ETV Bharat / science-and-technology

ASUS ಕ್ರೋಮ್​ಬುಕ್ ಸಿಎಕ್ಸ್ ಸರಣಿಯ ಲ್ಯಾಪ್​​ಟಾಪ್​ ಬಿಡುಗಡೆ; ಬೆಲೆಯೂ ಕಮ್ಮಿ!

author img

By ETV Bharat Karnataka Team

Published : Sep 1, 2023, 7:52 PM IST

ಆಸೂಸ್​ ತನ್ನ ಹೊಸ ಮಾದರಿಯ ಕೈಗೆಟುಕುವ ಬೆಲೆಯ ಕ್ರೋಮ್​ಬುಕ್ ಲ್ಯಾಪ್​ಟಾಪ್​ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ASUS launches affordable Chromebook CX1 series in India

ನವದೆಹಲಿ: ತೈವಾನ್ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿ ಆಸೂಸ್ ಕೈಗೆಟುಕುವ ಕ್ರೋಮ್​ಬುಕ್ ಸಿಎಕ್ಸ್ 1 ಲ್ಯಾಪ್​​ಟಾಪ್ ಸರಣಿಯನ್ನು ಭಾರತದಲ್ಲಿ ಶುಕ್ರವಾರ ಬಿಡುಗಡೆ ಮಾಡಿದೆ. 14 ಮತ್ತು 15 ಇಂಚಿನ ಹಗುರ ಮತ್ತು ಸುಸ್ಥಿರ ಮಾದರಿಗಳಲ್ಲಿ ಇದು ಲಭ್ಯವಾಗಲಿದೆ. ಆಸೂಸ್ ಕ್ರೋಮ್​ ಬುಕ್ ಸಿಎಕ್ಸ್ 1400 ಮತ್ತು ಸಿಎಕ್ಸ್ 1500 ಇವುಗಳ ಬೆಲೆ 21,990 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಸೀಮಿತ ಅವಧಿಗೆ ಇವುಗಳನ್ನು ಫ್ಲಿಪ್​ಕಾರ್ಟ್​ನಲ್ಲಿ 18,990 ರೂ. ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.

ಈ ಸಾಧನಗಳು ಇಂಟೆಲ್ ಸೆಲೆರಾನ್ ಎನ್ 4500 ಪ್ರೊಸೆಸರ್, ಇಮ್ಮರ್ಸಿವ್ ಲೇ-ಫ್ಲಾಟ್ ಡಿಸ್​ ಪ್ಲೇ, ವೈ-ಫೈ 6 ಮತ್ತು 11 ಗಂಟೆಗಳ ಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಹೊಂದಿವೆ. ಉತ್ತಮ ಗುಣಮಟ್ಟದ 3-ಸೆಲ್ 50 ವ್ಯಾಟ್ ಬ್ಯಾಟರಿ ಪ್ಯಾಕ್ ಮತ್ತು 45 ವ್ಯಾಟ್ ಫಾಸ್ಟ್ ಯುಎಸ್​ಬಿ-ಸಿ ಚಾರ್ಜಿಂಗ್ ಪೋರ್ಟ್​ ಇದರಲ್ಲಿದೆ.

ಫ್ಲಿಪ್ ಟಚ್ ಸ್ಕ್ರೀನ್ ಮತ್ತು ನಾನ್-ಫ್ಲಿಪ್ ಮಾದರಿಗಳಲ್ಲಿ 14-ಇಂಚಿನ ಮತ್ತು 15-ಇಂಚಿನ ಸ್ಕ್ರೀನ್ ಹೊಂದಿದ ಪ್ರಕಾಶಮಾನವಾದ, ಸ್ಪಷ್ಟವಾದ ಪೂರ್ಣ-ಎಚ್ ಡಿ ಡಿಸ್ ಪ್ಲೇ ಇವುಗಳಲ್ಲಿದ್ದು, ಆಸೂಸ್ ಕ್ರೋಮ್ ಬುಕ್ ಸಿಎಕ್ಸ್ 1 ಸರಣಿಯು ಶಕ್ತಿಶಾಲಿ ಪ್ರೊಸೆಸರ್ ನಿಂದ ಚಾಲಿತವಾಗಿದೆ. ಜೊತೆಗೆ ಸೂಪರ್ ಫಾಸ್ಟ್ LPDDR4X 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿವೆ.

