ಕ್ಯುಪರ್ಟಿನೊ (ಕ್ಯಾಲಿಫೋರ್ನಿಯಾ): ಜನಪ್ರಿಯ ಮೊಬೈಲ್ ತಯಾರಿಕಾ ಕಂಪನಿ ಆ್ಯಪಲ್, ಹೊಸ ಎಲೆಕ್ಟ್ರಾನಿಕ್ ಸಾಧನಗಳನ್ನು ಹೊತ್ತುಕೊಂಡು ಮಾರುಕಟ್ಟೆಗೆ ಬರುತ್ತಲೆ ಇರುತ್ತದೆ. ಅದೇ ರೀತಿ ಈಗ ಆ್ಯಪಲ್ ಎರಡನೇ ತಲೆಮಾರಿನ ಹೋಮ್ಪಾಡ್ ಸ್ಪೀಕರ್ ಅನ್ನು ಬುಧವಾರ ಘೋಷಣೆ ಮಾಡಿದೆ. ಎರಡನೇ ಜನರೇಷನ್ನ ಹೋಮ್ಪಾಡ್ ಸ್ಪೀಕರ್ ಸಾಂಪ್ರಾದಾಯಿಕ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಮುಂದಿನ ಹಂತದ ಸ್ಪಷ್ಟವಾದ ಅಕೌಸ್ಟಿಕ್ ಶಬ್ದಗಳೊಂದಿಗೆ ಲಭ್ಯವಿದೆ ಎಂದು ಆ್ಯಪಲ್ ತಿಳಿಸಿದೆ. ಇದರ ಜೊತೆಗೆ ಹೊಚ್ಚ ಹೊಸ ಆ್ಯಪಲ್ ಪ್ಯಾಕ್ ಆವಿಷ್ಕಾರ ಮತ್ತು ಸಿರಿ ಇಂಟಲಿಜನ್ಸ್ನೊಂದಿಗೆ ಮತ್ತು ಕಂಪ್ಯೂಟೇಶನ್ ಆಡಿಯೋ ಮೂಲಕ ಆದ್ಭುತವಾದ ಸಂಗೀತ ಆಲಿಸುವ ಅನುಭವವನ್ನು ಹೋಮ್ಪಾಡ್ನಲ್ಲಿ ಪಡೆಯಬಹುದಾಗಿದೆ.
ಫೆಬ್ರವರಿ 3 ರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಹೋಮ್ಪಾಡ್ (ಎರಡನೇ ಜನರೇಷನ್)ನ ಬೆಲೆ 32.900ರೂ ಗಳು. ಹೋಮ್ಪಾಡ್ ಸ್ಮಾರ್ಟ್ ಸ್ಪೀಕರ್ಗಳು ಐಫೋನ್ ಎಸ್ಇ ಮತ್ತು ಐಫೋನ್ 8 ನಲ್ಲಿರುವ ಸ್ಪೀಕರ್ಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.
''ನಮ್ಮ ಆಡಿಯೋ ಪರಿಣತಿ ಮತ್ತು ಆವಿಷ್ಕಾರದ ಗುಣಮಟ್ಟವನ್ನು ಹೆಚ್ಚಿಸಿ, ಹೊಸ ಹೋಮ್ಪಾಡ್ನಲ್ಲಿ ಆಳವಾದ ಬಾಸ್, ನೈಸರ್ಗಿಕ ಮಧ್ಯಮ ಶ್ರೇಣಿಯ ಸ್ಪಷ್ಟವಾದ, ವಿವರವಾದ ಶಬ್ದವನ್ನು ನೀಡುತ್ತದೆ. ಇದಕ್ಕಿಂತ ಮೊದಲು ಬಿಡುಗಡೆಯಾದ ಹೋಮ್ಪಾಡ್ ಮಿನಿಯ ಜನಪ್ರಿಯತೆಯಿಂದ ನಾವು ಎರಡನೇ ಪೀಳಿಗೆಯ ಹೋಮ್ಪಾಡ್ ಅನ್ನು ಮಾರುಕಟ್ಟೆಗೆ ತರುತ್ತಿದ್ದೇವೆ. ಇದರಲ್ಲಿ ಶಕ್ತಿಶಾಲಿಯಾದ ಅಕೌಸ್ಟಿಕ್ ಶಬ್ದವನ್ನು ಆನಂದಿಸಬಹುದಾಗಿದೆ. ಮುಂದಿನ ಪೀಳಿಗೆಯ ಹೋಮ್ಪಾಡ್ ಅನ್ನು ಪ್ರಪಂಚದಾದ್ಯಂತ ಗ್ರಾಹಕರಿಗೆ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ ಎಂದು ಆ್ಯಪಲ್ ಸಂಸ್ಥೆಯ ವರ್ಲ್ಡ್ವೈಡ್ ಮಾರ್ಕೆಂಟಿಗ್ನ ಹಿರಿಯ ಉಪಾಧ್ಯಕ್ಷ ಗ್ರೆಗ್ ತಿಳಿಸಿದರು.
