ಹೈದರಾಬಾದ್: ಕೃತಕ ಬುದ್ಧಿಮತ್ತೆ (ಎಐ) ಸಕಾರಾತ್ಮಕ ಹಾದಿಯಲ್ಲಿ ಸಮಾಜ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದರಲ್ಲಿ ಕೆಲವು ಅಪಾಯಗಳು ಕೂಡ ಇವೆ. ಇದನ್ನು ಅರ್ಥೈಸಿಕೊಂಡು ನಿರ್ವಹಣೆ ಮಾಡಬೇಕಿದೆ ಎಂದು ಹೊಸ ಸಂಶೋಧನೆಯೊಂದು ಎಚ್ಚರಿಸಿದೆ.
ದುರುದ್ದೇಶಪೂರಿತ ಆನ್‌ಲೈನ್ ಚಟುವಟಿಕೆಗಳನ್ನು ತಡೆಯಲು ರಾಷ್ಟ್ರೀಯ ಭದ್ರತಾ ಏಜೆನ್ಸಿಗಳು ಬಳಸುವ ಸಾಧನಗಳಿಗಿಂತ ಎಐ ಮತ್ತು ಅಲ್ಗಾರಿದಮ್‌ಗಳು ಉತ್ತಮವಾಗಿದ್ದು, ಇದು ಭದ್ರತೆಗೆ ಅಪಾಯದ ಬೆದರಿಕೆ ಹಾಕುತ್ತದೆ ಎಂದು ಯುಕೆಯ ಲ್ಯಾನ್ಕ್ಯಾಸ್ಟರ್ ಯುನಿವರ್ಸಿಟಿಯ ಪ್ರೊಫೆಸರ್ ಜೋ ಬುರ್ಟೊನ್ ಎಚ್ಚರಿಕೆ ನೀಡಿದ್ದಾರೆ.
ಟೆಕ್ನಾಲಾಜಿ ಇನ್ ಸೊಸೈಟಿ ಜರ್ನಲ್ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನಾ ಪತ್ರಿಕೆಯಲ್ಲಿ, ಎಐ ಮತ್ತು ಆಲ್ಗಾರಿದಮ್ ಮೂಲಭೂತವಾದದ ಧ್ರವೀಕರಣ, ರಾಜಕೀಯ ಮತ್ತು ಜನಾಂಗೀಯ ಹಿಂಸಾಚಾರ ಪ್ರಚೋದಿಸಬಹುದಾಗಿದೆ. ಈ ಹಿನ್ನೆಲೆ ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವ ಸಾಧ್ಯತೆ ಇದೆ ಎಂದು ಸಂಶೋಧನೆ ತಿಳಿಸಿದೆ.
ಎಐ ಅನ್ನು ಹಿಂಸಾಚಾರವನ್ನು ಎದುರಿಸುವ ಸಾಧನವಾಗಿ ಬಳಕೆಮಾಡಲಾಗಿದೆ ಎಂಬ ಮತ್ತೊಂದು ವಾದವೂ ಇದೆ ಎಂದು ಬುರ್ಟೊನ್ ತಿಳಿಸಿದ್ದಾರೆ.
ಈ ಕುರಿತು ಸಂಶೋಧಕರು ಸಿನಿಮಾ ಸೀರಿಸ್ ಟರ್ಮಿನೇಟರ್ ಮೂಲಕ ಎಐ ಪರಿಣಾಮ ಉಲ್ಲೇಖಿಸಿದ್ದಾರೆ. ಈ ಚಿತ್ರವೂ ಎಐನಿಂದ ಮಾಡಿದ ಆಧುನಿಕ ಮತ್ತು ಮಾರಾಣಾಂತಿಕ ಹತ್ಯಾಕಾಂಡವಾಗಿದೆ ಎಂದಿದ್ದಾರೆ.
