ETV Bharat / science-and-technology

ಆಂಡ್ರಾಯ್ಡ್​ ಪ್ರಕರಣ: ಸಿಸಿಐ ವಿಧಿಸಿದ್ದ 1338 ಕೋಟಿ ರೂ. ದಂಡ ಪಾವತಿಸಿದ ಗೂಗಲ್

author img

By

Published : May 2, 2023, 5:13 PM IST

ಭಾರತೀಯ ಸ್ಪರ್ಧಾತ್ಮಕ ಆಯೋಗ ವಿಧಿಸಿದ್ದ 1337 ಕೋಟಿ ರೂಪಾಯಿ ದಂಡವನ್ನು ಗೂಗಲ್ ಪಾವತಿಸಿದೆ. ಭಾರತದಲ್ಲಿನ ಕಾನೂನು ಉಲ್ಲಂಘನೆಗಾಗಿ ಗೂಗಲ್ ಈ ದಂಡ ಪಾವತಿ ಮಾಡಿದೆ.

Google pays entire Rs 1,338 cr penalty to CCI in Android case

ನವದೆಹಲಿ : ಆಂಡ್ರಾಯ್ಡ್ ಪ್ರಕರಣದಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿದ 1,337.76 ಕೋಟಿ ರೂ.ಗಳ ಸಂಪೂರ್ಣ ದಂಡವನ್ನು ಗೂಗಲ್ ಭಾರತ ಸರ್ಕಾರಕ್ಕೆ ಪಾವತಿಸಿದೆ. ಭಾರತದಲ್ಲಿನ ಡಿಜಿಟಲ್ ಕಾನೂನುಗಳ ಉಲ್ಲಂಘನೆಗಾಗಿ ಬೃಹತ್ ತಂತ್ರಜ್ಞಾನ ಕಂಪನಿಯೊಂದು ಇಷ್ಟೊಂದು ದೊಡ್ಡ ಮೊತ್ತದ ದಂಡ ಪಾವತಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ತನ್ನ ಆದೇಶದಲ್ಲಿ ನೀಡಿದ 30 ದಿನಗಳ ಗಡುವಿನೊಳಗೆ ಸಂಪೂರ್ಣ ದಂಡದ ಮೊತ್ತವನ್ನು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ ಖಾತೆಗೆ ಠೇವಣಿ ಮಾಡಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ಮಂಗಳವಾರ ತಿಳಿಸಿವೆ.

ಭಾರತೀಯ ಮಾರುಕಟ್ಟೆ ನಿಯಂತ್ರಕ ಸಿಸಿಐ 2022 ರ ಅಕ್ಟೋಬರ್‌ನಲ್ಲಿ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಗೂಗಲ್​ಗೆ ದಂಡ ವಿಧಿಸಿತ್ತು. ಈ ವರ್ಷದ ಆರಂಭದಲ್ಲಿ ಆ್ಯಂಡ್ರಾಯ್ಡ್​​ಗಾಗಿ CCI ನಿರ್ದೇಶನಗಳನ್ನು ಅನುಸರಿಸುವುದಾಗಿ ಗೂಗಲ್ ಘೋಷಿಸಿತ್ತು. "ಆಂಡ್ರಾಯ್ಡ್ ಮತ್ತು ಗೂಗಲ್ ಪ್ಲೇಗಾಗಿ ಸಿಸಿಐನ ಇತ್ತೀಚಿನ ನಿಯಮಗಳ ಪ್ರಕಾರ ಭಾರತದಲ್ಲಿ ನಾವು ಹಲವಾರು ಗಮನಾರ್ಹ ಬದಲಾವಣೆಗಳನ್ನು ಮಾಡಬೇಕಾಗಿದೆ ಮತ್ತು ನಾವು ಆ ನಿರ್ದೇಶನಗಳನ್ನು ಹೇಗೆ ಪಾಲಿಸಲಿದ್ದೇವೆ ಎಂಬುದರ ಕುರಿತು ಸಿಸಿಐಗೆ ತಿಳಿಸಿದ್ದೇವೆ ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಿದೆ.

