ವಾಷಿಂಗ್ಟನ್: ವಾಟ್ಸಾಪ್ ಡೆಸ್ಕ್ಟಾಪ್ ಬೆಟಾದಲ್ಲಿ ಭವಿಷ್ಯದಲ್ಲಿ ವಾಟ್ಸಾಪ್ ಗ್ರೂಪ್ಚಾಟ್ ಮ್ಯೂಟ್ ಶಾರ್ಟ್ಕಟ್ ಆಗಿ ಕೆಲಸ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ. ಗ್ರೂಪ್ಚಾಟ್ನ ಮೇಲ್ಭಾಗದಲ್ಲಿ ಈ ಮ್ಯೂಟ್ ಶಾರ್ಟ್ಕಟ್ ಕಾಣಲಿದೆ. ಇದರಿಂದ ಬಳಕೆದಾರರು ನೋಟಿಫಿಕೇಷನ್ ಅನ್ನು ಡಿಸೆಬಲ್ ಕೂಡ ಮಾಡಬಹುದಾಗಿದೆ ಎಂದು ವಾಬೆಟಾಇನ್ಫೋ ತಿಳಿಸಿದೆ.
ಈ ತಿಂಗಳಾರಂಭದಲ್ಲಿ 1,024 ಬಳಕೆದಾರರರನ್ನು ಗ್ರೂಪ್ಗೆ ಸೇರಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ಹೊಸ ವೈಶಿಷ್ಠ ಎಲ್ಲರಿಗೂ ಪ್ರಯೋಜನಕಾರಿ. ಗ್ರೂಪ್ ಚಾಟ್ಗಳ ನೋಟಿಫಿಕೇಷನ್ ಇಷ್ಟ ಇಲ್ಲದವರಿಗೆ ಇದರ ಕಿರಿಕಿರಿ ತಪ್ಪಲಿದೆ ಎಂದು ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ತಿಳಿಸಿದ್ದರು.
ಆ್ಯಂಡ್ರಾಯ್ಡ್ ಬಳಕೆದಾರರು ಕೂಡ ಇದೇ ವೈಶಿಷ್ಟ್ಯವನ್ನು ಪಡೆಯಲಿದ್ದಾರೆ. ಎರಡು ವಾರಗಳ ಕಾಲ ಅವರು ತಮ್ಮ ದೊಡ್ಡ ಗುಂಪಿನ ನೋಟಿಫಿಕೇಷನ್ ಡಿಸೆಬಲ್ ಸೌಲಭ್ಯ ಪಡೆಯಲಿದ್ದಾರೆ.
ಇದರ ಮಧ್ಯೆ, ಬಳಕೆದಾರರು ತಮ್ಮ ಡೆಸ್ಕ್ಟಾಪ್ನಲ್ಲಿ ಗ್ರೂಪ್ ಚಾಟ್ಗಳ ಬಳಕೆದಾರರ ಪ್ರೊಫೈಲ್ ಫೋಟೋಗಳನ್ನು ನೋಡುವ ಅವಕಾಶವನ್ನು ವಾಟ್ಸಾಪ್ ನೀಡಿದೆ. ಇದರಿಂದಾಗಿ ತಮ್ಮ ಸಂಪರ್ಕದಲ್ಲಿ ಇಲ್ಲದ ಸದಸ್ಯರ ಫೋಟೋಗಳನ್ನು ಗ್ರೂಪ್ ಚಾಟ್ಗಳಲ್ಲಿ ಬಳಕೆದಾರರು ನೋಡಬಹುದಾಗಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ವಿಂಡೋ ಬೆಟಾದಲ್ಲೂ ಶೇರ್ ಮಾಡಬಹುದು ಕಾಂಟಾಕ್ಟ್ ಕಾರ್ಡ್