ETV Bharat / science-and-technology

ಎಐ ಕ್ಷೇತ್ರದಲ್ಲಿ ಭರಪೂರ ಅವಕಾಶ; ಭಾರತದಲ್ಲಿ 45 ಸಾವಿರ ಉದ್ಯೋಗ ಸೃಷ್ಟಿ - ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ

ವೈದ್ಯಕೀಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೃತಕ ಬುದ್ದಿಮತ್ತೆ ಅಧಿಪತ್ಯ ಸಾಧಿಸಲು ಹೊರಟಿದ್ದು, ಇದರಿಂದ ಅನೇಕ ಉದ್ಯೋಗ ಸೃಷ್ಟಿ ಕೂಡ ಆಗುತ್ತಿದೆ.

Artificial Intelligence has huge demand in Tech created large employment

author img

By

Published : Mar 21, 2023, 2:08 PM IST

ಬೆಂಗಳೂರು: ಸದ್ಯ ಕೃತಕ ಬುದ್ಧಿಮತ್ತೆ ಜಗತ್ತನ್ನು ಆಳಹೊರಟಿದೆ ಎಂದರೆ ತಪ್ಪಾಗಲಾರದು. ಚಾಟ್​ಜಿಪಿಟಿ ಬಳಿಕ ಕೃತಕ ಬುದ್ದಿಮತ್ತೆ ಅಭಿವೃದ್ಧಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಪರ್ಧೆ ಶುರುವಾಗಿದೆ. ಇದರಿಂದಾಗಿ ಭಾರತದಲ್ಲಿ 45 ಸಾವಿರ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಈ ಸಂಬಂಧ ತಂತ್ರಜ್ಞಾನ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹುಡುಕಾಟ ನಡೆಸುವ ಟೀಮ್​ಲೀಸ್​ ಡಿಜಿಟಲ್​ ವರದಿ ಪ್ರಕಟಿಸಿದ್ದು, ಭಾರತದಲ್ಲಿ 45 ಸಾವಿರ ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ (ಎಐ) ಉದ್ಯೋಗಾವಕಾಶವಿದೆ. ಸೈಟಿಂಸ್ಟ್​ ಮತ್ತು ಮೆಷಿನ್​ ಲರ್ನಿಂಗ್​ (ಎಂಎಲ್​) ಇಂಜಿನಿಯರ್​ಗಳಿಗೆ ಹೆಚ್ಚಿನ ವೃತ್ತಿ ಅವಕಾಶ ಇದೆ ಎಂದು ಹೇಳಿದೆ.

ಕೆಲವು ಆಯ್ದ ಕ್ಷೇತ್ರದಲ್ಲಿ ಎಐ ಸಾಮರ್ಥ್ಯದ ವಿಶ್ಲೇಷಣೆ ನಡೆಸಲಾಗಿದೆ. ಕೈಗಾರಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಎಐ ಪರಿಣತಿ ಹೊಂದಿರುವವರಿಗೆ ಬೇಡಿಕೆ ಹೆಚ್ಚಿದೆ. ಎಂಎಲ್​ ಸ್ಕೇಲೆಬಲ್​ಗೆ ಗಮನ ಹೆಚ್ಚಿದ್ದು, ವೃತ್ತಿಪರ ಬರವಣಿಗೆ ಭಾಷೆಗಳ ಪ್ರಾವೀಣ್ಯತೆಯ ಎಐ ವೃತ್ತಿಪರರಿಗೆ ಬೇಡಿಕೆ ಹೆಚ್ಚಿದೆ. ಎಂಎಲ್​ನ ಮಾದರಿಗಳ ನಿರ್ಮಾಣ ಎಐ ವೃತ್ತಿ ಜೀವನಕ್ಕೆ ಅಗತ್ಯವಾಗಿರುವ ಸ್ಕಿಲ್​ ಒಳಗೊಂಡಿದೆ.

ಯಾವ ಕ್ಷೇತ್ರದಲ್ಲಿ ಉದ್ಯೋಗಾವಕಾಶ?: ಆರೋಗ್ಯ ಸೇವೆ (ಕ್ಲಿನಿಕಲ್​ ಡಾಟಾ ಅನಾಲಿಸ್ಟ್​​, ಮೆಡಿಕಲ್​ ಇಮೇಂಜಿಂಗ್​ ಸ್ಪೆಷಲಿಸ್ಟ್​, ಆರೋಗ್ಯ ಮಾಹಿತಿ ವಿಶ್ಲೇಷಣೆ ಸೇರಿದಂತೆ ಹಲವು ಕ್ಷೇತ್ರ) ಶಿಕ್ಷಣ (ಎಜುಡೆಕ್​ ಪ್ರೊಡಕ್ಟ್​​ ಮ್ಯಾನೇಜರ್​, ಎಐ ಲರ್ನಿಂಗ್​ ಆರ್ಕಿಟೆಕ್ಚರ್​, ಎಐ ಕ್ಯಾರಿಕುಲಮ್​ ಡೆವಲಪ್ರ್​, ಚಾಟ್​ಬೂಟ್​ ಡೆವಲಪತ್​​ ಮುಂದಾದವು), ಬಿಎಫ್​ಎಸ್​ಐ (ವಂಚನೆ ವಿಶ್ಲೇಷಣೆ, ಕ್ರೆಡಿಟ್​ ರಿಸ್ಕ್​ ಅನಾಲಿಸ್ಟ್​) ಉತ್ಪಾದನೆ (ಇಂಡಸ್ಟಿಯಲ್​ ಡಾಟಾ ಸೈಂಟಿಂಸ್ಟ್​, ಕ್ಯೂಸಿ ಆನಾಲಿಸ್ಟ್​ ಪ್ರೊಸೆಸ್​ ಆಟೊಮೆಷನ್​ ಸ್ಪೆಷಲಿಸ್ಟ್​​, ರೊಬೊಟಿಕ್​ ಇಂಜಿನಿಯರ್​ ಇತ್ಯಾದಿ) ಮತ್ತು ರಿಟೇಲ್​ (ರಿಟೇಲ್​ ಡಾಟಾ ಅನಾಲಿಸ್ಟ್​, ಐಟಿ ಮಾಡೆಲರ್​, ಡಿಜಿಟಲ್​ ಇಮೇಂಜಿಂಗ್​ ಲೀಡರ್​) ಈ ಕ್ಷೇತ್ರಗಳಲ್ಲಿ ಎಐ ಪ್ರಮುಖ ಹುದ್ದೆಗಳನ್ನು ಹೊಂದಿದೆ.

