ಕ್ಯಾಲಿಫೋರ್ನಿಯಾ (ಅಮೆರಿಕ): ಹಲವಾರು ಹೊಸ ಫೀಚರ್ಗಳೊಂದಿಗೆ ಆ್ಯಪಲ್ ತನ್ನ iPadOS 17 ಅನ್ನು ಲಾಂಚ್ ಮಾಡಿದೆ. ವರ್ಲ್ಡ್ವೈಡ್ ಡೆವಲಪರ್ಸ್ ಕಾನ್ಫರೆನ್ಸ್ -2023 ತಂತ್ರಜ್ಞಾನ ಸಮಾವೇಶದಲ್ಲಿ ಆ್ಯಪಲ್ ಹೊಸ OS ಅನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಹೊಸ ಟ್ಯಾಬ್ಲೆಟ್ ಸಾಫ್ಟವೇರ್ ಅಪ್ಡೇಟ್ iOS 17 ನಲ್ಲಿರುವ ಹಲವಾರು ಫೀಚರ್ಗಳನ್ನೇ ಒಳಗೊಂಡಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಉದಾಹರಣೆಗೆ ಹೊಸ ಸಂದೇಶಗಳ ವೈಶಿಷ್ಟ್ಯಗಳು (new Messages features) (ಸ್ವಯಂಚಾಲಿತ ಧ್ವನಿ ಟಿಪ್ಪಣಿ ಪ್ರತಿಲೇಖನಗಳಂತಹವು), ಸುಧಾರಿತ ಏರ್‌ಡ್ರಾಪ್ ಸಾಮರ್ಥ್ಯಗಳು ಮತ್ತು ಪಠ್ಯ ಇನ್‌ಪುಟ್‌ಗಾಗಿ ಉತ್ತಮ ಸ್ವಯಂ ಸರಿಪಡಿಸುವಿಕೆ ಫೀಚರ್ಗಳನ್ನು ಇದು ಹೊಂದಿರಬಹುದು.
ಲಾಕ್ಸ್ಕ್ರೀನ್ ಅನ್ನು ಪರ್ಸನಲೈಸ್ ಮಾಡುವ ಆಪ್ಷನ್ನೊಂದಿಗೆ ಐಪ್ಯಾಡ್ iOS ಗೆ ಮತ್ತೂ ಹತ್ತಿರವಾಗುತ್ತಿದೆ. ಇದು ಐಫೋನ್‌ನಲ್ಲಿ ಕಾರ್ಯನಿರ್ವಹಿಸುವಂತೆಯೇ ಕೆಲಸ ಮಾಡಲಿದೆ. ಆ್ಯಪಲ್‌ನ ಸಾಫ್ಟ್‌ವೇರ್ ವಿಭಾಗದ ವೈಸ್ ಪ್ರೆಸಿಡೆಂಟ್ ಆಗಿರುವ ಕ್ರೇಗ್ ಫೆಡೆರಿಘಿ ಅವರು ಹೋಮ್ ಸ್ಕ್ರೀನ್‌ನಲ್ಲಿ ಸ್ಥಾಪಿಸಬಹುದಾದ ಹೊಸ ಇಂಟರ್ಯಾಕ್ಟಿವ್ ವಿಜೆಟ್‌ಗಳನ್ನು ಸಹ ಪ್ರದರ್ಶಿಸಿದರು. iPadOS 17 ನಲ್ಲಿ ಹೆಲ್ತ್ ಆ್ಯಪ್ ಅನ್ನು ಸಹ ಸೇರಿಸಲಾಗುತ್ತದೆ.
ಐಪ್ಯಾಡ್ ಇನ್ನು ಮುಂದೆ iOS ನಂತೆಯೇ ಲೈವ್ ಆ್ಯಕ್ಟಿವಿಟೀಸ್ಗಳನ್ನು ಸಹ ತೋರಿಸಲಿದೆ. ಭವಿಷ್ಯದ ಆವೃತ್ತಿಗಳಲ್ಲಿ The Notes app ಮತ್ತು PDF annotation ಗಳನ್ನು ಕೂಡ ಹೈಲೈಟ್ ಮಾಡಲಾಗುವುದು. ಮಷಿನ್ ಲರ್ನಿಂಗ್ ಮಾಡೆಲ್ಗಳ ಮೂಲಕ iPadOS ಇನ್ನು ಮುಂದೆ PDF ನಲ್ಲಿನ ಫೀಲ್ಡ್ಗಳನ್ನು ಗುರುತಿಸಲು ಸಾಧ್ಯವಾಗಲಿದೆ ಎಂದು ಫೆಡೆರಿಘಿ ತಿಳಿಸಿದರು. iPadOS 17 ನಲ್ಲಿನ Notes app ನಲ್ಲಿ PDF ಗಳನ್ನು ನೈಜ ಸಮಯದಲ್ಲಿ ಆರ್ಗನೈಸ್ ಮಾಡಲು, annotate ಮಾಡಲು ಮತ್ತು collaborate ಮಾಡಲು ಹೊಸ ಸೌಲಭ್ಯಗಳನ್ನು ಹೊಂದಿರಲಿದೆ.
