ETV Bharat / science-and-technology

2028ರ ಅಂತ್ಯಕ್ಕೆ ದಕ್ಷಿಣ ಕೊರಿಯಾದಲ್ಲಿ 6G ತಂತ್ರಜ್ಞಾನ! - 6 ಜಿ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿ

6 ಜಿ ತಂತ್ರಜ್ಞಾನವನ್ನು ಸಂಶೋಧಿಸಿ ಅಭಿವೃದ್ಧಿಪಡಿಸಲು ದಕ್ಷಿಣ ಕೊರಿಯಾ ದೇಶ 625 ಶತಕೋಟಿ ಮೌಲ್ಯದ ಯೋಜನೆ ರೂಪಿಸಿದೆ.

6g technology in south korea by the end of 2028
2028 ಅಂತ್ಯಕ್ಕೆ ದಕ್ಷಿಣ ಕೊರಿಯಾದಲ್ಲಿ 6g ತಂತ್ರಜ್ಞಾನ ಲಭ್ಯ
author img

By

Published : Feb 21, 2023, 4:20 PM IST

ಸಿಯೋಲ್: ನಿಗದಿಗೆ ಎರಡು ವರ್ಷ ಮುಂಚಿತವಾಗಿಯೇ 6ಜಿ ನೆಟ್​ವರ್ಕ್​ ಸೇವೆಯನ್ನು 2028ರಲ್ಲಿ ಪ್ರಾರಂಭಿಸಲು ದಕ್ಷಿಣ ಕೊರಿಯಾ ಯೋಜನೆ ರೂಪಿಸಿದೆ. ಈ ವಿಚಾರವನ್ನು ಅಲ್ಲಿನ ಐಸಿಟಿ ಸಚಿವಾಲಯ ಸೋಮವಾರ ತಿಳಿಸಿದೆ. ಭವಿಷ್ಯದ ವೈರ್‌ಲೆಸ್ ಆವರ್ತನಗಳ ಆರಂಭಿಕ ಪ್ರಾಬಲ್ಯವನ್ನು ಭದ್ರಪಡಿಸುವ ಪ್ರಯತ್ನವಾಗಿ ಈ ನಿರ್ಧಾರ ಮಾಡಿದೆ.

K-ನೆಟ್‌ವರ್ಕ್ 2030 ಯೋಜನೆಯ ಭಾಗವಾಗಿ ಸರ್ಕಾರ 'ವಿಶ್ವ-ದರ್ಜೆಯ' 6ಜಿ ತಂತ್ರಜ್ಞಾನ ಸುರಕ್ಷಿತಗೊಳಿಸಿ ಸಾಫ್ಟ್‌ವೇರ್-ಆಧಾರಿತ ಮುಂದಿನ ಪೀಳಿಗೆಯ ಮೊಬೈಲ್ ನೆಟ್‌ವರ್ಕ್ ಆವಿಷ್ಕರಿಸಲಿದೆ. ಇದರ ಮೂಲಕ ನೆಟ್‌ವರ್ಕ್ ಪೂರೈಕೆ ಸರಪಳಿಯನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದೆ. ಅದೇ ಸಮಯದಲ್ಲಿ, ದೇಶದಲ್ಲಿ ನೂತನ ತಂತ್ರಜ್ಞಾನಕ್ಕಾಗಿ ಉಪಕರಣಗಳು, ಭಾಗಗಳು ಮತ್ತು ವಸ್ತುಗಳನ್ನು ಉತ್ಪಾದಿಸಲು ಸ್ಥಳೀಯ ಕಂಪನಿಗಳನ್ನು ಸರ್ಕಾರ ಪ್ರೋತ್ಸಾಹಿಸಲಿದೆ.

