ETV Bharat / science-and-technology

ಬೆಂಗಳೂರಿನ ಹೃದಯ ಭಾಗದಲ್ಲಿ 15 ಅಂತಸ್ತಿನ ಬೃಹತ್ ಕಚೇರಿ ತೆರೆದ ಆ್ಯಪಲ್​ - ಬೆಂಗಳೂರಿನಲ್ಲಿ ಆ್ಯಪಲ್ ಕಚೇರಿ

Apple office in Bengaluru: ಬೆಂಗಳೂರಿನಲ್ಲಿ ಹದಿನೈದು ಅಂತಸ್ತಿನ ಅತ್ಯಾಧುನಿಕ ಕಚೇರಿಯನ್ನು ಆ್ಯಪಲ್​ ಕಂಪನಿ ತೆರೆದಿದೆ.

Apple opens new office heart of Bengaluru

author img

By ETV Bharat Karnataka Team

Published : Jan 17, 2024, 2:12 PM IST

ಹೈದರಾಬಾದ್​: ಬೆಂಗಳೂರಿನ ಹೃದಯ ಭಾಗದಲ್ಲಿ ಅಮೆರಿಕದ ಟೆಕ್​ ದಿಗ್ಗಜ ಆ್ಯಪಲ್ ಕಂಪನಿ​ ತನ್ನ ಹೊಸ ಕಚೇರಿ ತೆರೆಯುವ ಮೂಲಕ ಭಾರತದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸುತ್ತಿರುವುದಾಗಿ ಘೋಷಿಸಿದೆ. ಕಬ್ಬನ್​​ ಪಾರ್ಕ್​ ಮೆಟ್ರೋ ನಿಲ್ದಾಣದ ಸಮೀಪದ ಮಿನ್ಸ್ಕ್​​ ಸ್ಕ್ವೇರ್​ನಲ್ಲಿ ಈ ಕಚೇರಿ ತೆರಯಲಾಗಿದೆ. 1,200 ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 15 ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಲ್ಯಾಬ್‌​​ ಸ್ಪೇಸ್​, ಸಹಯೋಗ ಪ್ರದೇಶ ಮತ್ತು ವೆಲ್ನೆಸ್​, ಕೆಫೆ ಮ್ಯಾಕ್ಸ್​​ ಮುಂತಾದವು ಇರಲಿದೆ.

ಈ ಕುರಿತು ಮಾತನಾಡಿರುವ ಆ್ಯಪಲ್​ ವಕ್ತಾರರು, "ನಮ್ಮ ಪ್ರತಿಭಾವಂತ ತಂಡದ ಅನೇಕರ ಮನೆ ಬೆಂಗಳೂರು. ನಮ್ಮ ಸಾಫ್ಟ್​ವೇರ್​, ಹಾರ್ಡ್​ವೇರ್​ ತಂತ್ರಜ್ಞಾನ, ಆಪರೇಷನ್ಸ್​​, ಗ್ರಾಹಕ ಬೆಂಬಲ ವ್ಯವಸ್ಥೆ ಇಲ್ಲಿಯೇ ಇದೆ. ಈ ಹೊಸ ಉದ್ಯೋಗ ಸ್ಥಳವು ವೇಗದ ಅವಿಷ್ಕಾರ, ಕ್ರಿಯಾತ್ಮಕತೆ ಮತ್ತು ಸಂಪರ್ಕವನ್ನು ಸೃಷ್ಟಿಸುತ್ತದೆ. ನಮ್ಮ ತಂಡದ ಸಹಯೋಗಕ್ಕೆ ಇದು ಅದ್ಬುತ ಜಾಗವಾಗಿದೆ" ಎಂದು ಹೇಳಿರುವುದಾಗಿ ಐಎಎನ್​ಎಸ್​ ವರದಿ ಮಾಡಿದೆ.

