ETV Bharat / science-and-technology

ನಾಸಾ ಗಗನಯಾತ್ರಿಗಳಿಗೆ ಚಂದ್ರನ ಸುತ್ತ ಹಾರುವ ಬಾಹ್ಯಾಕಾಶ ನೌಕೆಯ ಪರಿಚಯ; ಆರ್ಟಿಮಸ್​ ಯೋಜನೆ ತುಸು ವಿಳಂಬ

author img

By

Published : Aug 9, 2023, 7:15 AM IST

ಆರ್ಟಿಮಸ್​-2 ಯೋಜನೆ ಮೂಲಕ ಗಗನಯಾನಕ್ಕೆ ಸಿದ್ಧತೆ ನಡೆಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ನಾಲ್ವರು ಗಗನಯಾತ್ರಿಗಳಿಗೆ ಬಾಹ್ಯಾಕಾಶ ನೌಕೆಯನ್ನು ಪರಿಚಯಿಸಿತು.

ಆರ್ಟಿಮಸ್​ ಯೋಜನೆ ತುಸು ವಿಳಂಬ
ಆರ್ಟಿಮಸ್​ ಯೋಜನೆ ತುಸು ವಿಳಂಬ

ಕೇಪ್ ಕೆನವೆರಲ್: ಎರಡನೇ ಬಾರಿಗೆ ಮಾನವ ಸಹಿತ ಚಂದ್ರಯಾನಕ್ಕೆ ಸಿದ್ಧತೆ ನಡೆಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ನಾಲ್ವರು ಗಗನಯಾತ್ರಿಗಳಿಗೆ ತಾವು ಹಾರಾಟ ನಡೆಸಲಿರುವ ನೌಕೆಯನ್ನು ಪರಿಚಯಿಸಿತು. ಮುಂದಿನ ವರ್ಷ ನಾಸಾ ಈ ನಾಲ್ವರು ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸಲು ಉದ್ದೇಶಿಸಿದೆ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ.

ಕೆನಡಾ ಬಾಹ್ಯಾಕಾಶ ಕೇಂದ್ರದಲ್ಲಿರುವ ಆರ್ಟಿಮಸ್​-2 ಯೋಜನೆಯ ಭಾಗವಾಗಿರುವ ಸ್ಪೇಸ್​ಕ್ರಾಫ್ಟ್​ ಅನ್ನು ಗಗನಯಾನಿಗಳು ವೀಕ್ಷಿಸಿದರು. ಈ ವೇಳೆ ಗಗನಯಾನಿಗಳಲ್ಲಿ ಒಬ್ಬರಾದ ಕ್ರಿಸ್ಟಿನಾ ಕೋಚ್​ ಅವರು ತಮ್ಮ ಅನುಭವವನ್ನು ಹಂಚಿಕೊಂಡು, ರಾಕೆಟ್​ ಕಂಡ ಬಳಿಕ ನನಗೆ ಬೇರೇನೂ ಕಾಣುತ್ತಿಲ್ಲ. ಅದನ್ನು ನೋಡಿದರೇ ಮೈಯೆಲ್ಲಾ ನಡುಕ ಉಂಟಾಗುತ್ತದೆ ಎಂದು ಹೇಳಿದರು.

ರಾಕೆಟ್​ಗೆ ಶಾಖ ತಡೆಯುವ ಕವಚ: ಕಳೆದ ವಾರ ಮಾನವ ರಹಿತ ಗಗನಯಾನ ಕೈಗೊಂಡ ವೇಳೆ ಹೆಚ್ಚಿನ ಶಾಖದಿಂದ ರಾಕೆಟ್​ ಹಾನಿಗೀಡಾಗಿತ್ತು. ಈ ಬಾರಿ ಮಾನವ ಸಹಿತ ಯಾನವಾಗಿರುವುದರಿಂದ ರಾಕೆಟ್​ಗೆ ಹೆಚ್ಚಿನ ಭದ್ರತೆ ನೀಡಲು ವಿಜ್ಞಾನಿಗಳು ಶ್ರಮಿಸುತ್ತಿದ್ದು, ತೀವ್ರ ಶಾಖ ತಡೆಯುವ ಹೀಟ್​ ಶೀಲ್ಡ್​ ಕ್ಯಾಪ್ಸುಲ್​ ಅನ್ನು ಸಿದ್ಧಪಡಿಸಲಾಗುತ್ತಿದೆ.

