ನವದೆಹಲಿ: ಟ್ವಿಟರ್ ಖರೀದಿ ಬಳಿಕವೇ ಉದ್ಯೋಗ ವಜಾ ಆರಂಭಿಸಿದ್ದ ಎಲಾನ್ ಮಸ್ಕ್, ಟ್ವಿಟರ್ ಮಾಜಿ ಸಿಇಒ ಪರಾಗ್ ಅಗರವಾಲ್ ಅವರನ್ನು ಕೂಡ ಉದ್ಯೋಗದಿಂದ ವಜಾಗೊಳಿಸಿದ್ದರು. ಪರಾಗ್ ಅವರನ್ನು ಸಂಸ್ಥೆಯಿಂದ ಕಿತ್ತು ಹಾಕಿರುವ ಕುರಿತು ತಿಳಿಸಿರುವ ಮಸ್ಕ್, ಪರಾಗ್ ಬೆಂಕಿ ಉಸಿರಾಡುವ ಡ್ರ್ಯಾಗನ್ ಅಲ್ಲ ಎಂದಿದ್ದಾರೆ. ಅದರರ್ಥ ನಮ್ಮ ನಿರೀಕ್ಷೆ ಮೀರಿದ ಉತ್ಸಾಹಿತನ ತೋರಿಲ್ಲ. ನಮ್ಮ ಸಾಮಾಜಿಕ ಜಾಲತಾಣ ಅಭಿವೃದ್ಧಿ ಹೊಂದಲು ಬಯಸಿತ್ತು ಎಂದು ಸಮಾಜಾಯಿಷಿ ನೀಡಿದ್ದಾರೆ.
ವಿಶ್ವದ ಬಿಲೇನಿಯರ್, ಪ್ರೈವೇಟ್ ಸ್ಪೇಸ್ ಅವಿಷ್ಕಕನಾಗಿರುವ ಎಲೋನ್ ಮಸ್ಕ್ ಕುರಿತು ಅಮೆರಿಕದ ಲೇಖಕ ಮತ್ತು ಪತ್ರಕರ್ತನೂ ಆಗಿರುವ ವಾಲ್ಟರ್ ಇಸ್ಸಕ್ಸೊನ್ ಬರೆದ ಪುಸ್ತಕದಲ್ಲಿ ಪರಾಗ್ ಉದ್ಯೋಗ ವಜಾದ ಕುರಿತು ಕೂಡ ಉಲ್ಲೇಖಿಸಲಾಗಿದೆ ಪತ್ರಕರ್ತ ಉಲ್ಲೇಖಿಸಿರುವಂತೆ, ಅಗರ್ವಾಲ್ ಕುರಿತು ಮಸ್ಕ್ ತಮ್ಮದೇ ಆದ ಒಂದು ಅಭಿಪ್ರಾಯವನ್ನು ಹೊಂದಿದ್ದರು. ಅಗರವಾಲ್ ಒಳ್ಳೆಯ ವ್ಯಕ್ತಿ. ಆದರೆ, ಮ್ಯಾನೇಜರ್ಗಳು ಗುರಿ ಕೇವಲ ಇಷ್ಟವಾಗುವ ಗುಣ ಹೊಂದಿರುವುದಲ್ಲ. ಟ್ವಿಟರ್ಗೆ ಬೆಂಕಿ ಉಸಿರಾಡುವ ಡ್ರ್ಯಾಗನ್ ಬೇಕಾಗಿತ್ತು. ಪರಾಗ್ ಆ ರೀತಿ ಇರಲಿಲ್ಲ ಎಂದು ಹೇಳಿದ್ದರು ಎಂದು ಲೇಖಕರು ಪುಸ್ತಕದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ 44 ಬಿಲಿಯನ್ ಡಾಲರ್ಗೆ ಟ್ವಿಟರ್ ಖರೀದಿಸಿದ ಮಸ್ಕ್, ಹಿಂದಿನ ಟ್ವಿಟರ್ ಮಾಲೀಕ ಜಾರ್ಕ್ ಡೋರ್ಸೆ ನೇಮಿಸಿದ್ದ ಅಗರ್ವಾಲ್ ಮತ್ತು ಮಾಜಿ ಕಾನೂನು ಮತ್ತು ಸಾರ್ವಜನಿಕ ನಿಯಮದ ಮುಖ್ಯಸ್ಥ ವಿಜಯ್ ಗಡ್ಡೆ ಅವರನ್ನು ಉದ್ಯೋಗದಿಂದ ವಜಾ ಮಾಡಿದ್ದರು. ಈ ಇಬ್ಬರು ಕಾರ್ಯನಿರ್ವಹಣಾಧಿಕಾರಿಗಳು ಭಾರಿ ನಿರ್ಗಮನ ಪ್ಯಾಕೇಜ್ಗಳೊಂದಿಗೆ ಕಂಪನಿಯನ್ನು ತೊರೆದಿದ್ದರು.
ಅಗರ್ವಾಲ್ ಅಕ್ಟೋಬರ್ 6, 2022ರವರೆಗೆ ಟ್ವಿಟರ್ನಲ್ಲಿ ಸಕ್ರಿಯವಾಗಿದ್ದರು. 6 ಲಕ್ಷದ 19 ಸಾವಿರ ಫಾಲೋವರ್ಸ್ಗಳನ್ನ ಇವರು ಹೊಂದಿದ್ದರು. ಟ್ವಿಟರ್ ತೊರೆದ ಬಳಿಕ ಅವರು ಈ ಮೈಕ್ರೋಬ್ಲಾಗಿಂಗ್ ತಾಣ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಕ್ರಿಯರಾಗಿಲ್ಲ. ಸಂಸ್ಥೆ ಖರೀದಿ ಆರಂಭದಲ್ಲಿ ನಕಲಿ ಖಾತೆಗಳ ಕುರಿತು ಆಗಿ ಪರಾಗ್ ಮತ್ತು ಮಸ್ಕ್ ವಿರುದ್ಧ ಟ್ವೀಟ್ ವಾರ್ ಕೂಡ ನಡೆದಿತ್ತು.
ಇನ್ನು ಪರಾಗ್ ಟ್ವಿಟರ್ ಸಿಇಒ ಆಗಿ ನೇಮಕ ಕುರಿತು ಕಳೆದ ಜುಲೈನಲ್ಲಿ ಮಾತನಾಡಿದ್ದ ಎಂಜೆಲ್ ಇನ್ವೆಸ್ಟರ್ ಅಲೆಕ್ಸ್ ಕೊಹೆನ್, ಸಂಸ್ಥೆಗೆ ಸೇರಿ 11 ತಿಂಗಳಿಗೆ 60 ಮಿಲಿನಯ್ ಡಾಲರ್ ವೇತನದೊಂದಿಗೆ ಪರಾಗ್ ಹೇಗೆ ಸಿಇಒ ಆದರೂ ಎಂದು ನಂಬಲು ಆಗುತ್ತಿಲ್ಲ. ಇದೀಗ ಅವರು ಹಿಂದೆ ಕುಳಿತು ತಮ್ಮ ಅದ್ಬುತ ನಾಟಕವನ್ನು ಸಂಭ್ರಮಿಸುತ್ತಿದ್ದಾರೆ ಎಂದಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಟ್ವಿಟರ್ ಸಿಇಒ ಸ್ಥಾನದಿಂದ ಅಗರ್ವಾಲ್ ವಜಾ.. ಅಧಿಕೃತವಾಗಿ ಟ್ವಿಟರ್ ಆಡಳಿತ ಕೈಗೆ ತೆಗೆದುಕೊಂಡ ಮಸ್ಕ್!