ETV Bharat / science-and-technology

ಕ್ಲರಿಕಲ್​ ನೌಕರಿಗಳಿಗೆ ಕುತ್ತು ತರಬಹುದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ: ಸಂಶೋಧನಾ ವರದಿ - ತಂತ್ರಜ್ಞಾನದಿಂದ ಎದುರಾಗಬಹುದಾದ ಪರಿವರ್ತನೆಗಳು

ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನವು ಬಹುತೇಕ ರೀತಿಯ ಉದ್ಯೋಗ ನಾಶಕ್ಕೆ ಕಾರಣವಾಗದಿರಬಹುದು. ಆದರೆ ಕ್ಲರಿಕಲ್ ರೀತಿಯ ಉದ್ಯೋಗಗಳಿಗೆ ಮಾತ್ರ ಎಐ ತಂತ್ರಜ್ಞಾನ ಅಪಾಯ ತರಲಿದೆ ಎಂದು ವರದಿ ತಿಳಿಸಿದೆ.

AI won't destroy many jobs but clerical employees at high risk

author img

By ETV Bharat Karnataka Team

Published : Aug 22, 2023, 4:49 PM IST

ಜಿನೀವಾ : ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಭವಿಷ್ಯದಲ್ಲಿ ಯಾವುದೇ ರೀತಿಯ ನೌಕರಿಗಳನ್ನು ತಾನೇ ಸಂಪೂರ್ಣವಾಗಿ ನಿಭಾಯಿಸಲಾರದು. ಆದರೆ, ಕೆಲ ಮಾದರಿಯ ಉದ್ಯೋಗಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ ಆ ಕೆಲಸವನ್ನು ಮಾಡುವ ರೀತಿಯಲ್ಲಿ ಬದಲಾವಣೆ ತರಲಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ನಡೆಸಿದ ಅಧ್ಯಯನವೊಂದು ತಿಳಿಸಿದೆ. ಆದರೆ ಕಡಿಮೆ ಆದಾಯದ ದೇಶಗಳಲ್ಲಿ ಕೆಲ ಗುಮಾಸ್ತ ರೀತಿಯ ಉದ್ಯೋಗಗಳಿಗೆ (ಕ್ಲರಿಕಲ್ ಕೆಲಸಗಳು) ಮಾತ್ರ ಎಐ ಕುತ್ತು ತರಲಿದೆ ಎಂದು ವರದಿ ಹೇಳಿದೆ.

ಬಹುತೇಕ ನೌಕರಿಗಳು ಮತ್ತು ಉದ್ಯಮಗಳು ಈಗ ಭಾಗಶಃ ಸ್ವಯಂಚಾಲಿತವಾಗಿವೆ. ಆದರೆ ಅವನ್ನು ಚಾಟ್​​ ಜಿಪಿಟಿಯಂಥ ಎಐ ತಂತ್ರಜ್ಞಾನವು ಸಂಪೂರ್ಣವಾಗಿ ಬದಲಾಯಿಸಲಾರದು ಮತ್ತು ಎಐ ಆ ಕೆಲಸಗಳಿಗೆ ಪೂರಕವಾಗಿ ಕೆಲಸ ಮಾಡಬಹುದು ಎಂದು ಸಂಶೋಧನೆಗಳು ಹೇಳಿವೆ. ಹೀಗಾಗಿ ಈ ತಂತ್ರಜ್ಞಾನದ ಅತಿದೊಡ್ಡ ಪರಿಣಾಮ ಉದ್ಯೋಗ ನಾಶವಲ್ಲ, ಬದಲಿಗೆ ಉದ್ಯೋಗಗಳ ಗುಣಮಟ್ಟದಲ್ಲಿ ಸಂಭಾವ್ಯ ಬದಲಾವಣೆ ಆಗಿರಬಹುದು. ವಿಶೇಷವಾಗಿ ಕೆಲಸದ ವೇಗ ಮತ್ತು ಸ್ವಾಯತ್ತತೆಯಲ್ಲಿ ಬದಲಾವಣೆಯಾಗಬಹುದು.

"ತಂತ್ರಜ್ಞಾನದಿಂದ ಎದುರಾಗಬಹುದಾದ ಪರಿವರ್ತನೆಗಳು ಪೂರ್ವನಿರ್ಧರಿತವಾಗಿಲ್ಲ. ಇಂಥ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾನವರೇ ನಿರ್ಧರಿಸಬೇಕಾಗುತ್ತದೆ ಮತ್ತು ಪರಿವರ್ತನೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಬೇಕಾದವರು ಕೂಡ ಅವರೇ" ಎಂದು ಸಂಶೋಧಕರು ಹೇಳಿದ್ದಾರೆ. ಗುಮಾಸ್ತ ರೀತಿಯ ಕೆಲಸಗಳಲ್ಲಿ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಬಹುದಾಗಿದೆ. ಇಂಥ ಸುಮಾರು ಕಾಲು ಭಾಗದಷ್ಟು ಉದ್ಯೋಗಗಳು ಎಐ ತಂತ್ರಜ್ಞಾನದಿಂದ ಸಂಪೂರ್ಣವಾಗಿ ಮತ್ತು ಅರ್ಧಕ್ಕಿಂತ ಹೆಚ್ಚು ಉದ್ಯೋಗಗಳು ಮಧ್ಯಮ ಪ್ರಮಾಣದಲ್ಲಿ ಪ್ರಭಾವಿತವಾಗಬಹುದು.