ಚಂದ್ರನ ಸುತ್ತ ನಾಲ್ವರಿಂದ ಅಧ್ಯಯನ: 1972 ರಲ್ಲಿ ಅಪೋಲೋ-17 ಯೋಜನೆ ಮೂಲಕ ಇಬ್ಬರು ಗಗನಯಾನಿಗಳನ್ನು ಚಂದ್ರನಲ್ಲಿಗೆ ಕಳುಹಿಸಿ ಅಧ್ಯಯನ ನಡೆಸಿದ್ದ ನಾಸಾ ಇದೀಗ 50 ವರ್ಷಗಳ ಬಳಿಕ ಮತ್ತೆ ಮಾನವ ಸಹಿತ ಗಗನಯಾನಕ್ಕೆ ಸಜ್ಜಾಗಿದೆ. ಇದಕ್ಕೆ ಆರ್ಟಿಮಸ್​-2 ಯೋಜನೆ ಎಂದು ಹೆಸರಿಡಲಾಗಿದ್ದು, ಮಹತ್ವಾಕಾಂಕ್ಷಿ ಯೋಜನೆಗೆ ನಾಲ್ವರು ಗಗನಯಾನಿಗಳನ್ನು ಆಯ್ಕೆ ಮಾಡಲಾಗಿದೆ.

ಮಹಿಳೆ, ಕಪ್ಪು ವರ್ಣೀಯ ಇದೇ ಮೊದಲು: ಮಹತ್ವಾಕಾಂಕ್ಷಿಯ ಆರ್ಟಿಮಸ್​ -2 ಯೋಜನೆಗೆ ಮೊದಲ ಬಾರಿಗೆ ಮಹಿಳೆ ಮತ್ತು ಕಪ್ಪುವರ್ಣೀಯ ಗಗನಯಾನಿಗಳನ್ನು ಆಯ್ಕೆ ಮಾಡಲಾಗಿದೆ. ನಾಲ್ವರು ಗಗನಮಾತ್ರಿಗಳು ಚಂದ್ರನ ಸುತ್ತ ಹಾರಾಟ ನಡೆಸಿ ಅಧ್ಯಯನ ಮಾಡಲಿದ್ದಾರೆ.

ಕ್ರಿಸ್ಟಿನಾ ಕೋಚ್​(ಮೊದಲ ಮಹಿಳೆ), ವಿಕ್ಟರ್​ ಗ್ಲೋವರ್​ (ಮೊದಲ ಕಪ್ಪು ವರ್ಣೀಯ), ಜೆರಮಿ ಹ್ಯಾನ್ಸನ್​​(ಮೊದಲ ಕೆನಡಿಯನ್​) ಹಾಗೂ ರೀಡ್​ ವೈಸ್​ಮನ್​ರನ್ನು ನಾಸಾ ಚಂದ್ರನ ಅಧ್ಯಯನ ನಡೆಸುವ ನಾಲ್ವರು ಗಗನಯಾತ್ರಿಗಳಾಗಿದ್ದಾರೆ. ರೀಡ್ ವೈಸ್‌ಮನ್ ಅವರು ಬಾಹ್ಯಾಕಾಶ ಯಾನದಲ್ಲಿ ನಿಪುಣರಾಗಿದ್ದು, ಅವರನ್ನು ಮಿಷನ್ ಕಮಾಂಡರ್ ಆಗಿ ನಾಸಾ ಹಾಗೂ ಕೆನಡಾದ ಬಾಹ್ಯಾಕಾಶ ಸಂಸ್ಥೆ ಆಯ್ಕೆ ಮಾಡಿದೆ.

ಇದನ್ನೂ ಓದಿ: Chandrayaan-3: ಚಂದ್ರನ ಗುರುತ್ವದತ್ತ ಚಂದ್ರಯಾನ-3 ನೌಕೆ, ಆಗಸ್ಟ್ 23 ರ ಲ್ಯಾಂಡಿಂಗ್​ನದ್ದೇ ಕೌತುಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.