ಟ್ವಿಟರ್‌ನ ಹೊಸ ಸಿಇಒ ಆಗಿ ಇಂದಿನಿಂದ ಲಿಂಡಾ ಯಾಕರಿನೊ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಟ್ವಿಟರ್ ಖರೀದಿ ಬಳಿಕ ಟೆಸ್ಲಾ ಮತ್ತು ಸ್ಪೆಸ್ಎಕ್ಸ್ ಮಾಲೀಕರಾದ ಎಲೋನ್ ಮಸ್ಕ್ಗೆ ಇದರ ಸಿಇಒ ಆಗಿ ಮುಂದುವರೆದಿದ್ದರು. ಆದರೆ, ಟೆಸ್ಲಾ ಮತ್ತು ಸ್ಪೆಸ್ಎಕ್ಸ್ ಕಡೆ ಹೆಚ್ಚಿನ ಗಮನ ನೀಡುವ ಉದ್ದೇಶದಿಂದ ತಾವು ಸಿಇಒ ಆಗಿ ಮುಂದುವರೆಯುವುದಿಲ್ಲ ಎಂಬುದುನ್ನು ಅವರು ಕೆಲವು ತಿಂಗಳ ಹಿಂದೆ ಬಹಿರಂಗಪಡಿಸಿದ್ದರು. ಇದಾದ ಬಳಿಕ ಮುಂದಿನ ಆರು ವಾರಗಳಲ್ಲಿ ಮಹಿಳಾ ಉದ್ಯಮಿಯೊಬ್ಬರು ಈ ಸಿಇಒ ಸ್ಥಾನ ಸ್ವೀಕರಿಸಲಿದ್ದಾರೆ ಎಂದು ಮಸ್ಕ್ ಘೋಷಿಸಿದ್ದರು. ಕಳೆದ ತಿಂಗಳು, ಲಿಂಡಾ ಒಂದೆರಡು ವಾರಗಳಲ್ಲಿ ಟ್ವಿಟರ್‌ನ ಹೊಸ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಘೋಷಿಸಲಾಗಿತ್ತು.
-
Welcome to the flock, @benarroch_joe! From one bird to the next.
— Linda Yaccarino (@lindayacc) June 4, 2023 " class="align-text-top noRightClick twitterSection" data="
Let’s get to work @Twitter! #timetofly
">Welcome to the flock, @benarroch_joe! From one bird to the next.
— Linda Yaccarino (@lindayacc) June 4, 2023
Let’s get to work @Twitter! #timetoflyWelcome to the flock, @benarroch_joe! From one bird to the next.
— Linda Yaccarino (@lindayacc) June 4, 2023
Let’s get to work @Twitter! #timetofly
ಅದರಂತೆ ಅವರು ಇಂದು ಅಧಿಕಾರ ವಹಿಸಿಕೊಳ್ಳುತ್ತಿದ್ದು, ಬೆನ್ನಿಗೆ ತಮ್ಮ ಪ್ರಮುಖ ಸಹಚರನನ್ನು ಟ್ವಿಟರ್ಗೆ ನೇಮಿಸಿಕೊಂಡಿದ್ದಾರೆ ಈ ಕುರಿತು ಲಿಂಡಾ ಕೂಡ ತಮ್ಮ ಟ್ವಿಟರ್ ಜಾಲತಾಣದಲ್ಲಿ ತಿಳಿಸಿದ್ದಾರೆ. ಎನ್‌ಬಿಸಿ ಯೂನಿವರ್ಸಲ್‌ನಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಜೋ ಬೆನಾರೊಕ್ ಅವರನ್ನು ಸಹ ನೇಮಿಸಿಕೊಂಡಿದ್ದಾರೆ. ಈ ಹಿಂದೆ ಲಿಂಡಾ ಕೂಡ ಎನ್‌ಬಿಸಿ ಯೂನಿವರ್ಸಲ್‌ನಲ್ಲಿ ಗ್ಲೋಬಲ್ ಅಡ್ವರ್ಟೈಸಿಂಗ್ ಮತ್ತು ಪಾಲುದಾರಿಕೆಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಬೆನಾರೊಕ್ ಲಿಂಡಾಗೆ ವಿಶ್ವಾಸಾರ್ಹ ಸಲಹೆಗಾರರಾಗಿದ್ದಾರೆ. ಇನ್ನು ಟ್ವಿಟರ್ನಲ್ಲಿ ತಮ್ಮ ಹುದ್ದೆ ಕುರಿತು ಮಾತನಾಡಿರುವ ಅವರು, ಟ್ವಿಟರ್ನಲ್ಲಿ ವಿಭಿನ್ನ ವೃತ್ತಿಪರ ಸಾಹಸವನ್ನು ಪ್ರಾರಂಭಿಸಲು ಸಜ್ಜಾಗಿದ್ದೇನೆ. ವ್ಯಾಪಾರ ಕಾರ್ಯಾಚರಣೆಗಳ ಮೇಲೆ ತಮ್ಮ ಪಾತ್ರ ನಿರ್ವಹಣೆ ನಡೆಸುವುದಾಗಿ ಅವರು ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ತಿಳಿಸಿದ್ದಾರೆ.