ಇತರ ವೃತ್ತಿಗಳನ್ನು ನೋಡುವುದಾದರೆ, ವ್ಯವಸ್ಥಾಪಕರು, ವೃತ್ತಿಪರರು ಮತ್ತು ತಂತ್ರಜ್ಞರು ಸೇರಿದಂತೆ ಇತರ ಔದ್ಯೋಗಿಕ ಉದ್ಯೋಗಗಳ ಪೈಕಿ ಕೇವಲ ಒಂದು ಸಣ್ಣ ಪ್ರಮಾಣದ ನೌಕರಿಗಳಿಗೆ ಮಾತ್ರ ಎಐ ತಂತ್ರಜ್ಞಾನದಿಂದ ಹೆಚ್ಚಿನ ಪರಿಣಾಮವಾಗಬಹುದು ಎಂದು ಯುಎನ್ ಸಂಸ್ಥೆಯ ಅಧ್ಯಯನವು ಕಂಡುಹಿಡಿದಿದೆ. ಹೆಚ್ಚಿನ ಆದಾಯದ ದೇಶಗಳಲ್ಲಿನ ಒಟ್ಟು ಉದ್ಯೋಗದ 5.5 ಪ್ರತಿಶತದಷ್ಟು ಜನರ ಮೇಲೆ ಸ್ವಯಂಚಾಲಿತ ತಂತ್ರಜ್ಞಾನವು ಹೆಚ್ಚಿನ ಪರಿಣಾಮ ಬೀರಬಹುದು ಎಂದು ಅಧ್ಯಯನ ತಿಳಿಸಿದೆ. ಹಾಗೆಯೇ ಕಡಿಮೆ ಆದಾಯದ ದೇಶಗಳಲ್ಲಿ ಕೇವಲ 0.4 ಪ್ರತಿಶತದಷ್ಟು ಉದ್ಯೋಗಗಳಿಗೆ ಮಾತ್ರ ಯಾಂತ್ರೀಕರಣದ ಅಪಾಯ ತಟ್ಟಬಹುದು.

ಯಾಂತ್ರೀಕರಣವು ಪುರುಷ ಮತ್ತು ಮಹಿಳಾ ಉದ್ಯೋಗಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರಬಹುದು. ಪುರುಷರಿಗಿಂತ ದುಪ್ಪಟ್ಟು ಮಹಿಳಾ ಉದ್ಯೋಗಿಗಳ ಮೇಲೆ ಯಾಂತ್ರೀಕರಣದ ಅಪಾಯ ಎದುರಾಗಬಹುದು. ಹೆಚ್ಚಿನ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಗುಮಾಸ್ತ ಕೆಲಸಗಳಲ್ಲಿ ಮಹಿಳೆಯರೇ ಹೆಚ್ಚಾಗಿ ತೊಡಗಿಸಿಕೊಂಡಿರುವುದರಿಂದ ಯಾಂತ್ರೀಕರಣದ ಪ್ರಭಾವ ಮಹಿಳೆಯರ ಮೇಲೆ ಹೆಚ್ಚು ಎಂದು ವರದಿ ಹೇಳಿದೆ.

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಯಂತ್ರ ಬುದ್ಧಿಮತ್ತೆ ಎಂದೂ ಕರೆಯಲಾಗುತ್ತದೆ. ಇದು ಕಂಪ್ಯೂಟರ್ ವಿಜ್ಞಾನದ ಒಂದು ಶಾಖೆಯಾಗಿದ್ದು, ಇದು ಸ್ವಾಯತ್ತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಮಾನವನ ಪರವಾಗಿ ಕ್ರಿಯೆಗಳನ್ನು ಕೈಗೊಳ್ಳಲು ಕಲಿಯುವ ತಂತ್ರಜ್ಞಾನವನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಪ್ರಕ್ರಿಯೆಯಾಗಿದೆ.

ಇದನ್ನೂ ಓದಿ : ಕ್ವಿಂಟಾಲ್‌ಗೆ ₹2,410 ದರದಲ್ಲಿ ರೈತರಿಂದ ಈರುಳ್ಳಿ ಖರೀದಿ: ಕೇಂದ್ರ ಸರ್ಕಾರ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.