ETV Bharat / science-and-technology

ಮೇ 11ರಿಂದ ಕಾಲ್​ ರೆಕಾರ್ಡ್​ ಆ್ಯಪ್​ ನಿಷೇಧ: ಗೂಗಲ್​ ಪ್ಲೇ ಸ್ಟೋರ್​ನಿಂದಲೂ ಔಟ್​ - ಕಾಲ್​ ರೆಕಾರ್ಡ್​ ಆ್ಯಪ್​ ನಿಷೇಧ

ಥರ್ಡ್​ ಪಾರ್ಟಿ ಕಾಲ್​ ರೆಕಾರ್ಡರ್​ ಆ್ಯಪ್​ಗಳನ್ನು ಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ ಅಳಿಸುತ್ತಿದ್ದು, ಸ್ಮಾರ್ಟ್​ಫೋನ್​ಗಳಲ್ಲಿ ಇನ್ನು ಮುಂದೆ ಆ ರೀತಿಯ ಆ್ಯಪ್​ಗಳು ಕಾರ್ಯನಿರ್ವಹಿಸಲ್ಲ ಎಂದು ಗೂಗಲ್​ ಹೇಳಿದೆ.

call-record-app
ಕಾಲ್​ ರೆಕಾರ್ಡ್​ ಆ್ಯಪ್
author img

By

Published : Apr 23, 2022, 6:02 PM IST

ನಿಮ್ಮ ಮೊಬೈಲ್​ನಲ್ಲಿ ಕಾಲ್​ ರೆಕಾರ್ಡರ್​ ಆ್ಯಪ್​ ಅನ್ನು ಬಳಸುತ್ತಿದ್ದರೆ ಇನ್ನು ಮುಂದೆ ಅದು ವರ್ಕ್​ ಆಗಲ್ಲ. ಕಾರಣ ಗೂಗಲ್​ ಸಂಸ್ಥೆ ತನ್ನ ಹೊಸ ನೀತಿಯಲ್ಲಿ ಕಾಲ್​ ರೆಕಾರ್ಡರ್​ ಆ್ಯಪ್​ಗಳ (ಥರ್ಡ್​ ಪಾರ್ಟಿ ಆ್ಯಪ್)​ಬಳಕೆ ನಿಷೇಧಿಸುತ್ತಿದೆ. ಅಲ್ಲದೇ ಅವುಗಳನ್ನು ಗೂಗಲ್​ ಪ್ಲೇ ಸ್ಟೋರ್​ನಿಂದ ಕಿತ್ತುಹಾಕಲಿದೆ.

ಗೂಗಲ್​ ತನ್ನ ಪ್ಲೇ ಸ್ಟೋರ್​ ನೀತಿಗೆ ಕೆಲ ಬದಲಾವಣೆ ತಂದಿದ್ದು, ಅದರಲ್ಲಿ ಕಾಲ್​ ರೆಕಾರ್ಡರ್​ ಆ್ಯಪ್​ಗಳನ್ನು ನಿಷೇಧಿಸುತ್ತಿದೆ. ಮೇ 11 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಆ್ಯಂಡ್ರಾಯ್ಡ್​ ಮೊಬೈಲ್​ಗಳಲ್ಲಿ ಥರ್ಡ್​ ಪಾರ್ಟಿ ಆ್ಯಪ್​ಗಳಾಗಿ ಬಳಕೆಯಾಗುತ್ತಿದ್ದ ಕಾಲ್​ ರೆಕಾರ್ಡರ್​ಗಳು ಇನ್ನು ಅಲ್ಲಿ ಕಾಣಸಿಗುವುದಿಲ್ಲ. ಈಗಾಗಲೇ ಡೌನ್​ಲೋಡ್​ ಮಾಡಿಕೊಂಡು ಬಳಕೆ ಮಾಡುತ್ತಿರುವ ಆ್ಯಪ್​ಗಳು ಕೂಡ ನಿಷ್ಕ್ರಿಯವಾಗಲಿವೆ ಎಂದು ಕಂಪನಿ ತಿಳಿಸಿದೆ.

ಆಂತರಿಕ ಕಾಲ್​ ರೆಕಾರ್ಡರ್​ ಇರದ ಸ್ಮಾರ್ಟ್​ಫೋನ್​ಗಳಲ್ಲಿ ಮೇ 11ರ ಬಳಿಕ ಯಾವುದೇ ಕರೆಗಳು ಸಂಗ್ರಹವಾಗುವುದಿಲ್ಲ. ಇನ್​ಬಿಲ್ಟ್​ ಕಾಲ್​ ರೆಕಾರ್ಡರ್​ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಶಿಯೋಮಿ, ಸ್ಯಾಮ್​ಸಂಗ್​, ಒಪ್ಪೋ, ವಿವೋ, ಒನ್​ಪ್ಲಸ್​ನಲ್ಲಿ ಇನ್​ಬಿಲ್ಟ್​ ಕಾಲ್​ ರೆಕಾರ್ಡರ್​ ಲಭ್ಯವಿದೆ.

ಇದನ್ನೂ ಓದಿ: ಸೂರ್ಯನಿಂದ ಹೊರ ಹೊಮ್ಮಿದ ಭಾರಿ ಪ್ರಮಾಣದ ಜ್ವಾಲೆ; ಉಪಗ್ರಹ ಸಂವಹನದ ಮೇಲೆ ಪರಿಣಾಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.