ETV Bharat / science-and-technology

iPhone 15 ಬಿಸಿಯಾಗುವಿಕೆ ತಡೆಗೆ iOS 17 ಅಪ್ಡೇಟ್​ ಬಿಡುಗಡೆ ಮಾಡಿದ ಆ್ಯಪಲ್ - ಈಟಿವಿ ಭಾರತ ಕನ್ನಡ

ಐಫೋನ್ 15 ಸ್ಮಾರ್ಟ್​ಫೋನ್​ಗಳು ಅತಿಯಾಗಿ ಬಿಸಿಯಾಗುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆ್ಯಪಲ್ ಹೊಸ ಅಪ್ಡೇಟ್​ ಬಿಡುಗಡೆ ಮಾಡಿದೆ.

Apple releases new iOS 17 update to fix iPhone 15 overheating issue

author img

By ETV Bharat Karnataka Team

Published : Oct 5, 2023, 3:47 PM IST

ಹೈದರಾಬಾದ್: ಐಫೋನ್​ 15 ಸರಣಿಯ ಸ್ಮಾರ್ಟ್​ಫೋನ್​ಗಳು ಅತಿಯಾಗಿ ಬಿಸಿಯಾಗುತ್ತಿರುವುದನ್ನು ತಡೆಗಟ್ಟಲು ಆ್ಯಪಲ್ ಹೊಸ iOS 17 ಅಪ್ಡೇಟ್​ ಬಿಡುಗಡೆ ಮಾಡಿದೆ. ಹೊಸ ಅಪ್ಡೇಟ್​ iOS 17.0.3 ಐಫೋನ್ 15 ಅತಿಯಾಗಿ ಬಿಸಿಯಾಗುವ ಸಮಸ್ಯೆಗೆ ಪರಿಹಾರ ನೀಡಲಿದೆ. "ಹೊಸ ಅಪ್ಡೇಟ್​ ಪ್ರಮುಖ ಬಗ್​ ಫಿಕ್ಸಿಂಗ್ ಮತ್ತು ಭದ್ರತಾ ನವೀಕರಣಗಳನ್ನು ಒದಗಿಸುತ್ತದೆ" ಎಂದು ಟೆಕ್ ದೈತ್ಯ ಆ್ಯಪಲ್ ಹೇಳಿದೆ.

ಕೆಲ ಬಳಕೆದಾರರು ತಮ್ಮ ಐಫೋನ್​ಗಳು ಅತಿಯಾಗಿ ಬಿಸಿಯಾಗುತ್ತಿರುವ ಬಗ್ಗೆ ದೂರು ನೀಡಿದ್ದರು. ಆದಾಗ್ಯೂ, ಎಷ್ಟು ಬಳಕೆದಾರರಿಗೆ ಈ ಸಮಸ್ಯೆಯಾಗಿದೆ ಎಂಬುದು ಸ್ಪಷ್ಟವಾಗಿಲ್ಲ. iOS 17 ಸಾಫ್ಟ್‌ವೇರ್ ಮತ್ತು ಇನ್​ಸ್ಟಾಗ್ರಾಮ್​ನಂಥ ಕೆಲ ಥರ್ಡ್-ಪಾರ್ಟಿ ಅಪ್ಲಿಕೇಶನ್​ಗಳಲ್ಲಿನ ದೋಷ ಸೇರಿದಂತೆ ಹೊಸ ಐಫೋನ್​ಗಳು ನಿರೀಕ್ಷೆಗಿಂತ ಹೆಚ್ಚು ಬಿಸಿಯಾಗಲು ಕಾರಣವಾಗುವ ಕೆಲ ಸಮಸ್ಯೆಗಳನ್ನು ಆ್ಯಪಲ್ ಗುರುತಿಸಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.

