ETV Bharat / science-and-technology

ಐಫೋನ್ ಎಸ್​​ಇ ಟಾಪ್ ಎಂಡ್​​​​ ಸೀರಿಸ್​ ಮಾರಾಟ ಅಂತ್ಯಗೊಳಿಸಿದ ಆಪಲ್ ಸಂಸ್ಥೆ - Apple Store

ಆಪಲ್ ಸಂಸ್ಥೆಯ ಐಫೋನ್ 13 ಬಿಡುಗಡೆಯಾಗಿದೆ. ತನ್ನ ಹಿಂದಿನ ಆವೃತ್ತಿಯಂತೆಯೇ ವಿನ್ಯಾಸ ಹೊಂದಿರುವ 13ನೇ ಆವೃತ್ತಿ ಹೊಸ ಹೊಸ ಫೀಚರ್​ಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಆದರೆ, ಈ ಹಿಂದೆ ಬಿಡುಗಡೆಯಾಗಿದ್ದ ಐಫೋನ್ ಎಸ್​​ಇ ಸೀರಿಸ್​ ಮಾರಾಟ ನಿಲ್ಲಿಸಲು ಸಂಸ್ಥೆ ಮುಂದಾಗಿದೆ.

iphone-se
ಐಫೋನ್ ಎಸ್​​ಇ
author img

By

Published : Sep 17, 2021, 7:12 AM IST

ನವದೆಹಲಿ: ಐಫೋನ್ ಸರಣಿಯ ಬಹುನಿರೀಕ್ಷಿತ ಐಫೋನ್​-13 ಪರಿಚಯಿಸಲಾಗಿದೆ. ಆದರೆ, ಈ ಹೊಸ ಫೋನ್ ಬಿಡುಗಡೆಯಾದ ಕೆಲವೇ ಹೊತ್ತಲ್ಲಿ ಆಪಲ್ ಸ್ಟೋರ್​ನಿಂದ ಐಫೋನ್​ ಎಸ್​​ಇ ಮೊಬೈಲ್​ಗಳ ಮಾರಾಟ ನಿಲ್ಲಿಸಲು ಸಂಸ್ಥೆ ನಿರ್ಧರಿಸಿದೆ.

256 ಜಿಬಿ ಸ್ಟೊರೇಜ್ ಸಾಮರ್ಥ್ಯದ ಎಸ್​​ಇ ಸರಣಿಯ ಮೊಬೈಲ್​ ಮಾರಾಟ ಮಾಡದಿರಲು ನಿರ್ಧರಿಸಿದೆ. ಆದರೆ, ಐಫೋನ್​ ಎಸ್​​ಇ 64 ಮತ್ತು 128 ಜಿಟಿ ಸ್ಟೊರೇಜ್ ಸಾಮರ್ಥ್ಯ ಮೊಡೆಲ್​ಗಳು ಲಭ್ಯವಿರಲಿದೆ ಎಂದು ತಿಳಿಸಿದೆ.

ಐಫೋನ್ ಎಸ್​ಇ ಸೆಕೆಂಡ್ ಜನರೇಶನ್​​ 2020ರಲ್ಲಿ ಬಿಡುಗಡೆಯಾಗಿತ್ತು. ಉಳಿದ ಐಫೋನ್​ಗೆ ಹೋಲಿಸಿದರೆ ಕಡಿಮೆ ಬೆಲೆಗೆ ಲಾಂಚ್ ಮಾಡಲಾಗಿತ್ತು. ಐಫೋನ್​ 11 ಹಾಗೂ 12ನೇ ಆವೃತ್ತಿಯ ನಡುವೆ ಬಿಡುಗಡೆಯಾಗಿತ್ತಲ್ಲದೇ ಐಫೋನ್​ ಐಕಾನ್​​​​​ ಆಗಿ ಜನರ ಮನಗೆದ್ದಿತ್ತು. ಆದರೆ, ಐಫೋನ್ 13 ಸೀರಿಸ್​​ ಜೊತೆಗಿನ ಬೆಲೆ ಹೊಂದಾಣಿಕೆಯ ಸಮಸ್ಯೆಗೆ ಸಂಸ್ಥೆ ಈ ಕಾರ್ಯಕ್ಕೆ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಇಷ್ಟಾದರೂ ಆಪಲ್ ಸ್ಟೋರ್ ಹೊರತುಪಡಿಸಿ ಉಳಿದೆಡೆ ಐಫೋನ್ ಎಸ್​​ಇ 256 ಜಿಟಿ ಮೊಬೈಲ್ ಕೊಳ್ಳಬಹುದು ಅಂತಲೂ ಸಂಸ್ಥೆ ತಿಳಿಸಿದೆ. ಎರಡು ದಿನದ ಹಿಂದೆ ಬಿಡುಗಡೆಯಾದ ಐಫೋನ್ 13 ಸೀರಿಸ್​​ ಸ್ಪರ್ಧಾತ್ಮಕ ಬೆಲೆಗೆ ಲಭ್ಯವಾಗಿದೆ. ಈ ಹಿನ್ನೆಲೆ ತನ್ನ ಹಳೆದ ಆವೃತ್ತಿಯ ಮೊಬೈಲ್​​ ಮಾರಾಟದಲ್ಲಿ ತೊಡಕಾಗುವ ಆಲೋಚನೆಯಲ್ಲಿ ಸಂಸ್ಥೆ ಈ ಕಾರ್ಯಕ್ಕೆ ಮುಂದಾಗಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: Apple TV+ ಶೋನಲ್ಲಿ ಹೊಸ ವಿನ್ಯಾಸದೊಂದಿಗೆ ಕಾಣಿಸಿಕೊಂಡ iPhone 13

ETV Bharat Logo

Copyright © 2024 Ushodaya Enterprises Pvt. Ltd., All Rights Reserved.