ಕ್ಯಾಲಿಫೋರ್ನಿಯಾ: ಎಂ3 ಚಿಪ್ (ಎಂ3, ಎಂ3 ಪ್ರೊ ಮತ್ತು ಎಂ3 ಮ್ಯಾಕ್ಸ್) ಹೊಸ ವೈಶಿಷ್ಟ್ಯದೊಂದಿಗೆ ಆ್ಯಪಲ್ ಮ್ಯಾಕ್‌ಬುಕ್ ಪ್ರೊ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. 14 ಮತ್ತು 16 ಇಂಚ್ನ ಮಾದರಿ ಜೊತೆಗೆ ಎಂ3 ಪ್ರೊ ಮತ್ತು ಎಂ3 ಮಾಕ್ಸ್ ಹೊಸ ಬ್ಲಾಕ್ ಫಿನಿಶ್ನೊಂದಿಗೆ ಇದೀಗ ಲಭ್ಯವಿದೆ.
ಮ್ಯಾಕ್‌ಬುಕ್ ಪ್ರೊ ಮಾದರಿಗಳು ಅದ್ಬುತ ಲಿಕ್ವಿಡ್ ರೆಡಿನಾ ಎಕ್ಸ್ಡಿಆರ್ ಡಿಸ್ಪ್ಲೇ ಹೊಂದುವುದರ ಜೊತೆಗೆ ಶೇ 20ರಷ್ಟ್ರು ಪ್ರಖರದ ಎಸ್ಡಿಆರ್ ಕಂಟೆಂಟ್ ಇದೆ. 1080ಪಿಕ್ಸೆಲ್ ಕ್ಯಾಮೆರಾದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರ ಆರು ಸ್ವೀಕರ್ನ ಧ್ವನಿ ವ್ಯವಸ್ಥೆ ಮೋಡಿ ಮಾಡುತ್ತದೆ. ಹಾಗೇ ವಿಶಾಲವಾದ ಕನೆಕ್ಟಿವಿಟಿ ಆಯ್ಕೆಯನ್ನು ಇದು ಹೊಂದಿದೆ.
ಗ್ರಾಹಕರು ಆ್ಯಪಲ್ ಸ್ಟೋರ್ ಮತ್ತು ಅಧಿಕೃತ ಮಾರಾಟಗಾರರ ಬಳಿಕ ಈ ಹೊಸ ಮ್ಯಾಕ್ ಬುಕ್ ಪ್ರೊ ಸಾಧನವನ್ನು ನವೆಂಬರ್ 7ರ ಬಳಿಕ ಖರೀದಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
14 ಇಂಚಿನ ಮ್ಯಾಕ್‌ಬುಕ್ ಪ್ರೊ ಎಂ3 ಆರಂಭಿಕ ಬೆಲೆ 1,69,9000ರಿಂದ ಆರಂಭವಾಗಲಿದೆ. ಶಿಕ್ಷಣ ಉದ್ದೇಶದ ಮ್ಯಾಕ್‌ಬುಕ್ ಪ್ರೊ 1,58,900 ಆಗಿದೆ. 13 ಇಂಚಿನ ಮ್ಯಾಕ್‌ಬುಕ್ ಪ್ರೊ ಜೊತೆಗೆ ಎಂ3 ಪ್ರೊ 1,99,900 ಮತ್ತು ಶಿಕ್ಷಣದ ಮ್ಯಾಕ್‌ಬುಕ್ 1,84,900 ಹಾಗೂ 16 ಇಂಚಿನ ಮ್ಯಾಕ್‌ಬುಕ್ ಪ್ರೊ 2,49,900 ಮತ್ತು ಶಿಕ್ಷಣದ ಮ್ಯಾಕ್‌ಬುಕ್ ಪ್ರೊ 2,29,900 ರೂ ಆಗಿದೆ.
ಮ್ಯಾಕ್ಪ್ರೊ ಆ್ಯಪಲ್ ಸಿಲಿಕಾನ್ನ ಶಕ್ತಿ ಸಾಮರ್ಥ್ಯದ ಡಿಸ್ಪ್ಲೇನ್ನು ಹೊಂದಿದ್ದು, 22 ಗಂಟೆಗಳ ಬ್ಯಾಟರಿ ಲೈಫ್ ಇದೆ. ಹಾಗೇ ಲಿಕ್ವಿಡ್ ರೆಟಿನಾ ಎಕ್ಸ್ಡಿಆರ್ ಡಿಸ್ಪ್ಲೇ ಮತ್ತು ಅಡ್ವಾನ್ಸ್ ಕನೆಕ್ಟಿವಿಟಿ ಹೊಂದಿದ್ದು, ಪ್ರತಿನಿತ್ಯದ ಕೆಲಸಕ್ಕೆ ಹೊಸ ಶಕ್ತಿ ನೀಡುತ್ತದೆ ಎಂದು ಆ್ಯಪಲ್ ಹಾರ್ಡ್ವೇರ್ ಇಂಜಿನಿಯರಿಂಗ್ನ ಹಿರಿಯ ಉಪಾಧ್ಯಕ್ಷ ಜಾನ್ಟೆರ್ನಸ್ ತಿಳಿಸಿದ್ದಾರೆ.