ಆ್ಯಪಲ್ ಕಳೆದ ತಿಂಗಳು ಐಪ್ಯಾಡ್ಗಾಗಿ Final Cut Pro ಮತ್ತು Logic Pro ಗಳನ್ನು ಪರಿಚಯಿಸಿತ್ತು. ಇವನ್ನು ಪರಿಚಯಿಸುವಂತೆ ಟ್ಯಾಬ್ಲೆಟ್ಗಳಲ್ಲಿ ಪ್ರೊಫೆಶನಲ್ ಗ್ರೇಡ್ ಸಾಫ್ಟವೇರ್ ಬಳಸುವ ಗ್ರಾಹಕರು ಹಲವಾರು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಆದಾಗ್ಯೂ iPadOS 17 ಅನ್ನು ಆರಂಭಿಕವಾಗಿ ಗಮನಿಸಿದಾಗ ಪವರ್ ಬಳಕೆದಾರರಿಗೆ ತುಸು ನಿರಾಶೆಯಾಗಬಹುದು. ಐಪ್ಯಾಡ್ನಲ್ಲಿ ಬಹಳ ಸುಲಭವಾಗಿ ಮಲ್ಟಿಟಾಸ್ಕಿಂಗ್ ಮಾಡುವ ಉದ್ದೇಶದಿಂದ ಕಳೆದ ವರ್ಷ ಲಾಂಚ್ ಮಾಡಲಾಗಿದ್ದ Stage Manager ಸಾಧನವು ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ ಮತ್ತು ಸಾಕಷ್ಟು ಬಾರಿ ಕೆಲಸಕ್ಕೆ ಅಡೆತಡೆ ಮಾಡುತ್ತದೆ. iPadOS 17 ನಲ್ಲಿನ Stage Manager ವಿಂಡೋ ಸೈಜಿಂಗ್ ಮತ್ತು ಲೊಕೇಶನ್ ವಿಚಾರದಲ್ಲಿ ಹೆಚ್ಚುವರಿ ಸ್ವಾತಂತ್ರ್ಯವನ್ನು ನೀಡಲಿದೆ ಎಂದು ಕ್ರೇಗ್ ಫೆಡೆರಿಘಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಸಮಯದಲ್ಲಿ ಬಳಕೆದಾರರ ಗಮನವನ್ನು ಕೇಂದ್ರೀಕರಿಸಲು ಸಹಾಯಕವಾಗುವ stage manager ಅನ್ನು ಸುಧಾರಿಸಲು ತಾನು ಪ್ರಯತ್ನಿಸುತ್ತಿರುವುದಾಗಿ ಆ್ಯಪಲ್ ಹೇಳಿದೆ. iOS 17 ನಲ್ಲಿ ಕೇವಲ Siri ಎಂದು ಹೇಳುವ ಮೂಲಕ ಸಿರಿಯನ್ನು ಆ್ಯಕ್ಟಿವೇಟ್ ಮಾಡುವಂತೆಯೇ ಇದರಲ್ಲೂ ಮಾಡಬಹುದು. ಬಳಕೆದಾರರು ಯಾವುದೇ ಕಮಾಂಡ್ಗಳನ್ನು ರಿಸ್ಟಾರ್ಟ್ ಮಾಡುವ ಅಗತ್ಯವಿರದೆ ಹಲವಾರು ಕಮಾಂಡ್ಗಳನ್ನು ಒಂದರ ಹಿಂದೊಂದರಂತೆ ನೀಡಬಹುದು.
ಇದನ್ನೂ ಓದಿ : ಚಿಪ್ಸೆಟ್ ಫೋನ್ನ ಹಾರ್ಟ್ ಆ್ಯಂಟ್ ಬ್ರೈನ್: ಗ್ರಾಹಕರಲ್ಲಿ ಹೆಚ್ಚಿದ ಅರಿವು