ಸ್ಯಾನ್ ಫ್ರಾನ್ಸಿಸ್ಕೋ: ಟೆಕ್ ದೈತ್ಯ ಆ್ಯಪಲ್ ಐಒಎಸ್ 15.7.1 ಮತ್ತು iPadOS 15.7.1 ಜೊತೆಗೆ ಭದ್ರತಾ ನವೀಕರಣಗಳು ಮತ್ತು iOS 16 ಗೆ ಅಪ್ಡೇಟ್ಗೆ ಸಾಧ್ಯವಾಗದ ಅಥವಾ iOS 16 ಗೆ ಅಪ್ಡೇಟ್ ಬಯಸದ ಸಾಧನಗಳಿಗೆ ಪ್ಯಾಚ್‌ಗಳನ್ನು ಬಿಡುಗಡೆ ಮಾಡಿದೆ.
AppleInsider ಪ್ರಕಾರ, ಐಒಎಸ್ 15 ಮತ್ತು ಐಪ್ಯಾಡ್ಒಎಸ್ 15 ಬಳಕೆದಾರರಿಗೆ ಹೊಸ ಅಪ್ಡೇಟ್ ಒಂದೇ ರೀತಿಯ ದೋಷಗಳನ್ನು ಸರಿಪಡಿಸುತ್ತದೆ. ಇತ್ತೀಚಿನ ಐಒಎಸ್ 16.1 ಮತ್ತು macOS Ventura ಬಿಡುಗಡೆಗಳಲ್ಲಿ ಕಂಡು ಬರುವ ಭದ್ರತಾ ಅಪ್ಡೇಟ್ಗಳನ್ನು ಸೇರಿಸಿದೆ.
ಭದ್ರತಾ ಸಮಸ್ಯೆಗಳಿಗೆ ಪ್ಯಾಚ್ ಮಾಡಲಾದ 17 ವಿಭಿನ್ನ ಸಿಸ್ಟಮ್‌ಗಳನ್ನು ಇದು ಒಳಗೊಂಡಿದೆ. ಬಳಕೆದಾರರು iOS 15.7.1 ಅಥವಾ iPadOS 15.7.1 ಗೆ ಅಪ್ಡೇಟ್ ಮಾಡಲು ಇಚ್ಛಿಸಿದವರು ಸಾಧ್ಯವಾದಷ್ಟು ಬೇಗ ಅಪ್ಟೇಟ್ ಮಾಡಬೇಕು. ಇಲ್ಲವಾದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಅಪ್‌ಡೇಟ್‌ನೊಂದಿಗೆ ಆ್ಯಪಲ್ ನ್ಯೂರಲ್ ಇಂಜಿನ್, ಆಡಿಯೋ, ಬ್ಯಾಕಪ್, ಫೇಸ್‌ಟೈಮ್, ಗ್ರಾಫಿಕ್ಸ್ ಡ್ರೈವರ್, ಇಮೇಜ್ ಪ್ರೊಸೆಸಿಂಗ್, ಕರ್ನಲ್, ಮಾಡೆಲ್ I/O, ಪಿಪಿಪಿ, ಸಫಾರಿ, ವೆಬ್ಕಿಟ್, ವೈಪೈ ಮತ್ತು ಜ್ಲಿಬ್ ಅಪ್ಡೇಟ್ ವರ್ಸನ್ಗೆ ಬದಲಾಗುತ್ತವೆ.
ಹೊಸ ಅಪ್‌ಡೇಟ್ ಈ ಕೆಳಗಿನ ಸಾಧನಗಳಿಗೆ ಲಭ್ಯವಿರುತ್ತದೆ: iPhone 6s ತಲೆಮಾರಿನ ಫೋನ್ಗಳು, iPad Pro ಎಲ್ಲಾ ಮಾದರಿಗಳು, iPad Air 2 ಮಾದರಿಯ ಫೋನ್ಗಳು, iPad 5 ನೇ ತಲೆಮಾರಿನ ಪೋನ್ಗಳು, iPad mini 4 ತಲೆಮಾರಿನ ಫೋನ್ಗಳು ಮತ್ತು iPod touch 7 ನೇ ತಲೆಮಾರಿನ ಫೋನ್ಗಳಿಗೆ ಮಾತ್ರ ಈ ಅಪ್ಡೇಟ್ ಲಭ್ಯವಿರುತ್ತದೆ.
ಓದಿ: ಆ್ಯಪಲ್ IOS 16 ಶೀಘ್ರದಲ್ಲಿ : ಏನೆಲ್ಲಾ ನವೀಕರಣಗೊಳ್ಳಲಿದೆ ಎಂಬ ಮಾಹಿತಿ ಇಲ್ಲಿದೆ..