ಯಾವುದೇ ಮೊಬೈಲ್​ ಸಾಧನದೊಂದಿಗೆ ಹೊಂದಿಕೊಳ್ಳುವ, ಮೊಬೈಲ್​ ವಾಹಕಗಳು ಮತ್ತು ಉದ್ಯಮಗಳಿಗೆ ಹೊಂದಿಕೊಳ್ಳುವ ಸೇವೆಗಳನ್ನು ಒದಗಿಸಲು ತೆರೆದ RAN ಅಥವಾ ತೆರೆದ ರೇಡಿಯೋ ಪ್ರವೇಶ ನೆಟ್‌ವರ್ಕ್ ಅಭಿವೃದ್ಧಿಪಡಿಸಲು ಯೋಜಿಸಿದೆ. ಇವೆಲ್ಲವನ್ನೂ ಸಾಧ್ಯವಾಗಿಸಲು ದ.ಕೊರಿಯಾ ಕೋರ್ 6ಜಿ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಾಗಿ ಕಾರ್ಯಸಾಧ್ಯತೆಯ ಅಧ್ಯಯನ ನಡೆಸುತ್ತಿದೆ. ಯೋಜನೆಯು 625.3 ಶತಕೋಟಿ (~US$482 ಮಿಲಿಯನ್) ಮೌಲ್ಯದ್ದಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದ ವಿಜ್ಞಾನ ಮತ್ತು ICT ಸಚಿವಾಲಯದ ಪ್ರಕಾರ, ಭವಿಷ್ಯದ ವೈರ್‌ಲೆಸ್ ಆವರ್ತನಗಳ ಆರಂಭಿಕ ಪ್ರಾಬಲ್ಯ ಸಾಧಿಸುವ ಪ್ರಯತ್ನದಲ್ಲಿ ದೇಶ ಈ ಪ್ರಯತ್ನಗಳನ್ನು ನಡೆಸುತ್ತಿದೆ. ಭವಿಷ್ಯದ ನೆಟ್‌ವರ್ಕ್ ಮೂಲಸೌಕರ್ಯಕ್ಕಾಗಿ ಜಾಗತಿಕ ಸ್ಪರ್ಧೆಯಲ್ಲಿ ದೇಶವು ತನ್ನ ಸ್ಥಾನ ಉಳಿಸಿಕೊಳ್ಳುವ ಗುರಿ ಸಾಧಿಸುವ ಯೋಜನೆ ಹೊಂದಿದೆ. ಜರ್ಮನ್​ ವಿಶ್ಲೇಷಣಾ ಸಂಸ್ಥೆ IPlytics ವರದಿ, 4ಜಿ ತಂತ್ರಜ್ಞಾನದ ಅಭಿವೃದ್ಧಿ US ಮತ್ತು ಯುರೋಪಿಯನ್ ಕಂಪನಿಗಳ ಪ್ರಾಬಲ್ಯ ಹೊಂದಿದ್ದರೆ, ದ.ಕೊರಿಯಾ ಹೆಚ್ಚಿನ ಸಂಖ್ಯೆಯ 5ಜಿ ಪೇಟೆಂಟ್‌ಗಳೊಂದಿಗೆ 5ಜಿ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿದೆ ಎಂಬುದನ್ನು ಕಂಡುಹಿಡಿದಿದೆ.

ಏಷ್ಯಾದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದ.ಕೊರಿಯಾ ಕಳೆದ ವರ್ಷ 5ಜಿ ಪೇಟೆಂಟ್‌ಗಳ ಸಂಖ್ಯೆಯಲ್ಲಿ 25.9 ಪ್ರತಿಶತದಷ್ಟು ಭಾಗ ಹೊಂದಿದೆ. ಮಾರುಕಟ್ಟೆಯ ನಾಯಕ ಚೀನಾ 26.8 ಪ್ರತಿಶತದಷ್ಟು ಹೊಂದಿದೆ. ಮುಂಬರುವ 6ಜಿ ನೆಟ್‌ವರ್ಕ್ ಪೇಟೆಂಟ್ ಸ್ಪರ್ಧೆಯಲ್ಲಿ 30 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆ ತಲುಪುವ ಗುರಿಯನ್ನು ದಕ್ಷಿಣ ಕೊರಿಯಾ ಹೊಂದಿದೆ ಎಂದು ದಕ್ಷಿಣ ಕೊರಿಯಾದ ಸರ್ಕಾರ ಹೇಳಿದೆ.

ದ.ಕೊರಿಯಾ ಹೊರತುಪಡಿಸಿ ಭಾರತ ಕೂಡ ಈ ದಶಕದ ಅಂತ್ಯದ ಮೊದಲು 6ಜಿ ಸೇವೆಗಳನ್ನು ಪ್ರಾರಂಭಿಸುವ ಗುರಿ ಹೊಂದಿದೆ. ದಕ್ಷಿಣ ಏಷ್ಯಾದ ಕಂಪನಿಯು ಈಗಾಗಲೇ ಗುರಿಯನ್ನು ಸಾಧಿಸಲು ಕಾರ್ಯಪಡೆಯನ್ನು ಹೊಂದಿದೆ.

ಇದನ್ನೂ ಓದಿ: 5ಜಿ: ಜಾಗತಿಕ ಮೊಬೈಲ್ ಡೇಟಾ ಸ್ಪೀಡ್​ ಚಾರ್ಟ್​ನಲ್ಲಿ ಭಾರತ 10 ಸ್ಥಾನ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.