ಇದನ್ನೂ ಓದಿ: ಸ್ಯಾಮ್ಸಂಗ್ನ ISOCELL HP2 ಮಾರುಕಟ್ಟೆಗೆ ಬಿಡುಗಡೆ.. ಭಾರತದ 5G ಫೋನ್ ಮಾರುಕಟ್ಟೆ ಶೇ.70ರಷ್ಟು ವಿಸ್ತರಣೆ ಸಾಧ್ಯತೆ
ಹೋಮ್ಪಾಡ್ ಬಿಳಿ ಮತ್ತು ಮಿಡ್ನೈಟ್ ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ. ಈ ಬಣ್ಣಗಳನ್ನು ಮೆಶ್ ಫ್ಯಾಬ್ರಿಕ್ ಮತ್ತು ಪವರ್ ಕೇಬಲ್ಗಳ ಮರು ಬಳಕೆಯಿಂದ ಬಣ್ಣವನ್ನು ತಯಾರಿಸಲಾಗಿದೆ. ಮತ್ತು ಹೋಮ್ಪಾಡ್ನಲ್ಲಿ S7 ಚಿಪ್ ಮತ್ತು ಸಿಸ್ಟಮ್ ಸೆನ್ಸಿಂಗ್ ತಂತ್ರಜ್ಞಾನದೊಂದಿಗೆ ಸಾಫ್ಟ್ವೇರ್ಗಳನ್ನು ಸಂಯೋಜಿಸಲಾಗಿದ್ದು, ಇದರಿಂದ ಇನ್ನೂ ಹೆಚ್ಚು ಸುಧಾರಿತ ಕಂಪ್ಯೂಟೇಷನ್ ಆಡಿಯೋವನ್ನು ಆಲಿಸಬಹುದಾಗಿದೆ.
ಬಳಕೆದಾರರು ಆ್ಯಪಲ್ ಮ್ಯೂಸಿಕ್ನ ಸುಮಾರು 100 ಮಿಲಿಯನ್ ಹಾಡುಗಳನ್ನು ಕೇಳಬಹುದು ಮತ್ತು ಆ್ಯಪಲ್ 4k ಟಿವಿ ಹೋಮ್ಪಾಡ್ ಅನ್ನು ಸಂಯೋಜಿಸಿ ಆಕರ್ಷಕ ಹೋಮ್ ಥಿಯೇಟರ್ ಅನುಭವವನ್ನು ಪಡೆಯಬಹುದಾಗಿದೆ ಎಂದು ಆ್ಯಪಲ್ ತಿಳಿಸಿದೆ.
ಎರಡನೇ ಪೀಳಿಗೆಯ ಹೋಮ್ಪಾಡ್ನಲ್ಲಿ ಆರು ಧ್ವನಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದ ಮನೆಯ ಪ್ರತಿಯೊಬ್ಬ ಸದಸ್ಯರು ಕೂಡ ತಮ್ಮ ವೈಯಕ್ತಿಕ ಹಾಡುಗಳ ಪಟ್ಟಿಯನ್ನು ಕೇಳಬಹುದು, ಮತ್ತು ಕ್ಯಾಲೆಂಡರ್ ಈವೆಂಟ್ಗಳನ್ನು ಹೊಂದಿಸಬಹುದು ಮತ್ತು ಮರು ವಿನ್ಯಾಸಗೊಳಿಸಲಾದ ಹೋಮ್ ಅಪ್ಲಿಕೇಶನ್ನಿಂದ ಬಳಕೆದಾರರು ನ್ಯಾವಿಗೇಟ್ ಮಾಡಬಹುದು. ಹವಮಾನ ವರದಿ, ಸ್ಮಾರ್ಟ್ಹೋಮ್ನ ದೀಪಗಳ ನಿಯಂತ್ರಣ ಮತ್ತು ಮಲ್ಟಿಕ್ಯಾಮರಾ ವೀಕ್ಷಣೆಯನ್ನು ಹೊಮ್ ಅಪ್ಲಿಕೇಶನ್ ಸಹಾಯದೊಂದಿಗೆ ಪಡೆದುಕೊಳ್ಳಬಹುದು.
ಇದನ್ನೂ ಓದಿ: ಕಾಶ್ಮೀರದ ಮೊದಲ ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಾಡಿಗೆ ಸೇವೆ ಪ್ರಾರಂಭ: ವಾಯು ಮಾಲಿನ್ಯ, ಇಂಧನ ದರಗಳ ವಿರುದ್ಧ ಹೋರಾಡುವ ಗುರಿ..