ETV Bharat / science-and-technology

ಕೆಲಸಕ್ಕೆ ಕುತ್ತು ತಂದ AI.. ಮೇ ಒಂದೇ ತಿಂಗಳಲ್ಲಿ 4 ಸಾವಿರ ಮಂದಿ ಉದ್ಯೋಗದಿಂದ ವಜಾ! - ಪ್ರತಿ ಕ್ಷೇತ್ರದಲ್ಲೂ ಅಧಿಪತ್ಯ ಸಾಧಿಸಲು

ಎಐ ತಂತ್ರಜ್ಞಾನ ಎಲ್ಲಾ ಕ್ಷೇತ್ರದಲ್ಲೂ ವೇಗವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಇದು ಗಂಭೀರ ಅಪಾಯವನ್ನು ಹೊಂದಿರುವ ಈ ಎಐ ಈಗಾಗಲೇ ಅನೇಕರ ಉದ್ಯೋಗ ಕಳೆದುಕೊಳ್ಳಲು ಕಾರಣವಾಗಿದೆ.

4 thousand people were fired from their jobs in May due to AI

author img

By

Published : Jun 5, 2023, 5:14 PM IST

ಸದ್ಯ ಕೃತಕ ಬುದ್ಧಿಮತ್ತೆ (Artificial intelligence - AI) ಜಗತ್ತಿನಲ್ಲಿ ವೇಗವಾಗಿ ಅಭಿವೃದ್ಧಿ ಕಾಣುತ್ತಿದ್ದು, ಪ್ರತಿ ಕ್ಷೇತ್ರದಲ್ಲೂ ಅಧಿಪತ್ಯ ಸಾಧಿಸಲು ಮುಂದಾಗುತ್ತಿದೆ. ಸದ್ಯ ವರವಾಗಿರುವ ಈ ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಆತಂಕ ತಂದೊಡ್ಡುವುದರಲ್ಲಿ ಸಂದೇಹವಿಲ್ಲ. ಬಲು ಬೇಗ ಬೆಳವಣಿಗೆ ಆಗುತ್ತಿರುವ ಈ ಎಐ ತಂತ್ರಜ್ಞಾನದಿಂದ ಜಗತ್ತು ಎಚ್ಚೆತ್ತುಗೊಳ್ಳಬೇಕಿದೆ ಎಂದು ಗೂಗಲ್​ನಿಂದ ಹೊರನಡೆದ ಎಐ ಗಾಡ್​ ಫಾದರ್​​ ಜೆಫ್ರಿ ಹಿಂಟನ್​ ಕೂಡ ಎಚ್ಚರಿಸಿದ್ದರು.

ಇದೀಗ ಈ ಎಐನಿಂದಾಗಿ ಮೇ ಒಂದೇ ತಿಂಗಳಲ್ಲಿ ಅಮೆರಿಕದ 4 ಸಾವಿರ ಮಂದಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಹೊಸ ವರದಿ ತಿಳಿಸಿದೆ. ಅಮೆರಿಕ ಮೂಲದ ಕನ್ಸಲ್​ಟಿಂಗ್​ ಘಟಕ, ಗ್ರೇ ಅಂಡ್​ ಕ್ರಿಸ್ಮಸ್​ ತಿಂಗಳ ವರದಿಯಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ಅಮೆರಿಕದಲ್ಲಿ ಎಐ ಕಾರಣದಿಂದ ಮೇ ಒಂದೇ ತಿಂಗಳಲ್ಲಿ 3,900 ಮಂದಿ ಅಂದರೆ, 4.9ರಷ್ಟು ಜನರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಅಮೆರಿಕ ಮೂಲದ ಉದ್ಯೋಗದಾತರು 80,089 ಉದ್ಯೋಗ ಕಡಿತವಾಗಿದೆ. ಶೇ 20ರಷ್ಟು ಉದ್ಯೋಗ ಕಡಿತಗೊಂಡಿದೆ. ಗ್ರಾಹಕರ ಆತ್ಮವಿಶ್ವಾಸ ಕಳೆದ ಆರು ತಿಂಗಳಿನಿಂದ ಕಡಿಮೆಯಾಗಿದೆ. ನಿಧಾನಗತಿಯ ನಿರೀಕ್ಷೆಗಳು ನೇಮಕಾತಿಯನ್ನು ಕಡಿಮೆ ಮಾಡಿದೆ ಎಂದು ಆ್ಯಂಡ್ರೊ ಚಾಲೆಂಜರ್​ ತಿಳಿಸಿದೆ.