ಈ ಲ್ಯಾಪ್​​ಟಾಪ್​ಗಳು 720p HD ಕ್ಯಾಮರಾದೊಂದಿಗೆ ವೈಡ್-ವ್ಯೂ ತಂತ್ರಜ್ಞಾನ ಮತ್ತು ಟಚ್ ಸ್ಕ್ರೀನ್, ಸುಸ್ಪಷ್ಟವಾದ ಸ್ಟಿರಿಯೊ ಆಡಿಯೋ ಜೊತೆಗೆ ಫುಲ್-ಎಚ್​ಡಿ ಡಿಸ್​ ಪ್ಲೇ ಅನುಭವ ನೀಡುತ್ತವೆ. ಈ ಸಾಧನಗಳು ಗೂಗಲ್ ವರ್ಕ್​ಸ್ಪೇಸ್​, ಜೊತೆಗೆ ಗೂಗಲ್ ಪ್ಲೇ ಸ್ಟೋರ್ ಆಂಡ್ರಾಯ್ಡ್ ಅಪ್ಲಿಕೇಶನ್​ಗಳು, ಗೂಗಲ್ ಅಸಿಸ್ಟೆಂಟ್ ಮತ್ತು 100 ಜಿಬಿ ಗೂಗಲ್ ಒನ್ ಕ್ಲೌಡ್ ಸ್ಟೋರೇಜ್​ ಸೌಲಭ್ಯಗಳನ್ನು ಹೊಂದಿವೆ.

1989 ರಲ್ಲಿ ಸ್ಥಾಪನೆಯಾದ ಆಸೂಸ್ ವಿಶ್ವದ ಅತ್ಯುತ್ತಮ ಮದರ್​ ಬೋರ್ಡ್​ಗಳು ಮತ್ತು ಉತ್ತಮ-ಗುಣಮಟ್ಟದ ಪರ್ಸನಲ್ ಕಂಪ್ಯೂಟರ್​ಗಳು, ಮಾನಿಟರ್​ಗಳು, ಗ್ರಾಫಿಕ್ಸ್ ಕಾರ್ಡ್​ಗಳು, ರೂಟರ್​ಗಳು ಮತ್ತು ಇತರ ತಂತ್ರಜ್ಞಾನ ಸಾಧನಗಳಿಗೆ ಹೆಸರುವಾಸಿಯಾದ ಬಹುರಾಷ್ಟ್ರೀಯ ಕಂಪನಿಯಾಗಿದೆ. ಇಂದು, ಆಸೂಸ್​ ಮುಂದಿನ ಪೀಳಿಗೆಯ ಸ್ಮಾರ್ಟ್ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುತ್ತಿದೆ ಮತ್ತು ನಿರ್ಮಿಸುತ್ತಿದೆ.

ಕಂಪನಿ ಆರಂಭವಾದ ಆರು ವರ್ಷಗಳ ನಂತರ 1995 ರಲ್ಲಿ ಆಸೂಸ್ ವಿಶ್ವದ ಪ್ರಮುಖ ಮದರ್​ ಬೋರ್ಡ್​ ತಯಾರಕ ಕಂಪನಿಯಾಯಿತು. 2008 ರಲ್ಲಿ ಆಸೂಸ್ ತನ್ನ ಮೂಲ ಕಂಪನಿಯನ್ನು ಮೂರು ಸ್ವತಂತ್ರ ಕಂಪನಿಗಳಾಗಿ ವಿಭಜಿಸುವ ಮೂಲಕ ಕಾರ್ಯಾಚರಣೆಗಳನ್ನು ಪುನರ್​ ರಚಿಸಿತು. ಆಸೂಸ್ ನ ಮೊದಲ ತಲೆಮಾರಿನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಸ್ಮಾರ್ಟ್ ಫೋನ್​ಗಳನ್ನು 2014 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಸ್ಮಾರ್ಟ್​ಫೋನ್​ಗಳು ಇಂಟೆಲ್ ಪ್ರೊಸೆಸರ್​ಗಳಿಂದ ನಿಯಂತ್ರಿಸಲ್ಪಡುತ್ತವೆ. ಇತರ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳು ಎಆರ್​ಎಂ ಪ್ರೊಸೆಸರ್​ಗಳನ್ನು ಹೊಂದಿರುತ್ತವೆ.

ಇದನ್ನೂ ಓದಿ : ಆಗಸ್ಟ್​​ ಜಿಎಸ್​​​ಟಿ ಆದಾಯ 1,59,069 ಕೋಟಿ ರೂ.; ಕಳೆದ ವರ್ಷಕ್ಕಿಂತ ಶೇ 11ರಷ್ಟು ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.