ETV Bharat / science-and-technology

ಫೋನ್ ಬಿಟ್ಟಿರಲು ಆಗಲ್ವಾ? ಹಾಗಾದ್ರೆ ನಿಮಗೂ ನೋಮೋಫೋಬಿಯಾ ಇರಬಹುದು! - etv bharat kannada

ಇತ್ತೀಚಿನ ದಿನಗಳಲ್ಲಿ ಅನೇಕರು ಸ್ಮಾರ್ಟ್​ಫೋನ್​ ವ್ಯಸನಿಗಳಾಗುತ್ತಿದ್ದಾರೆ. ಫೋನ್ ಬಿಟ್ಟಿರಲು ಸಾಧ್ಯವಾಗದ ಸ್ಥಿತಿಯನ್ನು ನೋಮೋಫೋಬಿಯಾ ಎಂದು ಕರೆಯಲಾಗುತ್ತದೆ.

3 out of 4 smartphone users in India suffering from Nomophobia: Study
ಫೋನ್ ಬಿಟ್ಟಿರಲು ಆಗಲ್ವಾ? ಹಾಗಾದ್ರೆ ನಿಮಗೂ ನೋಮೋಫೋಬಿಯಾ ಇರಬಹುದು!
author img

By

Published : May 5, 2023, 3:59 PM IST

ನವದೆಹಲಿ : ಭಾರತದಲ್ಲಿ ಪ್ರತಿ ನಾಲ್ಕು ಜನರ ಪೈಕಿ ಇಬ್ಬರು ನೋಮೋಫೋಬಿಯಾ ಹೊಂದಿದ್ದಾರೆ ಎಂದು ಜಾಗತಿಕ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಒಪ್ಪೊ ಮತ್ತು ಕೌಂಟರ್‌ಪಾಯಿಂಟ್ ರಿಸರ್ಚ್‌ನ ವರದಿ ಶುಕ್ರವಾರ ತಿಳಿಸಿದೆ. ತಮ್ಮ ಸ್ಮಾರ್ಟ್‌ಫೋನ್‌ನಿಂದ ಬೇರ್ಪಡುವ ಭಯ ಹೊಂದಿರುವುದು ನೋಮೋಫೋಬಿಯಾ ಆಗಿದೆ. ಭಾರತದಲ್ಲಿ ಶೇಕಡಾ 72 ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೊಬೈಲ್ ಬ್ಯಾಟರಿ ಶೇಕಡಾ 20 ಅಥವಾ ಅದಕ್ಕಿಂತ ಕಡಿಮೆ ಆದಲ್ಲಿ ಆತಂಕಕ್ಕೆ ಒಳಗಾಗುತ್ತಾರೆ.

ಹಾಗೆಯೇ ಶೇಕಡಾ 65 ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಬ್ಯಾಟರಿ ಕಡಿಮೆಯಾಗುತ್ತಿದ್ದಂತೆ ಭಾವನಾತ್ಮಕ ಅಸ್ವಸ್ಥತೆ ಅನುಭವಿಸುತ್ತಾರೆ ಎಂದು ವರದಿ ತಿಳಿಸಿದೆ. 'NoMoPhobia: ಕಡಿಮೆ ಬ್ಯಾಟರಿ ಉದ್ವಿಗ್ನತೆಯ ಗ್ರಾಹಕ ಅಧ್ಯಯನ' (NoMoPhobia: Low Battery Anxiety Consumer Study) ಎಂಬ ಶೀರ್ಷಿಕೆಯ ವರದಿಯು, ಮೊಬೈಲ್​ನ ಬ್ಯಾಟರಿ ಕಡಿಮೆಯಾದಂತೆ ಜನರಲ್ಲಿ ಈ ಫೋಬಿಯಾ ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಗ್ರಾಹಕರ ಮನಸ್ಥಿತಿ ಅಧ್ಯಯನ ಮಾಡಿದೆ.