ವರದಿ ಅನುಸಾರ ಡಾಟಾ ಮತ್ತು ಎಂಎಲ್​ ಇಂಜಿನಿಯರ್​​ ಈ ಹುದ್ದೆ ಮೂಲಕ ವಾರ್ಷಿಕ 14 ಲಕ್ಷ ರೂ ಸಂಪಾದನೆ ಮಾಡಬಹುದಾಗಿದೆ. ಡಾಟಾ ಆರ್ಕಿಟೆಕ್ಟ್​​ 12 ಲಕ್ಷ ರೂ ಸಂಪಾದನೆ ಮಾಡಬಹುದಾಗಿದ್ದು, 8 ವರ್ಷ ಅನುಭವ ಹೊಂದಿರುವವರು ವಾರ್ಷಿಕ 25 ರಿಂದ 45 ಲಕ್ಷ ಸಂಪಾದಿಸಬಹುದಾಗಿದೆ.

ಯಾರಿಗೆ ಬೇಡಿಕೆ?: ಎಐ ಕ್ರಾಂತಿಕಾರಕವಾಗಿ ಉದ್ಯೋಗ ಮಾರುಕಟ್ಟೆಯನ್ನು ಬದಲಾಯಿಸಿದ್ದು, ಶೀಘ್ರವಾಗಿ ಕೌಶಲ್ಯ ಹೊಂದಿರುವ ಪ್ರೊಫೆಷನಲ್​ಗಳ ಬೇಡಿಕೆ ಸೃಷ್ಟಿಸಿದೆ. ಡಿಸೈನ್​, ಡೆವಲಪ್​ ಮತ್ತು ಎಐ ತಂತ್ರಜ್ಞಾನವನ್ನು ಅಳವಡಿಸುವವರು ಬೇಕಾಗಿದ್ದಾರೆ ಎಂದು ಟೀಮ್​ ಲೀಸ್​ ಡಿಜಿಟಲ್​ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುನೀಲ್​ ಚೆಮ್ಮನ್​ಕೊಟಿಲ್​ ತಿಳಿಸಿದ್ದಾರೆ.

ಇಂದು ಮಾರುಕಟ್ಟೆ ವೇಗವಾಗಿ ಬದಲಾವಣೆಗೊಳ್ಳುತ್ತಿದ್ದು, ಎಐ ಸ್ಕಿಲ್​​ ವೃತ್ತಿ ಜೀವನ ಬೆಳವಣಿಗೆಯಲ್ಲಿ ಪ್ರಮುಖವಾಗಿದೆ. ಎಐ ಸ್ಕಿಲ್​ ಕಲಿಕೆ ವೃತ್ತಿಜೀವನಕ್ಕೆ ದೀರ್ಘಾವಧಿಯ ಪ್ರಯೋಜನಗಳನ್ನು ಒದಗಿಸಬಹುದು ಎಂದು ಟೀಮ್‌ಲೀಸ್ ಡಿಜಿಟಲ್‌ನ ಮುಖ್ಯ ವ್ಯಾಪಾರ ಅಧಿಕಾರಿ ಶಿವ ಪ್ರಸಾದ್ ನಂದೂರಿ ಹೇಳಿದರು.

ಟೀಮ್​ಲೀಸ್​ ಡಿಜಿಟಲ್​ ಸಮೀಕ್ಷೆ ಅನುಸಾರ, ಶೇ 37ರಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳು ಎಐ ಸಂಬಂಧಿತ ಟೂಲ್​ಗಳನ್ನು ಅಬಿವೃದ್ಧಿಪಡಿಸಲು ಮುಂದಾಗಿದೆ. ಶೇ 30ರಷ್ಟು ಸಂಸ್ಥೆಗಳು ಕೆಲಸದಲ್ಲಿ ಟ್ಯಾಲೆಂಟ್​ ಅನ್ವೇಷಣೆಯಲ್ಲಿ ಎಐ ಕಲಿಕೆ ಉಪಕ್ರಮ ಕಡ್ಡಾಯ ಮಾಡಿದೆ. ಶೇ 56ರಷ್ಟು ಸಂಸ್ಥೆಗಳು ಎಐ ಬೇಡಿಕೆ ಮತ್ತು ಪೂರೈಕೆ ಗ್ಯಾಪ್​ ತುಂಬಲು ಅಗತ್ಯ ಉಪಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದೆ.

ಇದನ್ನೂ ಓದಿ: ಮೊಬೈಲ್​ ಗೇಮ್​ ಸ್ಟೋರ್​ ಅಭಿವೃದ್ಧಿಪಡಿಸಿ ಆ್ಯಪಲ್​, ಗೂಗಲ್​ ವಿರುದ್ಧ ಮೈಕ್ರೋಸಾಫ್ಟ್​ ಸ್ಪರ್ಧೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.