ಕಚೇರಿಯ ಒಳಾಂಗಣದ ಗೋಡೆ ಮತ್ತು ಫ್ಲೋರಿಂಗ್​​ ಕಲ್ಲು, ಮರ, ಫ್ಯಾಬ್ರಿಕ್​​ ವಿನ್ಯಾಸಕ್ಕೆ ಸ್ಥಳೀಯ ವಸ್ತುಗಳನ್ನು ಬಳಕೆ ಮಾಡಲಾಗಿದೆ. ಸ್ಥಳೀಯ ಗಿಡಗಳಿಂದಲೇ ಅಲಂಕರಿಸಲಾಗಿದೆ. ಹೊಸ ಕಚೇರಿಯು ಶಕ್ತಿ ಸಂರಕ್ಷಣೆಯ ಪ್ರಯೋಗ ಹೊಂದಿದೆ. ಇಂಗಾಲ ಮುಕ್ತವಾಗಿ ಶೇ.100ರಷ್ಟು ನವೀಕರಿಸಬಹುದಾದ ಶಕ್ತಿ ಹೊಂದಿದ್ದು, ಪರಿಸರಸ್ನೇಹಿ ವಿನ್ಯಾಸ (ಎಲ್​ಇಇಡಿ)ದೊಂದಿಗೆ ನಿರ್ಮಾಣಗೊಂಡಿದೆ. ಆ್ಯಪಲ್​ 2020ರಿಂದಲೂ ತಮ್ಮ ಕಾರ್ಪೊರೇಟ್​ ಕಾರ್ಯಾಚರಣೆಯಲ್ಲಿ ಇಂಗಾಲದ ಕುರಿತು ತಟಸ್ಥ ನೀತಿ ಅನುಸರಿಸುತ್ತಿದೆ. ಎಲ್ಲಾ ಆ್ಯಪಲ್​ ಸೌಲಭ್ಯಗಳು ಶೇ.100ರಷ್ಟು ನವೀಕರಿಸಬಹುದಾದ ಶಕ್ತಿಯ ಸೌಲಭ್ಯವನ್ನು 2018ರಿಂದ ಹೊಂದಿದೆ.

ಈಗಾಗಲೇ ಮುಂಬೈ, ಹೈದರಾಬಾದ್​, ಗುರುಗ್ರಾಮದಲ್ಲಿ ಆ್ಯಪಲ್​ ಕಚೇರಿ ಹೊಂದಿದ್ದು, ಇದೀಗ ಬೆಂಗಳೂರಿನ ಕಚೇರಿಯು ದೇಶದಲ್ಲಿ ಆ್ಯಪಲ್​ನ 25 ವರ್ಷದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ. ಭಾರತದಲ್ಲಿ ಆ್ಯಪಲ್​ 3 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಉತ್ಪಾದನೆ, ಪೂರೈಕೆ ರೀತಿಯ ಎಲ್ಲಾ ರೀತಿಯ ಬೆಂಬಲದೊಂದಿಗೆ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಬೆಂಗಳೂರಿನಲ್ಲಿ ಆ್ಯಪಲ್​ ಸಾಫ್ಟ್​ವೇರ್​, ಹಾರ್ಡ್​ವೇರ್​, ಸರ್ವೀಸ್​, ಐಎಸ್ ಆ್ಯಂಡ್​ ಟಿ, ಆಪರೇಷನ್ಸ್​​, ಗ್ರಾಹಕರ ಬೆಂಬಲ ಮತ್ತು ಇತರೆ ವ್ಯಾಪ್ತಿಯಲ್ಲಿ ಉದ್ಯಮ ನಿರ್ವಹಣೆ ಮಾಡಲಿದೆ. ದೇಶದಲ್ಲಿ ಆ್ಯಪಲ್​ನ ಸ್ಥಳೀಯ ಉತ್ಪಾದನೆಯೂ ದ್ವಿಗುಣಗೊಂಡಿದ್ದು, 2020ರಲ್ಲಿ 1 ಲಕ್ಷ ಕೋಟಿ ಐಫೋನ್​ ಜೋಡಣೆ ಮಾಡಿದೆ ಎಂದು ವರದಿ ತಿಳಿಸಿದೆ.(ಐಎಎನ್​ಎಸ್​)

ಇದನ್ನೂ ಓದಿ: ಮಾರುಕಟ್ಟೆಗೆ ಬರ್ತಿದೆ ಐಫೋನ್​ 16: ಹಲವು ವಿಶೇಷತೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.