ETV Bharat / science-and-technology

ದೇಶದಲ್ಲಿ 5G 9.85 ಜಿಬಿಪಿಎಸ್‌ ವೇಗ ಪ್ರಯೋಗ: ನೋಕಿಯಾ ಹೊಸ ದಾಖಲೆ - ವೊಡಾಫೋನ್‌-ಐಡಿಯಾ ನೆಟ್‌ವರ್ಕ್‌

ದೇಶದಲ್ಲಿ 5G ಗಾಗಿ ಪ್ರಯೋಗಗಳು ವೇಗವಾಗಿ ನಡೆಯುತ್ತಿವೆ. ವೊಡಾಫೋನ್-ಐಡಿಯಾ 9.85 ಜಿಬಿಪಿಎಸ್‌ ವೇಗದ ಪ್ರಯೋಗದಲ್ಲಿ ಯಶಸ್ವಿಯಾಗಿವೆ ಎಂದು ಈ ಕಂಪನಿಗಳ ಪಾಲುದಾರಿಕೆ ಸಂಸ್ಥೆ ನೋಕಿಯಾ ಇಂಡಿಯಾ ಹೇಳಿದೆ.

Nokia claims top 5G speed of 9.85 Gbps on Vi network during trial
5G 9.85 ಜಿಬಿಪಿಎಸ್‌ ವೇಗದ ಪ್ರಯೋಗ ಮಾಡಿ ನೋಕಿಯಾ ಹೊಸ ದಾಖಲೆ
author img

By

Published : Nov 3, 2021, 4:42 PM IST

Updated : Nov 3, 2021, 5:27 PM IST

ನವದೆಹಲಿ: ಪ್ರಮುಖ ಮೊಬೈಲ್ ತಯಾರಕ ಸಂಸ್ಥೆ ನೋಕಿಯಾ ಭಾರತದಲ್ಲಿ 5G ಪ್ರಯೋಗದಲ್ಲಿ ಹೊಸ ದಾಖಲೆ ಬರೆದಿದೆ. ವೊಡಾಫೋನ್‌-ಐಡಿಯಾ ನೆಟ್‌ವರ್ಕ್‌ನಲ್ಲಿ ಬಳಸುವ 5ಜಿ ಪ್ರಯೋಗಗಳಲ್ಲಿ 9.85 ಜಿಬಿಪಿಎಸ್‌ ಅತ್ಯಧಿಕ ವೇಗ ದಾಖಲಿಸಿರುವುದಾಗಿ ಕಂಪನಿ ಹೇಳಿದೆ.

ಗುಜರಾತ್‌ನ ಗಾಂಧಿನಗರದಲ್ಲಿ ನಡೆಸಿರುವ ಪ್ರಯೋಗದಲ್ಲಿ ತನ್ನ ತಂತ್ರಜ್ಞಾನದ ಬಳಕೆಯಿಂದಾಗಿ ನೋಕಿಯಾ ಅತಿ ವೇಗದ 5ಜಿ ಸಾಧನೆ ಮಾಡಿರುವುದಾಗಿ ಹೇಳಿಕೊಂಡಿದೆ. ವೊಡಾಫೋನ್ ಐಡಿಯಾ ಜೊತೆಗೂಡಿ ನಾವು 80 Hz ಸ್ಪೆಕ್ಟ್ರಮ್‌ನಲ್ಲಿ 'ಇ-ಬ್ಯಾಂಡ್' ಮೈಕ್ರೋವೇವ್ ಬಳಸಿಕೊಂಡು 9.85 Gbps ವೇಗ ಸಾಧಿಸಿದ್ದೇವೆ. ಈ ಮೂಲಕ 5G ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಈ ಪ್ರಯೋಗಗಳಲ್ಲಿ ವೊಡಾಫೋನ್‌ ಐಡಿಯಾದೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ ಎಂದು ನೋಕಿಯಾ ಇಂಡಿಯಾ ಟ್ವಿಟರ್‌ನಲ್ಲಿ ತಿಳಿಸಿದೆ.

ಬ್ಯಾಕ್ ಎಂಡ್‌ನಲ್ಲಿ ಮೊಬೈಲ್ ನೆಟ್‌ವರ್ಕ್‌ಗಳನ್ನು ಸಂಪರ್ಕಿಸಲು 'ಇ-ಬ್ಯಾಂಡ್' ಉಪಯುಕ್ತವಾಗಿದೆ. ಆಪ್ಟಿಕಲ್ ಫೈಬರ್ ಮಟ್ಟದಲ್ಲಿ ಡೇಟಾವನ್ನು ರವಾನಿಸಲು ಸಾಧ್ಯವಾಗುತ್ತದೆ. ಸೆಪ್ಟೆಂಬರ್‌ನಲ್ಲಿ ವೊಡಾಫೋನ್-ಐಡಿಯಾ 5G ಪ್ರಯೋಗಗಳಲ್ಲಿ 3.7 Gbps ಅನ್ನು ಪಡೆದುಕೊಂಡಿದೆ ಎಂದು ಹೇಳಿದೆ. ಡೌನ್‌ಲೋಡ್ ವೇಗ 1.5 ಜಿಬಿಪಿಎಸ್ ಎಂದು ಕಂಪನಿ ಹೇಳಿಕೊಂಡಿದೆ. 5G ಪ್ರಯೋಗಗಳಿಗಾಗಿ 26 GHz ಹೈ ಫ್ರೀಕ್ವೆನ್ಸಿ ಬ್ಯಾಂಡ್, 3.5 GHz ಸ್ಪೆಕ್ಟ್ರಮ್ ಬ್ಯಾಂಡ್ ಅನ್ನು ವೊಡಾಫೋನ್‌-ಐಡಿಯಾಗೆ ನಿಯೋಜಿಸಲಾಗಿದೆ.

Last Updated : Nov 3, 2021, 5:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.