ಸ್ಯಾನ್ ಫ್ರಾನ್ಸಿಸ್ಕೋ: ಆಪಲ್ ಕಂಪನಿ ಈ ವರ್ಷದ ಕೊನೆಯಲ್ಲಿ M2 ಚಿಪ್‌ನೊಂದಿಗೆ ಹಲವಾರು ಹೊಸ ಮ್ಯಾಕ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಕಂಪನಿಯು 13-ಇಂಚಿನ ಮ್ಯಾಕ್‌ಬುಕ್ ಪ್ರೊ, ಮ್ಯಾಕ್ ಮಿನಿ, 24 - ಇಂಚಿನ ಐಮ್ಯಾಕ್ ಮತ್ತು ಮರುವಿನ್ಯಾಸಗೊಳಿಸಲಾದ ಮ್ಯಾಕ್‌ಬುಕ್ ಏರ್ನನ್ನು M2 ಚಿಪ್‌ನೊಂದಿಗೆ ಬಿಡುಗಡೆಗೊಳಿಸಲಿದೆ ಎಂದು ದಿ ವರ್ಜ್ ವರದಿ ಮಾಡಿದೆ.
M2 ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದೆಂದು ನಂಬಲಾಗಿದ್ದು, ಇದು ಪ್ರಸ್ತುತ ಇರುವ M1ಗಿಂತ ಬದಲಾಗಿರಬಹುದು ಎನ್ನಲಾಗ್ತಿದೆ. M2 8-ಕೋರ್ಗಿಂತ ಹೆಚ್ಚಿನ CPU ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಇದನ್ನು ಸಣ್ಣ ನೋಡ್‌ನಲ್ಲಿ ನಿರ್ಮಿಸಲಾಗಿರುವುದರಿಂದ ವೇಗ ಮತ್ತು ದಕ್ಷತೆ ಹೆಚ್ಚಿರುತ್ತದೆ.
ಇದನ್ನೂ ಓದಿ:ಹೊಟ್ಟೆಯೊಳಗೆ ಇದ್ದ ಗ್ಲಾಸ್ ಹೊರತೆಗೆದ ವೈದ್ಯರು: ಅಷ್ಟಕ್ಕೂ ಅದು ದೇಹ ಸೇರಿದ್ದೇಗೆ!?
M1 ಚಿಪ್ನಲ್ಲಿ 7 ರಿಂದ 8-ಕೋರ್ GPU ಆಯ್ಕೆಗಳಿದ್ದು, M2 9 ರಿಂದ 10-ಕೋರ್ GPU ಆಯ್ಕೆಗಳನ್ನು ಹೊಂದುವ ನಿರೀಕ್ಷೆಯಿದೆ. ಈ ನಡುವೆ TSMC ತನ್ನ ಮೊದಲ 3nm ಚಿಪ್‌ಗಳನ್ನು 2023 ರಲ್ಲಿ ಬಿಡುಗಡೆ ಮಾಡಲಿದೆ.
ಆಪಲ್ ಈಗಾಗಲೇ 5G iPhone SE, 5G iPad Air ಮತ್ತು ಸಂಭಾವ್ಯವಾಗಿ ಒಂದು ಹೊಸ Mac ಅನ್ನು ಮಾರ್ಚ್ 8 ರ ಈವೆಂಟ್‌ನಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ. ಐಫೋನ್ ತಯಾರಕರು ಮಾರ್ಚ್‌ನಲ್ಲಿ ಫೇಸ್ ಮಾಸ್ಕ್-ಸ್ನೇಹಿ ಫೇಸ್ ಐಡಿಯೊಂದಿಗೆ ಬರುವ iOS 15.4 ಅನ್ನು ಹೊರತರಲು ಸಿದ್ಧರಾಗಿದ್ದಾರೆ.