ಮ್ಯಾಕ್‌ಬುಕ್ ಪ್ರೊ ಮತ್ತು ಇದರ ಉತ್ತಮ ದರ್ಜೆಯ ಸಾಮರ್ಥ್ಯವನ್ನು ಬಳಕೆದಾರರಿಗೆ ತರಲು ನಾವು ಉತ್ಸುಕರಾಗಿದ್ದೇವೆ. ಇಂಟೆಲ್ ಆಧಾರಿತ ಮ್ಯಾಕ್‌ಬುಕ್ ಪ್ರೊನಿಂದ ಅಪ್‌ಗ್ರೇಡ್ ಮಾಡುವವರಿಗೆ, ಇದು ಬದಲಾವಣೆ ಅನುಭವವಾಗಿದೆ ಎಂದು ಟೆರ್ನುಸ್ ತಿಳಿಸಿದ್ದಾರೆ.
ಹೊಸ 14 ಇಂಚಿನ ಮ್ಯಾಕ್‌ಬುಕ್ ಪ್ರೊ ಜೊತೆಗೆ ಎಂ3 ಪ್ರತಿದಿನದ ಕೆಲಸವನ್ನು ಸುಲಭ ಮಾತ್ರವಲ್ಲ, ಪ್ರೊ ಅಪ್ಲಿಕೇಶನ್‌ಗಳು ಮತ್ತು ಗೇಮ್ಗಳು ಅಸಾಧಾರಣ ನಿರಂತರ ಕಾರ್ಯಕ್ಷಮತೆಯನ್ನು ನೀಡುತ್ತವೆ. ಇದು ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಜೊತೆಗೆ ಹೆಚ್ಚುವರಿ ಏಕಿಕೃತ ಮೆಮೊರಿ ಬೆಂಬಲವನ್ನು ಒದಗಿಸುತ್ತದೆ. ಇದು ಕೋಡರ್, ಕ್ರಿಯೇಟಿವ್ಸ್ ಮತ್ತು ಸಂಶೋಧಕರ ಬೇಡಿಕೆಗೆ ಅನುಗುಣವಾಗಿ ಕೆಲಸವನ್ನು ಸುಗಮವಾಗಿಸುತ್ತದೆ.
14 ಮತ್ತು 16 ಇಂಚಿನ ಮ್ಯಾಕ್‌ಬುಕ್ ಪ್ರೊ ಜೊತೆಗಿನ ಎಂ3 ಮ್ಯಾಕ್ಸ್ ಅತ್ಯುತ್ತಮ ಡಿಸ್ಪ್ಲೇ ಮತ್ತು ಸಾಮರ್ಥ್ಯಗಳು ಕಂಪ್ಯೂಟಿಂಗ್‌ನ ಮಿತಿ ಮೀರಿದ ಅನಭವ ನೀಡುತ್ತದೆ. ಜಿಪಿಯು ಮತ್ತು ಶಕ್ತಿಶಾಲಿ ಸಿಪಿಯು ಜೊತೆಗೆ, 128ಜಿಬಿವರೆಗಿನ ಏಕೀಕೃತ ಮೆಮೊರಿಗೆ ಬೆಂಬಲದೊಂದಿಗೆ ಎಂ3 ಮ್ಯಾಕ್ಸ್ ನೊಂದಿಗೆ ಮ್ಯಾಕ್‌ಬುಕ್ ಪ್ರಿ, ಯಂತ್ರ ಕಲಿಕೆ ಪ್ರೋಗ್ರಾಮರ್‌ಗಳು, 3ಡಿ ಕಲಾವಿದರು ಮತ್ತು ವಿಡಿಯೋ ಸಂಪಾದಕರಂತಹ ಬಳಕೆದಾರರಿಗೆ ಬಹುಕಾರ್ಯಕವನ್ನು ಸಕ್ರಿಯಗೊಳಿಸುತ್ತದೆ. (ಐಎಎನ್ಎಸ್)
ಇದನ್ನೂ ಓದಿ: ಯುಪಿಐ ಬೆಂಬಲಿಸುವ Nokia 105 Classic ಫೀಚರ್ ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?