ಯಂತ್ರದಲ್ಲಿನ ನಂಬಿಕೆ ಕೊರತೆ, ಅದರ ಜೊತೆಗಿನ ಭಯವನ್ನು ಒಳಗೊಂಡಿದೆ. ಮಾನವ ಸಮುದಾಯದ ಮೇಲೆ ಜೈವಿಕ, ಪರಮಾಣು ಮತ್ತು ವಂಶವಾಹಿನಿಯೊಂದಿಗೆ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಬೆದರಿಕೆ ಒಡ್ಡಬಹುದಾಗಿದೆ. ಸರ್ಕಾರಗಳು ಮತ್ತು ರಾಷ್ಟ್ರೀಯ ಭದ್ರತಾ ಏಜೆನ್ಸಿಗಳು ತಂತ್ರಜ್ಞಾನ ಬೆಳವಣಿಗೆ ಮೇಲಿನ ಪರಿಣಾಮವನ್ನು ತಗ್ಗಿಸುವ ಮೂಲಕ ತಮ್ಮ ಕೊಡುಗೆ ನೀಡಬಹುದಾಗಿದೆ.
ಸೈಬರ್ ಸೆಕ್ಯೂರಿಟಿಯಲ್ಲಿ ಕಂಪ್ಯೂಟರ್ನ ಭದ್ರತೆ ಮತ್ತು ಕಂಪ್ಯೂಟರ್ ನೆಟ್ವರ್ಕ್ನಲ್ಲಿ ಪ್ರಮುಖ ನಿರ್ಬಂಧಿತ ಪ್ರದೇಶಗಳಾದ ಮಾಹಿತಿ, ಆನ್‌ಲೈನ್ ಮಾನೋವೈಜ್ಞಾನಿಕ ಕಲ್ಯಾಣದಂತಹ ಪ್ರದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ.
ಸಾಂಕ್ರಾಮಿಕತೆ ಸಮಯದಲ್ಲಿ ಎಐ ಮೂಲಕ ವೈರಸ್ನ ಸಕಾರಾತ್ಮಕ ಟ್ರಾಕಿಂಗ್ ಮತ್ತು ಟ್ರೆಸ್ಸಿಂಗ್ ಮಾಡಲು ಬಳಕೆ ಮಾಡಲಾಗುತ್ತಿತ್ತು. ಆದರೆ, ಇದು ಮಾನವ ಹಕ್ಕಿನ ಮತ್ತು ಖಾಸಗಿತನ ಕಾಳಜಿಗೆ ಕಾರಣವಾಗಿದೆ.
ಎಐ ತಂತ್ರಜ್ಞಾನವೂ ತನ್ನ ವಿನ್ಯಾಸದಲ್ಲಿರುವ ಸಮಸ್ಯೆಗಳ ಕುರಿತು ವಾದಿಸುತ್ತದೆ. ಇದರ ಬಳಕೆ ಹೇಗೆ ಮತ್ತು ಫಲಿತಾಂಶ ಮತ್ತು ಪರಿಣಾಮವನ್ನು ಕುರಿತು ದತ್ತಾಂಶ ತಿಳಿಸುತ್ತದೆ. ಎಐ ಸಕಾರಾತ್ಮಕವಾಗಿ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ಆದರೆ ಇದು ಅಪಾಯವನ್ನು ಹೊಂದಿದ್ದು, ಇದನ್ನು ಅರ್ಥೈಸಿಕೊಂಡು, ನಿರ್ವಹಣೆ ಮಾಡಬೇಕಿದೆ ಎಂದು ಸಂಶೋಧನೆ ತಿಳಿಸಿದೆ. (ಪಿಟಿಐ)
ಇದನ್ನೂ ಓದಿ: 'ಎಐ ಅಪಾಯ ತಡೆ ಪ್ರತಿಜ್ಞೆ'ಗೆ ಭಾರತ, ಇಯು ಸೇರಿದಂತೆ 27 ರಾಷ್ಟ್ರಗಳ ಸಹಿ