ETV Bharat / science-and-technology

2024ರಲ್ಲಿ ಬಿಡುಗಡೆ ಮಾಡಬೇಕಿದ್ದ ಐಫೋನ್ ಎಸ್​ಇ 4ರ ಉತ್ಪಾದನೆ ಸ್ಥಗಿತ ಮಾಡಿದ ಆ್ಯಪಲ್?

author img

By

Published : Jan 7, 2023, 7:38 PM IST

2024ರಲ್ಲಿ ಐಫೋನ್ ಎಸ್​ಇ ಸ್ಮಾರ್ಟ್‌ಫೋನ್ ಮಾಸ್​ ಪ್ರೊಡಕ್ಷನ್​ ಯೋಜನೆಯನ್ನು ಆ್ಯಪಲ್ ಕಂಪನಿ ರದ್ದುಗೊಳಿಸಿದೆ ಎಂದು ಖ್ಯಾತ ವಿಶ್ಲೇಷಕ ಮಿಂಗ್ ಚಿ ಕುವೊ ತಿಳಿಸಿದ್ಧಾರೆ.

apple-cancels-iphone-se-4-mass-production-plan-for-2024
2024ರಲ್ಲಿ ಬಿಡುಗಡೆ ಮಾಡಬೇಕಿದ್ದ ಐಫೋನ್ ಎಸ್​ಇ 4 ಪ್ರೊಡಕ್ಷನ್ ಸ್ಥಗಿತ ಮಾಡಿದ ಆ್ಯಪಲ್

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಜಾಗತಿಕ ಟೆಕ್ ದೈತ್ಯ ಆ್ಯಪಲ್ ಕಂಪನಿ ಮುಂದಿನ ವರ್ಷ ನಾಲ್ಕನೇ ತಲೆಮಾರಿನ ಐಫೋನ್ ಎಸ್‌ಇ ಬಿಡುಗಡೆ ಮಾಡುವ ಯಾವುದೇ ಯೋಚನೆಯನ್ನು ಹೊಂದಿಲ್ಲ. 2024ರಲ್ಲಿ ಐಫೋನ್ ಎಸ್​ಇ ಸ್ಮಾರ್ಟ್‌ಫೋನ್ ಮಾಸ್​ ಪ್ರೊಡಕ್ಷನ್​ ಯೋಜನೆ ರದ್ದುಗೊಳಿಸಲಾಗಿದೆ ಎಂದು ಆ್ಯಪಲ್ ತನ್ನ​ ಪೂರೈಕೆದಾರರಿಗೆ ತಿಳಿಸಿದೆ ಎಂದು ಖ್ಯಾತ ವಿಶ್ಲೇಷಕ ಮಿಂಗ್ ಚಿ ಕುವೊ ಹೇಳಿದ್ದಾರೆ.

5ಜಿ ಬೆಂಬಲದ ಆಕರ್ಷಕ ಲುಕ್​ ಹೊಂದಿರುವ ಈ ಐಫೋನ್ ಎಸ್​ಇ ಫೋನ್‌ಗಾಗಿ ಐಫೋನ್ ಪ್ರಿಯರು ಎದುರು ನೋಡುತ್ತಿದ್ದರು. ಆದರೆ, ಮುಂದಿನ ವರ್ಷ ಈ ಫೋನ್​ ಬಿಡುಗಡೆ ಮಾಡದಿರುವ ಆ್ಯಪಲ್ ಕಂಪನಿಯ ನಿರ್ಧಾರದಿಂದಾಗಿ ನಿರಾಶೆ ಉಂಟು ಮೂಡಿಸಿದಂತೆ ಆಗಲಿದೆ. ಹೊಸದಾದ ವೈಶಿಷ್ಟ್ಯಗಳು ಮತ್ತು ಉತ್ತಮ ಕಾರ್ಯಕ್ಷಮತೆ, ಕೈಗೆಟುಕುವ ದರದಲ್ಲಿ ಐಫೋನ್​ ಖರೀದಿ ಮಾಡಬೇಕೆಂದು ಹುಡುಕುತ್ತಿದ್ದ ಗ್ರಾಹಕರಿಗೆ ಎಸ್​ಇ ಸರಣಿಯ ಫೋನ್​ಗಳು ಬಹಳ ನೆಚ್ಚಿನದಾಗಿವೆ. ಇದರ ಹಿಂದಿನ ಮೂರು ಆವೃತ್ತಿಗಳು ಸಹ ಯಶಸ್ವಿಯಾಗಿರುವುದು ಸಹ ಇದೇ ಕಾರಣಕ್ಕೆ. ಆದರೆ, ಐಫೋನ್ ಎಸ್‌ಇ 4 ಬಿಡುಗಡೆ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಈ ಸುದ್ದಿಯನ್ನು ಆ್ಯಪಲ್ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.

ಇದನ್ನೂ ಓದಿ: ಮೊಬೈಲ್ ದರ ಹೆಚ್ಚಿಸಲಿರುವ ಟೆಲಿಕಾಂ ಕಂಪನಿಗಳು.. ಕೊರೊನಾ ಸಮಯದಲ್ಲಿ ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ!

