನಿರ್ಬಂಧಿಸಲಾಗಿಲ್ಲ. ಆದಾಗ್ಯೂ, ಈ ವೈಶಿಷ್ಟ್ಯವು ಟ್ವಿಟರ್ ಬ್ಲೂ ಚಂದಾದಾರರಿಗೆ ಪ್ರತ್ಯೇಕವಾಗಿ ಲಭ್ಯವಿದೆ ಮತ್ತು ಬಳಕೆದಾರರು ಅದನ್ನು ಬಳಸಿಕೊಳ್ಳಲು ಪ್ರೀಮಿಯಂ ಚಂದಾದಾರಿಕೆ ಸೇವೆಯ ಭಾಗವಾಗಿರಬೇಕು.

ಇದನ್ನೂ ಓದಿ : Mission Gaganyaan: SMPS ಎಂಜಿನ್​​ನ ಹಾಟ್​ ಟೆಸ್ಟ್​ ಯಶಸ್ವಿಯಾಗಿ ಪೂರೈಸಿದ ISRO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.