ETV Bharat / science-and-technology

ಟ್ವಿಟರ್​ ತೊರೆದ ಬಳಿಕ ಬ್ಲಾಕ್​ ಕಂಪನಿ ಮುಖ್ಯಸ್ಥರಾಗಿ ಜಾಕ್​​ ಡಾರ್ಸೆ ನೇಮಕ - ಫಿನ್ಟೆಕ್​​​ ಸಂಸ್ಥೆ ಬ್ಲಾಕ್​ ಕಂಪನಿ

ಸಣ್ಣ ಮತ್ತು ಮಧ್ಯಮ ಹಣಕಾಸಿನ ಸೌಲಭ್ಯವನ್ನು ನೀಡುವ ಹಣಕಾಸು ಸಂಸ್ಥೆ ಇದಾಗಿದೆ.

after henry jack dorsey become Block CEO

author img

By ETV Bharat Karnataka Team

Published : Sep 19, 2023, 1:32 PM IST

ಟ್ವಿಟರ್​ (ಈಗಿನ ಎಕ್ಸ್​​) ಮಾಜಿ ಸಹ ಸಂಸ್ಥಾಪಕರಾದ ಜಾಕ್​ ಡಾರ್ಸೆ ಇದೀಗ ತಾವೇ 2009ರಲ್ಲಿ ಹುಟ್ಟು ಹಾಕಿದ್ದ ಫಿನ್ಟೆಕ್​​​ ಸಂಸ್ಥೆ ಬ್ಲಾಕ್​ ಕಂಪನಿ (ಈ ಹಿಂದೆ ಸ್ಕ್ವೇರ್​) ಮುಖ್ಯಸ್ಥ ಮತ್ತು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

2009ರಲ್ಲಿ ಸ್ಕ್ವೇರ್​ ಎಂಬ ಹೆಸರಿನಲ್ಲಿ ಪೇಮೆಂಟ್​ ಸಂಸ್ಥೆಯನ್ನು ಆರಂಭಿಸಿದ್ದ ಡಾರ್ಸೆ, ಸಂಸ್ಥೆಯ ಸಿಇಒ, ಅಧ್ಯಕ್ಷ ಮತ್ತು ಮುಖ್ಯಸ್ಥರಾಗಿದ್ದರು. ಇದೀಗ ಅವರು, ತತ್​​ಕ್ಷಣದಿಂದ ಹೆಡ್​ ಮತ್ತು ಚೇರ್​ಪರ್ಸನ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದು ತಾತ್ಕಾಲಿಕವೇ ಅಥವಾ ಇವರೇ ಈ ಸ್ಥಾನದಲ್ಲಿ ಮುಂದುವರೆಯುತ್ತಾರಾ ಎಂಬ ಬಗ್ಗೆ ಸಂಸ್ಥೆ ಸ್ಪಷ್ಟಪಡಿಸಿಲ್ಲ

ಸಂಸ್ಥೆಯಲ್ಲಿ ಡಾರ್ಸೆ ಹುದ್ದೆ ಮತ್ತು ಜವಾಬ್ದಾರಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರು ಸಂಸ್ಥೆಯ ಪ್ರಿನ್ಸಿಪಲ್​ ಎಕ್ಸಿಕ್ಯೂಟಿವ್​​ ಆಫೀಸರ್​​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬ್ಲಾಕ್​ ಕಂಪನಿ ಯುಎಸ್​​ ಸೆಕ್ಯೂರಿಟಿಸ್ ಆ್ಯಂಡ್​ ಎಕ್ಸ್​ಚೆಂಜ್​​ ಕಮಿಷನ್​ ತಿಳಿಸಿದೆ.

