ನವದೆಹಲಿ: ಮುಂದಿನ ವರ್ಷದಲ್ಲಿ ಅಂದರೆ 2024ರಲ್ಲಿ ಸೈಬರ್ ಅಪರಾಧಿಗಳು ಎಐ ಚಾಲಿತ ಸೈಬರ್ ದಾಳಿ ಗುರಿ ಮತ್ತು ಅಭಿವೃದ್ಧಿಯ ಗುರಿಯನ್ನು ಹೊಂದಿದ್ದಾರೆ. ರಾನ್ಸಮ್ವೇರ್ ಮತ್ತು ಗುರುತಿನ ದಾಳಿಗಳು ನಡೆಯಲಿದೆ ಎಂದು ಹೊಸ ವರದಿ ತಿಳಿಸಿದೆ.
ಕ್ಲೌಡ್ ಎನೇಬಲ್ಡ್ ಸೆಕ್ಯುರಿಟಿ ಸೊಲ್ಯೂಶನ್ಸ್ ಪ್ರೊವೈಡರ್ ಬರ್ರಾಕುಡಾ ನೆಟ್‌ವರ್ಕ್ ಪ್ರಕಾರ, ವರ್ಷಾಂತ್ಯದಲ್ಲಿ ಎಐ ಚಾಲಿತ ಸೈಬರ್ ದಾಳಿಗಳ ಅಪಾಯ ಹೆಚ್ಚಿದ್ದು, ಇದು ಮುಂದಿನ ವರ್ಷದಲ್ಲಿ ಹೆಚ್ಚಾಗುವ ಆತಂಕ ಮೂಡಿದೆ. ದಾಳಿಕೋರರು ಮಲ್ಟಿಫ್ಯಾಕ್ಟರ್ ಅಥೆಂಟಿಫಿಕೇಷನ್ (ಎಂಎಫ್ಎ) ಮೀರಿ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಪೂರೈಕೆ ಸರಪಳಿಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳು ದುರ್ಬಲತೆಗಳಾಗಿವೆ ಎಂದಿದೆ.
2024ಕ್ಕೆ ಹೋಗುತ್ತಿದ್ದಂತೆ ಎಐ ಚಾಲಿತ ಸೈಬರ್ ದಾಳಿಗಳು ಉದಯವಾಗುವುದನ್ನು ಕಾಣಬಹುದಾಗಿದೆ ಎಂದು ಬರ್ರಾಕುಡಾ ನೆಟ್ವರ್ಕ್ನ ಕಂಟ್ರಿ ಮ್ಯಾನೇಜರ್ ಪರಾಗ್ ಖುರಾನಾ ತಿಳಿಸಿದ್ದಾರೆ.
ಜಾಗತಿಕವಾಗಿ ಸೈಬರ್ಸೆಕ್ಯೂಟಿರಿ ವೃತ್ತಿಪರರ ಅಂದರೆ ಸಂಘಟನೆ ಕೊರತೆ ಕಾಣುತ್ತಿದೆ. ಈ ಹಿನ್ನಲೆ ಎಂಡ್ ಟೂ ಎಂಡ್ ಭದ್ರತಾ ಪರಿಹಾರ ಬಲಪಡಿಸಲು ನಾವು ಒತ್ತು ನೀಡಬೇಕಿದೆ. ಥರ್ಟಿ ಪಾರ್ಟಿ ರಕ್ಷಣೆ ಕಾರ್ಯ ಕೇಂದ್ರ ಮತ್ತು ಉದ್ಯೋಗಿಗಳು ಈ ಕುರಿತು ತರಬೇತಿಯನ್ನು ನೀಡುವ ಮೂಲಕ ಭದ್ರತೆ ಒದಗಿಸಬೇಕಿದೆ ಎಂದರು.
ಸೈಬರ್ ಅಪರಾಧಿಗಳು ಮಷಿನ್ ಲರ್ನಿಂಗ್ (ಯಂತ್ರ ಕಲಿಕೆ) ಮತ್ತು ಜನರೇಟಿವ್ ಎಐ ತಂತ್ರಜ್ಞಾನದ ಮೂಲಕ ದಾಳಿ ಮಾಡುವ ಸಾಧ್ಯತೆ ಇದೆ. ಇದು ಸುಧಾರಿತ ಎಐ ಅಲ್ಗಾರಿದಮ್‌ಗಳ ಮೂಲಕ ಆಕ್ರಮಣ ಪ್ರಕ್ರಿಯೆಗಳ ಯಾಂತ್ರೀಕರಣವನ್ನು ಒಳಗೊಂಡಿರುತ್ತದೆ. ಇದು ಹೆಚ್ಚು ಪರಿಣಾಮಕಾರಿ, ಸ್ಕೇಲೆಬಲ್ ಮತ್ತು ಸಂಕೀರ್ಣವಾದ ದಾಳಿಗಳಿಗೆ ಕಾರಣವಾಗುತ್ತದೆ.
ರಾನ್ಸಮ್ವೇರ್ಗಳು ಮೂಲಭೂತ ಸೌಕರ್ಯ ಮತ್ತು ಅಧಿಕ ಮೌಲ್ಯದ ಗುರಿ ಮೇಲೆ ಹೆಚ್ಚಿನ ಗಮನವನ್ನು ಹೊಂದಿರಲಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದಕ್ಕಿಂತ ಹೆಚ್ಚಾಗಿ, ಹೊಸ ಬೆದರಿಕೆಗಳು ಕೂಡ ಹುಟ್ಟಿಕೊಳ್ಳಬಹುದು. ಇವು ಸುಧಾರಿತ ತಂತ್ರಜ್ಞಾನ, ಭೌಗೋಳಿಕ ರಾಜಕೀಯ ಘಟನೆ ಮತ್ತು ದಾಳಿಕೋರರ ತಂತ್ರದ ಬದಲಾವಣೆ ಚಾಲಿತವೂ ಆಗಿರಬಹುದು. ಈ ದಾಳಿಗಳಲ್ಲಿ ಡೀಪ್ಫೇಕ್ ಮತ್ತು ಸಿಂಥೆಟಿಕ್ ಮಿಡಿಯಾ ದಾಳಿಗಳು ಇರಬಹುದು.
ಈ ದಾಳಿಯಲ್ಲಿ ಗುರಿಯ ಬದಲಾವಣೆ ಕೂಡ ಆಗಿದ್ದು, ಇದೀಗ ಸಣ್ಣ ಮತ್ತು ಮಧ್ಯ ಮಾರುಕಟ್ಟೆ ಉದ್ಯಮದ ಮೇಲೆ ದಾಳಿ ನಡೆಸುವ ನಿರೀಕ್ಷೆ ಇದೆ. ಕಾರಣ ಇವರಲ್ಲಿನ ಸೈಬರ್ ಭದ್ರತೆ ವೃತ್ತಿಪರರ ಬಳಕೆಯು ದಾಳಿಗೆ ಲಾಭವಾಗಲಿದೆ. (ಐಎಎನ್ಎಸ್)
ಇದನ್ನೂ ಓದಿ: ನಿಮ್ಮ ಮೌನ ಆಲೋಚನೆಗಳನ್ನು ಓದಿ ಹೇಳುತ್ತೆ ಈ ಹೊಸ ಎಐ ತಂತ್ರಜ್ಞಾನ!