ETV Bharat / science-and-technology

ಆ್ಯಪಲ್​​ ಸೇವಿಂಗ್ಸ್​​ ಅಕೌಂಟ್​: ನಾಲ್ಕೇ ದಿನಗಳಲ್ಲಿ 1 ಬಿಲಿಯನ್ ಡಾಲರ್ ಠೇವಣಿ

ಆ್ಯಪಲ್ ಇದೀಗ ಹಣಕಾಸು ವಲಯಕ್ಕೂ ಕಾಲಿಟ್ಟಿದೆ. ಕಂಪನಿಯು ಅಮೆರಿಕದಲ್ಲಿ ಈಗ ಗ್ರಾಹಕರಿಗಾಗಿ ಉಳಿತಾಯ ಠೇವಣಿ ಖಾತೆ ಯೋಜನೆ ಆರಂಭಿಸಿದೆ.

Apple's savings account draws nearly $1 bn in deposits in just 4 days

author img

By

Published : May 2, 2023, 1:17 PM IST

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ) : ಐಪೋನ್ ತಯಾರಿಸುವ ಆ್ಯಪಲ್ ಕಂಪನಿ ಈಗ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಸದ್ಯ ಆ್ಯಪಲ್ ಅಮೆರಿಕದಲ್ಲಿ ಉಳಿತಾಯ ಠೇವಣಿ ಖಾತೆ ಯೋಜನೆಯನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬಡ್ಡಿದರ ನೀಡುವ ಉಳಿತಾಯ ಯೋಜನೆ ಎಂದೇ ಜನಪ್ರಿಯವಾಗಿರುವ ಆ್ಯಪಲ್ ಸೇವಿಂಗ್ಸ್​ ಅಕೌಂಟ್​ ಯೋಜನೆ ಆರಂಭವಾದ ಕೇವಲ ನಾಲ್ಕು ದಿನಗಳಲ್ಲಿ ಸುಮಾರು 1 ಶತಕೋಟಿ ಡಾಲರ್ ಠೇವಣಿಗಳನ್ನು ಸಂಗ್ರಹಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದ ಅನೇಕ ಬ್ಯಾಂಕ್​ಗಳು ದಿವಾಳಿಯಾಗಿ ಗ್ರಾಹಕರ ವಿಶ್ವಾಸ ಕಳೆದುಕೊಳ್ಳುತ್ತಿರುವ ಮಧ್ಯೆ ಆ್ಯಪಲ್ ಉಳಿತಾಯ ಯೋಜನೆ ಗ್ರಾಹಕರ ವಿಶ್ವಾಸ ಗಳಿಸುತ್ತಿದೆ.

ಯೋಜನೆ ಆರಂಭವಾದ ವಾರದ ಅಂತ್ಯದ ವೇಳೆಗೆ ಸರಿಸುಮಾರು 2,40,000 ಖಾತೆಗಳನ್ನು ತೆರೆಯಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಆ್ಯಪಲ್​​ನ ಉಳಿತಾಯ ಖಾತೆ ಯೋಜನೆಯು ಗೋಲ್ಡ್‌ಮನ್ ಸ್ಯಾಕ್ಸ್​ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದೆ. ಆದಾಗ್ಯೂ ಈವರೆಗೂ ಎಷ್ಟು ಡಿಪಾಸಿಟ್ ಬಂದಿದೆ ಹಾಗೂ ಎಷ್ಟು ಖಾತೆಗಳನ್ನು ತೆರೆಯಲಾಗಿದೆ ಎಂಬ ಬಗ್ಗೆ ಆ್ಯಪಲ್ ಅಥವಾ ಗೋಲ್ಡ್​ಮನ್ ಸ್ಯಾಕ್ಸ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಶ್ವದ ಬೃಹತ್ ತಂತ್ರಜ್ಞಾನ ಕಂಪನಿಗಳಲ್ಲೊಂದಾಗಿರುವ ಆ್ಯಪಲ್, ತನ್ನ ಆ್ಯಪಲ್ ಕಾರ್ಡ್​ ಗ್ರಾಹಕರಿಗಾಗಿ ವಾರ್ಷಿಕ ಶೇ 4.15 ರಷ್ಟು ಬಡ್ಡಿದರ ನೀಡುವ ಉಳಿತಾಯ ಖಾತೆ ಯೋಜನೆ ಆರಂಭಿಸಿತ್ತು. "ಆ್ಯಪಲ್ ಕಾರ್ಡ್ ಬಳಕೆದಾರರು ಗೋಲ್ಡ್‌ಮನ್ ಸ್ಯಾಕ್ಸ್​ನ ಉಳಿತಾಯ ಖಾತೆಯೊಂದಿಗೆ ದೈನಂದಿನ ನಗದು ಬಹುಮಾನಗಳನ್ನು ಪಡೆಯಬಹುದು. ಇದು 4.15 ಶೇಕಡಾ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಇದು ರಾಷ್ಟ್ರೀಯ ಸರಾಸರಿಗಿಂತ 10 ಪಟ್ಟು ಹೆಚ್ಚು" ಎಂದು ಕಂಪನಿ ಹೇಳಿದೆ.