ಟ್ವಿಟರ್ ಸಿಇಒ ಜವಾಬ್ದಾರಿವಹಿಸಿಕೊಳ್ಳುತ್ತಿರುವ ಕುರಿತು ಕಳೆದ ತಿಂಗಳು ಮಾತನಾಡಿದ್ದ ಲಿಂಡಾ, ತಮ್ಮ ಅನುಭವದಿಂದ ಟ್ವಿಟರ್ಗೆ ಹೊಸತನ ತರಲು ಎದುರು ನೋಡುತ್ತಿದ್ದೇನೆ. ಟ್ವಿಟರ್ 2.0 ಅನ್ನು ನಿರ್ಮಿಸಲು ಇಡೀ ತಂಡದೊಂದಿಗೆ ನಾನು ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಟ್ವಿಟರ್ 2.0 ಅನ್ನು ನಿರ್ಮಿಸಲು ಮತ್ತು ಮಸ್ಕ್ ಜೊತೆ ಲಕ್ಷಾಂತರ ಪ್ಲಾಟ್‌ಫಾರ್ಮ್ ಬಳಕೆದಾರರೊಂದಿಗೆ ವ್ಯಾಪಾರವನ್ನು ನಿರ್ವಹಿಸಲು ಸಿದ್ಧಳಾಗಿದ್ದೇನೆ ಎಂದರು
ಉತ್ತಮ ಭವಿಷ್ಯ ರೂಪಿಸಲು ನಿಮ್ಮ ದೂರದೃಷ್ಟಿಗಳಿಂದ ನಾನು ಉತ್ಸುಕಳಾಗಿದ್ದೇನೆ. ಈ ದೃಷ್ಟಿಕೋನವನ್ನು ಟ್ವಿಟರ್ ಮತ್ತು ವ್ಯವಹಾರಗಳಿಗೆ ಪರಿವರ್ತಿಸಲು ಸಹಾಯ ಮಾಡಲು ಉತ್ಸಕಳಾಗಿದ್ದೇನೆ ಎಂದು ಟ್ವೀಟ್ ಕೂಡ ಮಾಡಿ ತಿಳಿಸಿದ್ದರು. ಈ ಪ್ಲಾಟ್ಫಾರ್ಮ್ನ ಭವಿಷ್ಯಕ್ಕೆ ಬದ್ದಳಾಗಿದ್ದೇನೆ. ನಿಮ್ಮ ಪ್ರತಿಕ್ರಿಯೆಯು ಆ ಭವಿಷ್ಯಕ್ಕೆ ಪ್ರಮುಖವಾಗಿದೆ. ನಾನು ಎಲ್ಲದಕ್ಕೂ ನಿಮಗಾಗಿ ಇಲ್ಲಿದ್ದೇನೆ. ನಮ್ಮ ಮಾತುಗಳು ಮುಂದುರೆಯಲಿದೆ ಹಾಗೇ ಒಟ್ಟಿಗೆ ಟ್ವಿಟರ್ 2.0 ನಿರ್ಮಿಸೋಣ ಎಂದಿದ್ದರು.
ಚೀನಾದ ವಿ ಚಾಟ್ನಂತೆ ಎಕ್ಸ್ ಫ್ಲಾಟ್ಫಾರ್ಮ್ ಆಗಿ ಪರಿವರ್ತಿಸುವ ಕಾರ್ಯ ನಿರ್ವಹಣೆಗೆ ಮಸ್ಕ್ ಅವರು ಎದುರು ನೋಡುತ್ತಿದ್ದಾರೆ. ಲಿಂಡಾ ಎನ್‌ಬಿಸಿ ಯುನಿರ್ವಸಲ್ನಲ್ಲಿ 2 ಸಾವಿರ ಸಿಬ್ಬಂದಿ ಜೊತೆ ಕಾರ್ಯ ನಿರ್ವಹಿಸಿದ್ದಾರೆ. ಆಕೆಯ ತಂಡ 100 ಬಿಲಿಯನ್ ಡಾಲರ್ ಮಾರಾಟ ಮಾಡುವ ಮೂಲಕ ಆ್ಯಪಲ್ , ಸ್ನಾಪ್ಚಾಟ್, ಬುಜ್ಫೀಡ್, ಟ್ವಿಟರ್ ಮತ್ತು ಯೂಟ್ಯೂಬ್ ತಮ್ಮ ಪಾಲುದಾರಿಕೆ ಸಂಸ್ಥೆಗಳೊಂದಿಗೆ ಪ್ರವೇಶವನ್ನು ಪಡೆದರು
ಇದನ್ನೂ ಓದಿ: ಭಾರತೀಯ ವರನ ಅವತಾರದಲ್ಲಿ ಮಸ್ಕ್; ಲವ್ ಇಟ್ ಎಂದ ಟೆಸ್ಲಾ ಮಾಲೀಕ