ಸದ್ಯ ವಿಶ್ಲೇಷಕ ಮಿಂಗ್ ಚಿ ಕುವೊ ಪ್ರಕಾರ, ಆಪಲ್ ತನ್ನ ಐಫೋನ್ ಎಸ್ಇ 4 ಅನ್ನು ಮಾರುಕಟ್ಟೆಗೆ ಪರಿಚಯಿಸುವ ಕಲ್ಪನೆ ರದ್ದುಗೊಳಿಸಿದೆ. ಈ ಐಫೋನ್ ಕುರಿತು ಆ್ಯಪಲ್ ಎರಡು ರೀತಿಯಲ್ಲಿ ಆಯೋಚನೆಯನ್ನು ಹೊಂದಿದೆ. ಆದಾಗ್ಯೂ, ಆ್ಯಪಲ್ ತನ್ನ ಪೂರೈಕೆಯ ಪಾಲುದಾರರಿಗೆ 2024ರಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ ಐಫೋನ್ ಎಸ್‌ಇ 4 ಯೋಜನೆ ರದ್ದುಗೊಳಿಸಿರುವುದಾಗಿ ತಿಳಿಸಿದೆಯಂತೆ.

ಇನ್ ಹೌಸ್ ಬೇಸ್‌ಬ್ಯಾಂಡ್ ಚಿಪ್‌ನ ಕಾರ್ಯಕ್ಷಮತೆಯು ಕ್ವಾಲ್ಕಾಮ್‌ಗೆ ಸಮನಾಗಿರುವುದಿಲ್ಲ ಎಂಬ ಆ್ಯಪಲ್​ ಭಾವಿಸಿದೆ. ಇದರಿಂದಾಗಿ ಆ್ಯಪಲ್ ಆರಂಭದಲ್ಲಿ ತನ್ನ ಬೇಸ್‌ಬ್ಯಾಂಡ್ ಚಿಪ್ ಅನ್ನು 2024ರಲ್ಲಿ ಪ್ರಾರಂಭಿಸಲು ಯೋಜಿಸಿದೆ. ಐಫೋನ್ 16 ಸರಣಿ ಸೇರಿದಂತೆ ಐಫೋನ್ ಎಸ್ಇ 4 ಮಾದರಿಯಲ್ಲಿ 5ಜಿ ಚಿಪ್‌ಗಳಿಗಾಗಿ ಆ್ಯಪಲ್ ಕ್ವಾಲ್ಕಾಮ್ ​ಅನ್ನು ಅಳವಡಿಸುವ ಕುರಿತು ಪರೀಕ್ಷಿಸಲು ಯೋಜಿಸಿದೆ ಎಂದೂ ಮಿಂಗ್ ಚಿ ಕುವೊ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಐಫೋನ್ 16 ಉತ್ಪಾದನೆಗೆ ಯೋಜನೆ: ಭೂಮಿಗಾಗಿ ಅರ್ಜಿ ಸಲ್ಲಿಸಿದ ಆ್ಯಪಲ್ ಕಂಪನಿ

ಈ ಮೊದಲು 2024ರಲ್ಲಿ ಬಿಡುಗಡೆಗೆ ಯೋಜಿಸಲಾದ ಐಫೋನ್ ಎಸ್‌ಇ 4ರ ಮಾಸ್​ ಪ್ರೊಡಕ್ಷನ್​ ಅನ್ನು ಕಂಪನಿಯು ರದ್ದುಗೊಳಿಸುತ್ತದೋ ಅಥವಾ ಮುಂದೂಡುತ್ತದೋ ಗೊತ್ತಿಲ್ಲ ಎಂದು ಕಳೆದ ತಿಂಗಳು ಕುವೊ ಹೇಳಿದ್ದರು. ನನ್ನ ಇತ್ತೀಚಿನ ಸಮೀಕ್ಷೆಯು ಆಧಾರದ ಮೇಲೆ ಆ್ಯಪಲ್ ಐಫೋನ್ ಎಸ್ಇ 4 ಮಾಸ್​ ಪ್ರೊಡಕ್ಷನ್ ಯೋಜನೆಯನ್ನು ರದ್ದುಗೊಳಿಸಬಹುದು ಅಥವಾ ಮುಂದೂಡಬಹುದಾಗಿ ಸೂಚಿಸುತ್ತದೆ ಎಂದು ಟ್ವೀಟ್ ಮಾಡಿದ್ದರು. ಇನ್ನು, ಕಳೆದ ವರ್ಷ ಐಫೋನ್​ ಎಸ್​ಇ 3 ಅಥವಾ ಐಫೋನ್​ ಎಸ್​ಇ 2022 ಸ್ಮಾರ್ಟ್‌ಫೋನ್​ ಬಿಡುಗಡೆಯಾಗಿತ್ತು. 5ಜಿ ನೆಟ್‌ವರ್ಕ್‌ ಬೆಂಬಲದೊಂದಿಗೆ 43,900 ರೂಪಾಯಿ ಆರಂಭಿಕ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್​ ಮಾರುಕಟ್ಟೆಗೆ ಬಂದಿತ್ತು.

ಇದನ್ನೂ ಓದಿ: ರಿಲಯನ್ಸ್ ಜಿಯೋ ಜೊತೆ Motorola ಪಾಲುದಾರಿಕೆ.. 5G ಸೇವೆ ಪಡೆಯಲು ಈ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.