ಇದಕ್ಕೂ ಹೆಚ್ಚಾಗಿ, ಕಂಪನಿಗಳು ಈ ವರ್ಷ 4,17,500 ರೂ ಕೆಲಸ ಕಡಿತಕ್ಕೆ ಯೋಜಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ 315 ಪ್ರತಿಶತ ಉದ್ಯೋಗ ಕಡಿತವಾಗಿದೆ. ತಾಂತ್ರಿಕ ವಲಯದಲ್ಲಿ ಹೆಚ್ಚಿನ ಉದ್ಯೋಗ ಕಡಿತವಾಗಿದೆ. ಮೇ ಅಲ್ಲಿ 22,887 ರಲ್ಲಿ ಉದ್ಯೋಗ ಕಡಿತವಾಗುವ ಮೂಲಕ ಈ ವರ್ಷ 1,36,831 ಮಂದಿ ಕೆಲಸದಿಂದ ವಜಾಗೊಂಡಿದ್ದಾರೆ.

ಇದಾದ ಬಳಿಕ ಚಿಲ್ಲರೆ ಕ್ಷೇತ್ರದಲ್ಲೂ ಈ ಉದ್ಯೋಗ ವಜಾ ನಡೆದಿದ್ದು, ಇದು ಎರಡನೇ ಉದ್ಯೋಗ ವಜಾ ಕ್ಷೇತ್ರವಾಗಿದೆ. ಚಿಲ್ಲರೆ ಘಟಕದಲ್ಲಿ 9,053 ಉದ್ಯೋಗ ಕಡಿತವಾಗಿದೆ. ಚಿಲ್ಲರೆ ಘಟಕದಲ್ಲಿ 45,168 ಉದ್ಯೋಗ ಕಡಿತವಾಗಿದೆ. ಅಂದರೆ 2022ರ ಮೇ ವರೆಗೆ 4,335ಕ್ಕೆ ಉದ್ಯೋಗ ವಜಾ ನಡೆಸಲಾಗಿದೆ.

ಇನ್ನು ಆಟೋಮೋಟಿವ್​ ವಲಯದಲ್ಲಿ ಕಳೆದ ತಿಂಗಳು 8,308 ಉದ್ಯೋಗ ವಜಾ ನಡೆದಿದೆ. ಒಟ್ಟಾರೆ ಈ ವರ್ಷ 18,017 ಉದ್ಯೋಗ ಕಡಿತವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 235 ರಷ್ಟು ಹೆಚ್ಚಾಗಿದೆ. ಹಣಕಾಸಿನ ಘಟಕದಲ್ಲಿ ಮೇ ವರೆಗೆ 36,937 ಉದ್ಯೋಗ ವಜಾ ನಡೆದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಶೇ 320ರಷ್ಟು ಹೆಚ್ಚಾಗಿದೆ.

ಏನಿದು ಎಐ: ಎಐ ಯ ನಿರ್ದಿಷ್ಟ ಅಪ್ಲಿಕೇಶನ್‌ಗಳಲ್ಲಿ ಪರಿಣಿತ ವ್ಯವಸ್ಥೆಗಳು, ನೈಸರ್ಗಿಕ ಭಾಷಾ ಸಂಸ್ಕರಣೆ, ಮಾತಿನ ಗುರುತಿಸುವಿಕೆ ಮತ್ತು ಮಶೀನ್ ವಿಜನ್ ಸೇರಿವೆ. ಮಷಿನ್​​ ಲರ್ನಿಂಗ್ ಅಲ್ಗಾರಿದಮ್‌ಗಳನ್ನು ಬರೆಯಲು ಮತ್ತು ಅವುಗಳಿಗೆ ತರಬೇತಿ ನೀಡಲು ಎಐ ಗೆ ವಿಶೇಷವಾದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ನ ಅಡಿಪಾಯದ ಅಗತ್ಯವಿದೆ. ಪ್ರಸ್ತುತ ಕೇವಲ ಸಾಫ್ಟ್​ವೇರ್​ ಮಾತ್ರವಲ್ಲದೇ ವೈದ್ಯಕೀಯ, ಆಟೋಮೊಬೈಲ್​​ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಎಐಗೆ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿ: ಭಾರತದಲ್ಲಿ ಉತ್ಪಾದನೆ ಆರಂಭಿಸಲು ಸಜ್ಜಾದ ಲಂಡನ್​ ಮೂಲದ ನಥಿಂಗ್​ ಫೋನ್​ 2

ETV Bharat Logo

Copyright © 2025 Ushodaya Enterprises Pvt. Ltd., All Rights Reserved.