ಯಾವುದೇ ಶುಲ್ಕವಿಲ್ಲದೇ, ಕನಿಷ್ಠ ಠೇವಣಿಯ ಮಿತಿ ಇಲ್ಲದೇ ಮತ್ತು ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಳಿಲ್ಲದೆ ಬಳಕೆದಾರರು ತಮ್ಮ ಉಳಿತಾಯ ಖಾತೆಯನ್ನು ವಾಲೆಟ್‌ನಲ್ಲಿನ ಆ್ಯಪಲ್ ಕಾರ್ಡ್‌ನಿಂದ ನೇರವಾಗಿ ಹೊಂದಿಸಬಹುದು ಮತ್ತು ನಿರ್ವಹಿಸಬಹುದು. "ಉಳಿತಾಯ ಖಾತೆಯು ನಮ್ಮ ಬಳಕೆದಾರರಿಗೆ ಅವರ ನೆಚ್ಚಿನ ಆ್ಯಪಲ್​​ ಕಾರ್ಡ್​ನ 'ಡೈಲಿ ಕ್ಯಾಶ್' ಯೋಜನೆಯಿಂದ ಮತ್ತಷ್ಟು ಪ್ರಯೋಜನ ಪಡೆಯಲು ಅನುಕೂಲ ಮಾಡಿಕೊಡುತ್ತದೆ ಮತ್ತು ಅವರಿಗೆ ನಿತ್ಯ ಹಣವನ್ನು ಉಳಿಸಲು ಸುಲಭವಾದ ಮಾರ್ಗವನ್ನು ಒದಗಿಸುತ್ತದೆ" ಎಂದು ಆ್ಯಪಲ್ ಪೇ ಮತ್ತು ಆ್ಯಪಲ್ ವ್ಯಾಲೆಟ್​ನ ಉಪಾಧ್ಯಕ್ಷ ಜೆನ್ನಿಫರ್ ಬೈಲಿ ಹೇಳಿದ್ದಾರೆ.

ಯಾವುದೇ ಶುಲ್ಕವಿಲ್ಲದೇ, ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ಅಥವಾ ಅವರ ಆಪಲ್ ಕ್ಯಾಶ್ ಕಾರ್ಡ್‌ಗೆ ವರ್ಗಾಯಿಸುವ ಮೂಲಕ, ಬಳಕೆದಾರರು ಸೇವಿಂಗ್ಸ್ ಡ್ಯಾಶ್‌ಬೋರ್ಡ್ ಬಳಸಿ ಯಾವುದೇ ಸಮಯದಲ್ಲಿ ಹಣವನ್ನು ಹಿಂಪಡೆಯಬಹುದು.

Apple Inc. ಕ್ಯಾಲಿಫೋರ್ನಿಯಾ ಮೂಲದ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿದ್ದು, ವಿಶೇಷವಾಗಿ ಐಫೋನ್ ಸ್ಮಾರ್ಟ್‌ಫೋನ್ ತಯಾರಿಕೆಗೆ ಹೆಸರುವಾಸಿಯಾಗಿದೆ. ಇದು ಸಾರ್ವಕಾಲಿಕ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಆಪಲ್ ಟ್ಯಾಬ್ಲೆಟ್‌ಗಳು, ಕಂಪ್ಯೂಟರ್‌ಗಳು, ಟೆಲಿವಿಷನ್‌ಗಳು, ವೈರ್‌ಲೆಸ್ ಹೆಡ್‌ಫೋನ್‌ಗಳು ಸೇರಿದಂತೆ ವಿವಿಧ ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳನ್ನು ಮಾರಾಟ ಮಾಡುತ್ತದೆ. 2022 ರಲ್ಲಿ ಟಿಮ್ ಕುಕ್ ಆ್ಯಪಲ್ ಸಿಇಒ ಆಗಿದ್ದಾರೆ.

ಇದನ್ನೂ ಓದಿ : AI ತಂತ್ರಜ್ಞಾನದಿಂದ ಅಪಾಯ:'ಎಐ ಗಾಡ್​ಫಾದರ್' ಜೆಫ್ರಿ ಹಿಂಟನ್ ವಾರ್ನಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.