ETV Bharat / science-and-technology

ಪ್ರಪಂಚದಲ್ಲೇ ಮೊದಲ ಬಾರಿಗೆ 'ಹವಾಮಾನ ಬದಲಾವಣೆ' ಪೀಡಿತೆ ಪತ್ತೆ

ಕೆನಡಾದಲ್ಲಿ ಈ ವರ್ಷದಲ್ಲಿ ದಾಖಲೆಯ ಮಟ್ಟದಲ್ಲಿ ಬೀಸಿದ ಬಿಸಿ ಗಾಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಬಿಸಿ ಗಾಳಿಗೆ ಜೂನ್ ತಿಂಗಳಲ್ಲಿ 233 ಮಂದಿ ಸಾವನ್ನಪ್ಪಿದ್ದಾರೆ.

Canada woman suffering-from-climate-change
ಪ್ರಪಂಚದಲ್ಲೇ ಮೊದಲ ಬಾರಿಗೆ 'ಹವಾಮಾನ ಬದಲಾವಣೆ' ಪೀಡಿತೆ ಪತ್ತೆ
author img

By

Published : Nov 9, 2021, 7:48 PM IST

ಒಟ್ಟಾವ(ಕೆನಡಾ): ನೀವು ವಿದ್ಯಾರ್ಥಿಯೇ?, ಉದ್ಯೋಗಿಯೇ?.. ಹಾಗಾದರೆ ಖಂಡಿತಾ ನೀವು ಶಾಲೆಗೋ, ಕಾಲೇಜಿಗೋ ಅಥವಾ ಆಫೀಸಿಗೋ ರಜೆ ಹಾಕಿಯೇ ಇರುತ್ತೀರಿ. ಅನಾರೋಗ್ಯದ ರಜೆ ಬೇಕೆಂದರೆ ಜ್ವರ, ತಲೆನೋವು, ನೆಗಡಿ ಇಂಥಹ ಕಾರಣಗಳನ್ನು ಹೇಳಿಯೂ ಇರುತ್ತೀರಿ. ಇದು ಅತ್ಯಂತ ಸಹಜ. ಆದರೆ ಈಗ ಈ ಕಾರಣಗಳ ಪಟ್ಟಿಗೆ ಹೊಸದೊಂದು 'ಅನಾರೋಗ್ಯ' ಸೇರ್ಪಡೆಯಾಗಿದೆ.

ಹೌದು. ಕೆನಡಾದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು 'ಹವಾಮಾನ ಬದಲಾವಣೆ'ಯ 'ಅನಾರೋಗ್ಯ'ಕ್ಕೀಡಾಗಿದ್ದಾರೆ. ಈ ಮೂಲಕ ಜಗತ್ತಿನಲ್ಲೇ ಮೊದಲ ಬಾರಿಗೆ ಹವಾಮಾನ ಬದಲಾವಣೆಯ ಅನಾರೋಗ್ಯಕ್ಕೆ ಈಡಾದವರೆಂಬ ಮೊದಲ 'ಹೆಗ್ಗಳಿಕೆ' ಈಕೆಗೆ ಸಲ್ಲಿದೆ.

ಕೂಟೆನೆ ಲೇಕ್ ಆಸ್ಪತ್ರೆಯ (Kootenay Lake Hospital) ಡಾ.ಕೈಲ್ ಮೆರ್ರಿಟ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಸ್ಥಳೀಯ ಮಾಧ್ಯಮವಾದ ಟೈಮ್ಸ್ ಕಾಲನಿಸ್ಟ್ (Times colonist) ಮಹಿಳೆಯೋರ್ವಳು ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಒಳಗಾಗಿದ್ದಾಳೆ ಎಂದು ವರದಿ ಮಾಡಿದೆ.

ಮಹಿಳೆಯ ಆರೋಗ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಆರೋಗ್ಯವಾಗಿರಲು ಅದರಲ್ಲೂ ಹೈಡ್ರೇಟ್ ಆಗಿರಲು ಆ ಮಹಿಳೆ ಸಾಕಷ್ಟು ಕಷ್ಟಪಡುತ್ತಿದ್ದಾಳೆ ಎಂದು ಡಾ.ಕೈಲ್ ಮೆರ್ರಿಟ್ ಹೇಳಿದ್ದಾರೆ.

ಕೆನಡಾದಲ್ಲಿ ಈ ವರ್ಷದಲ್ಲಿ ದಾಖಲೆಯ ಮಟ್ಟದಲ್ಲಿ ಬೀಸಿದ ಬಿಸಿ ಗಾಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಬಿಸಿ ಗಾಳಿಗೆ ಜೂನ್ ತಿಂಗಳಲ್ಲಿ 233 ಮಂದಿ ಸಾವನ್ನಪ್ಪಿದ್ದಾರೆ. ಇದೇ ವರ್ಷದಲ್ಲಿ ಉಷ್ಣಾಂಶ 49.5 ಡಿಗ್ರಿ ಸೆಲ್ಸಿಯಸ್​ಗೂ ಮುಟ್ಟಿತ್ತು. ಹೀಗಾಗಿಯೇ ಅಲ್ಲಿ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ.

ಇದನ್ನೂ ಓದಿ: ಅಂಟಾರ್ಟಿಕಾದ ಬೃಹತ್ ಮಂಜುಗಡ್ಡೆಗೆ 'ಗ್ಲಾಸ್ಗೋ ಗ್ಲೇಸಿಯರ್' ನಾಮಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.