ETV Bharat / science-and-technology

2023ರ ಅಂತ್ಯದ ಹೊತ್ತಿಗೆ ಭಾರತದಲ್ಲಿ ಶೇ 80 ರಷ್ಟು ಸ್ಮಾರ್ಟ್​ಫೋನ್​ಗಳಲ್ಲಿ 5 ಜಿ ಸೇವೆ

author img

By

Published : Dec 26, 2022, 3:54 PM IST

ದೇಶದಲ್ಲಿ ಈಗಾಗಲೇ 5ಜಿ ಸೇವೆಗೆ ಆರಂಭ - ಅಕ್ಟೋಬರ್​ನಲ್ಲಿ 5ಜಿ ಸೇವೆಗೆ ಪ್ರಧಾನಿ ಚಾಲನೆ - ಮುಂದಿನ ವರ್ಷದ ಅಂತ್ಯಕ್ಕೆ ಎಲ್ಲ ಸ್ಮಾರ್ಟ್​ಫೋನ್​ನಲ್ಲಿ 5ಜಿ ಸೇವೆ

2023ರ ಹೊತ್ತಿಗೆ ಭಾರತದ ಶೇ 80 ರಷ್ಟು ಸ್ಮಾರ್ಟ್​ಫೋನ್​ನಲ್ಲಿರಲಿದೆ 5 ಜಿ ಸೇವೆ
by-2023-80-percent-of-indias-smartphones-will-have-5g-service

ನವದೆಹಲಿ: ಭಾರತದಲ್ಲಿ 50ಕ್ಕೂ ಹೆಚ್ಚು ನಗರದಲ್ಲಿ ಈಗಾಗಲೇ 5ಜಿ ತಂತ್ರಜ್ಞಾನ ಸೇವೆಯನ್ನು ಜನರು ಆಹ್ಲಾದಿಸುತ್ತಿದ್ದಾರೆ ಎಂದು ಇಂಡಿಯಾ ಸೆಲ್ಯೂಲರ್​ ಅಂಡ್​ ಎಲೆಕ್ಟ್ರಾನಿಕ್ಸ್​ ಅಸೋಸಿಯೇಷನ್​ ಅಧ್ಯಕ್ಷರಾದ ಪಂಕಜ್​ ಮೊಹಿಂದ್ರೂ ತಿಳಿಸಿದ್ದಾರೆ. 2023ರಲ್ಲಿ ಶೇ 75 ರಿಂದ 80 ಪ್ರತಿಶತ ಮೊಬೈಲ್​ನಲ್ಲಿ ಈ 5ಜಿ ಸೇವೆ ಇರಲಿದೆ ಎಂದಿದ್ದಾರೆ. ಕಳೆದ ಅಕ್ಟೋಬರ್​ 1ರಿಂದಲೇ ದೇಶದಲ್ಲಿನ 5ಜಿ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ದೇಶದ ಕೆಲವು ಆಯ್ದ ನಗರಗಳಲ್ಲಿ ಮಾತ್ರ ಸದ್ಯ ಈ 5ಜಿ ಸೇವೆ ಲಭ್ಯವಿದ್ದು, 2023 ಅಥವಾ 2024ಕ್ಕೆ ಮುಂಚೆ ದೇಶದೆಲ್ಲೆಡೆ ಈ ಸೇವೆ ಪಡೆಯಬಹುದಾಗಿದೆ. ಭಾರತದಲ್ಲಿ 5ಜಿ ತಂತ್ರಜ್ಞಾನದ ಆರಂಭಿಕ ಅಳವಡಿಕೆಯಾಗಿದೆ. ಈ 5G ತಂತ್ರಜ್ಞಾನವು ಹೊಸ ಪೀಳಿಗೆಯ ಟೆಲಿಕಾಂ ಉಪಕರಣ ತಯಾರಕರು, ಅಪ್ಲಿಕೇಶನ್ ಪೂರೈಕೆದಾರರು ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT), ಮಿಷನ್​-2-ಮಷಿನ್ (M2M) ಮತ್ತು ಆರೋಗ್ಯ ಸೇವೆಗಳು, ಇತರರಿಗೆ ವ್ಯಾಪಕ ಅವಕಾಶವನ್ನು ತೆರೆಯಲಿದೆ.

5ಜಿ ಸೇವೆ ಉದ್ಘಾಟನೆಗೂ ಮುನ್ನವೇ 5ಜಿ ಸೇವೆ ಹೊಂದಿರುವ ವ್ಯವಸ್ಥೆಗೆ ಅನುಗುಣವಾಗಿ ಮೊಬೈಲ್​ ಡಿವೈಸ್​ಗಳನ್ನು ನಿರ್ಮಾಣ ಮಾಡಲಾಗಿದೆ. 80 - 100ಮಿಲಿಯನ್​ 5ಜಿ ಮೊಬೈಲ್​ಗಳು ಈಗಾಗಲೇ ಮಾರುಕಟ್ಟೆಯಲ್ಲಿದೆ. 2023ರ ಹೊತ್ತಿಗೆ ಬಹುತೇಕರು 5ಜಿ ಸೇವೆ ಹೊಂದಲಿದ್ದು, 690 ಜನರು ಬಳಕೆ ಮಾಡಲಿದ್ದಾರೆ ಎಂದು ಎರಿಕ್ಸನ್​ ಮೊಬಿಲಿಟಿ ವರದಿ ತಿಳಿಸಿದೆ.

2020ರ ವೇಳೆಗೆ ಭಾರದ ಸೆಮಿ-ಕಂಡಕ್ಟರ್​ ಮಾರುಕಟ್ಟೆ15 ಮಿಲಿಯನ್​ ಡಾಲರ್​ ವಹಿವಾಟು ನಡೆಸುತ್ತಿದ್ದರು. 2023ರ ಹೊತ್ತಿಗೆ ಇದು 63 ಬಿಲಿಯನ್​ ಡಾಲರ್​ ಹೋಗುವ ನಿರೀಕ್ಷೆ ಇದೆ. ದೇಶಕ್ಕೆ ಇದೊಂದು ದೊಡ್ಡ ಅವಕಾಶವಾಗಿದೆ. ಸರ್ಕಾರ ದೇಶದಲ್ಲಿನ ಸಂಪೂರ್ಣ ಸೆಮಿಕಂಡಕ್ಟರ್​ ಪರಿಸರ ವ್ಯವಸ್ಥೆ ಮೇಲೆ ಗಮನಹರಿಸಿದೆ.

ಇದನ್ನೂ ಓದಿ: ಮೊಬೈಲ್ ದರ ಹೆಚ್ಚಿಸಲಿರುವ ಟೆಲಿಕಾಂ ಕಂಪನಿಗಳು.. ಕೊರೊನಾ ಸಮಯದಲ್ಲಿ ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.