ಹೆಚ್ಚುವರಿಯಾಗಿ, ಇತ್ತೀಚಿನ ಅಪ್ಡೇಟ್​ ಎರಡು ಸೆಕ್ಯೂರಿಟಿ ಫಿಕ್ಸ್​ಗಳನ್ನು ಒಳಗೊಂಡಿದೆ. ಇದರಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಲಾದ ದೋಷದ ಪರಿಹಾರವೂ ಸೇರಿದೆ. "ಸುಧಾರಿತ ತಪಾಸಣೆಯೊಂದಿಗೆ ಸಮಸ್ಯೆಯನ್ನು ಪರಿಹರಿಸಲಾಗಿದೆ" ಎಂದು ಆ್ಯಪಲ್ ತಿಳಿಸಿದೆ. iOS 17.0.3 ಮತ್ತು iPadOS 17.0.3 ಈಗ iOS 17 ಮತ್ತು iPadOS 17 ಗೆ ಹೊಂದಿಕೆಯಾಗುವ ಐಫೋನ್ ಮತ್ತು ಐಪ್ಯಾಡ್ ಮಾದರಿಗಳಿಗೆ ಲಭ್ಯವಿದೆ. 420 ಎಂಬಿ ಗಾತ್ರದ ಅಪ್ಡೇಟ್​ ಅನ್ನು ಈಗ ಐಫೋನ್ ಬಳಕೆದಾರರು ಇನ್​ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ವಿವಿಧ ಟೆಕ್ ವಿಶ್ಲೇಷಕರ ಪ್ರಕಾರ, ಉಕ್ಕು ಮತ್ತು ಅಲ್ಯೂಮಿನಿಯಂಗೆ ಹೋಲಿಸಿದರೆ ಶಾಖದ ಕಳಪೆ ವಾಹಕವಾಗಿರುವ ಟೈಟಾನಿಯಂ ಬಳಕೆಯಿಂದಾಗಿ ಬಿಸಿಯಾಗುವ ಸಮಸ್ಯೆ ಉಂಟಾಗಬಹುದು. ಟೈಟಾನಿಯಂ ಬಳಕೆಯಿಂದಲೇ ಫೋನ್ ಬಿಸಿಯಾಗುತ್ತಿದೆ ಎಂದು ಬಹುತೇಕರ ಅಭಿಪ್ರಾಯವಾಗಿದ್ದರೂ, ಹೊಸ ಎ 17 ಪ್ರೊ ಚಿಪ್ ಕೂಡ ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ಐಫೋನ್ 15 ಸೆಪ್ಟೆಂಬರ್ 12, 2023 ರಂದು ಬಿಡುಗಡೆಯಾಗಿದೆ. ಇದು ಸಾಂಪ್ರದಾಯಿಕ ಆ್ಯಪಲ್ ವಿನ್ಯಾಸ ಮತ್ತು ವಿವಿಧ ಬಳಕೆದಾರರ ಅಗತ್ಯಗಳನ್ನು ಪೂರೈಸುವ ವಿಶೇಷಣಗಳನ್ನು ಹೊಂದಿದೆ. ಐಫೋನ್ 15 ನ 128 ಜಿಬಿ ಸ್ಟೋರೇಜ್ ಮಾದರಿಯ ಬೆಲೆ ಸುಮಾರು 79,900 ರೂ. ಆಗಿದೆ.

ಆ್ಯಪಲ್ ಇಂಕ್ (ಹಿಂದೆ ಆಪಲ್ ಕಂಪ್ಯೂಟರ್ ಇಂಕ್.) ಇದು ಐಫೋನ್, ಐಪ್ಯಾಡ್ ಮತ್ತು ಮ್ಯಾಕಿಂತೋಷ್ ಕಂಪ್ಯೂಟರ್​ಗಳನ್ನು ತಯಾರಿಸುವ ಅಮೇರಿಕನ್ ಕಂಪ್ಯೂಟರ್ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿದೆ. ಆ್ಯಪಲ್ ಜಾಗತಿಕವಾಗಿ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಇದು 2 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದೆ. (ಐಎಎನ್‌ಎಸ್)

ಇದನ್ನೂ ಓದಿ : ಈ ವರ್ಷ 5G ಫೋನ್​ ಖರೀದಿಸಲಿದ್ದಾರೆ 3 ಕೋಟಿ ಜನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.