ಸ್ಕ್ವೇರ್​​ ಸಿಇಒ ಅಲೆಸ್ಸಾ ಹೆನ್ರಿ ಸಂಸ್ಥೆಯನ್ನು ತೊರೆದಿದ್ದು, ಡಾರ್ಸೆ ಸಂಸ್ಥೆಯ ಹೆಚ್ಚುವರಿ ಜವಾಬ್ಧಾರಿಯನ್ನು ನಿರ್ವಹಣೆ ಮಾಡಲಿದ್ದಾರೆ. ಹೆನ್ರಿ 9 ವರ್ಷಗಳ ಕಾಲ ಸ್ಕ್ವೇರ್​ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಪಾತ್ರ ದೊಡ್ಡದಿದೆ ಎಂದು ತಿಳಿಸಲಾಗಿದೆ.

2021ರಲ್ಲಿ ಡಿಸೆಂಬರ್​ನಲ್ಲಿ ಡಾರ್ಸೆ ಸ್ಕ್ವೇರ್​ ಎಂಬ ಹಣಕಾಸು ಸೇವಾ ಸಂಸ್ಥೆಯ ಹೆಸರನ್ನು ಬ್ಲಾಕ್​ ಎಂದು ಬದಲಾಯಿಸಿದರು. ಈ ವರ್ಷ ಮಾರ್ಚ್​ನಲ್ಲಿ, ಈ ಕುರಿತು ವರದಿ ಮಾಡಿದ್ದ ಹಿಂಡೆನ್​ ಬರ್ಗ್​ ರಿಸರ್ಚ್​, ಬ್ಲಾಕ್​ ಕಂಪನಿ ಗ್ರಾಹಕರು ಮತ್ತು ಸರ್ಕಾರದ ವಿರುದ್ಧ ವಂಚನೆಯನ್ನು ಇನ್ನಷ್ಟು ಸರಳಗೊಳಿಸುತ್ತದೆ. ಇದು ನಿಯಂತ್ರಣವನ್ನು ತಪ್ಪಿಸುತ್ತದೆ ಎಂದು ವರದಿ ತಿಳಿಸಿದೆ.

ಜಾಕ್​ ಡಾರ್ಸೆ ಸಾಮ್ರಾಜ್ಯವನ್ನು ನಿರ್ಮಾಣ ಮಾಡಿದ್ದು, ವೈಯಕ್ತಿಯವಾಗಿ 5 ಬಿಲಿಯನ್​ ಡಾಲರ್​ ಹಣವನ್ನು ಸಂಗ್ರಹಿಸಿದ್ದಾರೆ. 2022ರಲ್ಲಿ ಜನವರಿಯಲ್ಲಿ ಬೈ ನೌ ಪೇ ಲೇಟರ್​ ಸರ್ವೀಸ್​ ಸಂಸ್ಥೆ ಮುಚ್ಚಿದ ಬಳಿಕ ಅದನ್ನು 29 ಬಿಲಿಯನ್​ ಡಾಲರ್​ಗೆ ಬ್ಲಾಕ್​ ಖರೀದಿಸಿತು ಎಂದು ವರದಿ ತಿಳಿಸಿದೆ.

ಇದರ ಹೊರತಾಗಿ ಡಾರ್ಸೆ ಮೈಕ್ರೋ ಬ್ಲಾಗಿಂಗ್​ ಫ್ಲಾಟ್​​ಫಾರ್ಮ್​ ಆದ ಬ್ಲೂಸ್ಕೈಯನ್ನು ಉದ್ಘಾಟಿಸಿದರು. ಈ ಬ್ಲೂಸ್ಕೈಗೆ ಕಳೆದ ವರ್ಷ 13 ಮಿಲಿಯನ್​ ಡಾಲರ್​ ಅನ್ನು ಡಾರ್ಸೆ ಹೂಡಿಕೆ ಮಾಡಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ಜೆಮಿನಿ; ಗೂಗಲ್​ನ ಹೊಸ ಎಐ ಚಾಟ್​ಬಾಟ್​.. ಏನೆಲ್ಲ ವೈಶಿಷ್ಟ್ಯತೆಗಳಿವೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.