"ನಾನ್ - ಕಂಪ್ಯಾಟಿಬಲ್ ಅಥವಾ ಮಾರ್ಪಡಿಸಲಾದ ರೂಪಾಂತರಗಳನ್ನು ನಿರ್ಮಿಸಲು ಪಾಲುದಾರರಿಗೆ ಬದಲಾವಣೆಗಳನ್ನು ಪರಿಚಯಿಸಲು ನಾವು ಆ್ಯಂಡ್ರಾಯ್ಡ್​​ನ ಕಂಪ್ಯಾಟಿಬಲ್ ಅಗತ್ಯತೆಗಳನ್ನು ನವೀಕರಿಸುತ್ತಿದ್ದೇವೆ" ಎಂದು ಗೂಗಲ್ ಹೇಳಿದೆ. ಬಳಕೆದಾರರ ಆಯ್ಕೆಯ ಬಿಲ್ಲಿಂಗ್ ಮೂಲಕ, ಡೆವಲಪರ್‌ಗಳು ಅಪ್ಲಿಕೇಶನ್‌ನಲ್ಲಿ ಡಿಜಿಟಲ್ ಕಂಟೆಂಟ್​ ಖರೀದಿಸುವಾಗ ಗೂಗಲ್ ಪ್ಲೇ ನ ಬಿಲ್ಲಿಂಗ್ ಸಿಸ್ಟಮ್ ಜೊತೆಗೆ ಪರ್ಯಾಯ ಬಿಲ್ಲಿಂಗ್ ವ್ಯವಸ್ಥೆ ಆಯ್ಕೆ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಬಹುದು.

ಸಿಸಿಐ ಹೊರಡಿಸಿದ ಆದೇಶಗಳು ಅದರ ಅಧಿಕಾರ ವ್ಯಾಪ್ತಿ ಮೀರಿವೆ ಎಂದಾಗಲೀ ಅಥವಾ ದುರುದ್ದೇಶದಿಂದ ಕೂಡಿವೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ NCLAT ಆದೇಶವನ್ನು ಎತ್ತಿಹಿಡಿದಿತ್ತು. ಈ ಪ್ರಕರಣದಲ್ಲಿ ಗೂಗಲ್ ಪರವಾಗಿ ಸುಪ್ರೀಂಕೋರ್ಟ್ ಯಾವುದೇ ಆದೇಶ ಮಾಡಲಿಲ್ಲ. ಭಾರತದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪರಿಶೀಲಿಸದೇ ಯುರೋಪಿಯನ್ ಕೋರ್ಟ್ ಆದೇಶದ ಭಾಗಗಳನ್ನು ಸಿಸಿಐ ಕಾಪಿ ಪೇಸ್ಟ್ ಮಾಡಿದೆ ಎಂದು ಗೂಗಲ್ ಆರೋಪಿಸಿತ್ತು.

ಪರ್ಸನಲ್ ಲೋನ್ ನಿಯಮ ಬದಲಾಯಿಸಿದ ಗೂಗಲ್: ತನ್ನ ನೀತಿ ಮತ್ತು ನಿಬಂಧನೆಗಳನ್ನು ಅನುಸರಿಸದ ಕಾರಣ ಗೂಗಲ್ ಇಂಡಿಯಾ ಪ್ಲೇ ಸ್ಟೋರ್‌ನಿಂದ 3,500 ಕ್ಕೂ ಹೆಚ್ಚು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಅಪ್ಲಿಕೇಶನ್‌ಗಳು ಗ್ರಾಹಕರ ಕಾಂಟ್ಯಾಕ್ಟ್​ಗಳು, ಫೋಟೋಗಳು ಸೇರಿದಂತೆ ಬಳಕೆದಾರರ ಡೇಟಾವನ್ನು ಅಕ್ರಮವಾಗಿ ಪಡೆದುಕೊಳ್ಳುತ್ತಿವೆ ಹಾಗೂ ಅವು ಇತರ ವಿಷಯಗಳಲ್ಲಿನ ಮಾರ್ಗಸೂಚಿಗಳನ್ನು ಸಹ ಅನುಸರಿಸುತ್ತಿರಲಿಲ್ಲ ಎಂದು ಗೂಗಲ್ ಹೇಳಿದೆ. ಆ್ಯಪ್ ಡೆವಲಪರ್​​ಗಳು ಹೀಗೆ ನಿಯಮ ಉಲ್ಲಂಘಿಸುವುದನ್ನು ತಡೆಗಟ್ಟಲು ಗೂಗಲ್ ತನ್ನ ಪರ್ಸನಲ್ ಲೋನ್ ನಿಯಮಗಳನ್ನು ಪರಿಷ್ಕರಿಸಿತ್ತು.

ಇದನ್ನೂ ಓದಿ : AI ತಂತ್ರಜ್ಞಾನದಿಂದ ಅಪಾಯ:'ಎಐ ಗಾಡ್​ಫಾದರ್' ಜೆಫ್ರಿ ಹಿಂಟನ್ ವಾರ್ನಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.