ಒಪ್ಪೊ ತನ್ನ ತಂತ್ರಜ್ಞಾನದ ಆವಿಷ್ಕಾರದ ಬಗ್ಗೆ ಹೆಮ್ಮೆಪಡುತ್ತದೆ ಮತ್ತು ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ನಾವು ನಿರಂತರವಾಗಿ ಅಧ್ಯಯನಗಳ ಮೇಲೆ ಅವಲಂಬಿತರಾಗಿದ್ದೇವೆ. ಜಗತ್ತಿಗೆ ಶಾಶ್ವತವಾದ ಮೌಲ್ಯ ತರುವ ಉತ್ಪನ್ನಗಳು ಮತ್ತು ಅನುಭವಗಳನ್ನು ರಚಿಸುವುದು ನಮ್ಮ ಉದ್ದೇಶವಾಗಿದೆ ಎಂದು ಒಪ್ಪೊ ಇಂಡಿಯಾದ ಸಿಎಂಒ ದಮಯಂತ್ ಸಿಂಗ್ ಖನೋರಿಯಾ ಹೇಳಿದರು. ಈ ಅಧ್ಯಯನವು ನೋಮೋಫೋಬಿಯಾದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ನೀಡುತ್ತದೆ. ಇದು ನೋಮೋಫೋಬಿಯಾ ಪರಿಹರಿಸುವ ಮಾರ್ಗಗಳನ್ನು ತಿಳಿಯಲು ಸಹಾಯ ಮಾಡುತ್ತದೆ ಎಂದು ಖನೋರಿಯಾ ತಿಳಿಸಿದರು.

ವರದಿಯ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 42 ರಷ್ಟು ಜನ ಮನರಂಜನೆಗಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಇದರಲ್ಲಿ ಸಾಮಾಜಿಕ ಮಾಧ್ಯಮವು ಅಗ್ರಸ್ಥಾನದಲ್ಲಿದೆ. ಇನ್ನು ಶೇಕಡಾ 65 ರಷ್ಟು ಬಳಕೆದಾರರು ಬ್ಯಾಟರಿಯನ್ನು ಉಳಿಸಲು ಫೋನ್ ಬಳಕೆಯನ್ನು ಕಡಿಮೆ ಮಾಡುತ್ತಾರೆ ಮತ್ತು ಶೇಕಡಾ 82 ರಷ್ಟು ಜನ ತಮ್ಮ ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಿತಿಗೊಳಿಸುತ್ತಾರೆ.

ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಮಾತನಾಡಿ, ಸ್ಮಾರ್ಟ್‌ಫೋನ್‌ಗಳು ನಮ್ಮ ವೈಯಕ್ತಿಕ ವಿಶ್ವಗಳಾಗಿ ಮಾರ್ಪಟ್ಟಿವೆ, ಅದು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಸಂಪರ್ಕದಲ್ಲಿರಲು ಮತ್ತು ಮನರಂಜನೆಗಾಗಿಯೂ ನಮಗೆ ಅವಕಾಶ ಮಾಡಿಕೊಡುತ್ತದೆ. ಪರಿಣಾಮವಾಗಿ, ನಮ್ಮಲ್ಲಿ ಅನೇಕರು ಫೋನ್ ಇಲ್ಲದೆ ಇದ್ದರೆ ಮುಂದೇನು ಎಂಬ ಫೋಬಿಯಾವನ್ನು ಬೆಳೆಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ಜನರು ಬ್ಯಾಟರಿ ಖಾಲಿಯಾಗುವ ಮತ್ತು ತಮ್ಮ ಫೋನ್‌ಗಳನ್ನು ಇನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂಬ ಆಲೋಚನೆಯಿಂದ ಆಗಾಗ್ಗೆ ಆತಂಕಕ್ಕೊಳಗಾಗುತ್ತಾರೆ ಎಂದು ತಿಳಿಸಿದರು. ಒಪ್ಪೊ ಇಂಡಿಯಾ ಈಗ ಭಾರತದ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದೆ.

ಸ್ಮಾರ್ಟ್‌ಫೋನ್ ಚಟವನ್ನು ಕೆಲವೊಮ್ಮೆ ಆಡುಮಾತಿನಲ್ಲಿ ನೋಮೋಫೋಬಿಯಾ (ಮೊಬೈಲ್ ಫೋನ್ ಇಲ್ಲದಿರುವ ಭಯ) ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಇಂಟರ್ನೆಟ್ ವ್ಯಸನದ ಅಸ್ವಸ್ಥತೆಯಿಂದ ಉಂಟಾಗುತ್ತದೆ. ಆದರೆ ಇದು ವಾಸ್ತವದಲ್ಲಿ ಫೋನ್​ನಿಂದ ಆಗಿರುವುದಿಲ್ಲ. ಅದರಲ್ಲಿರುವ ಆ್ಯಪ್​ಗಳು, ಗೇಮ್​ಗಳು ಮುಂತಾದುವುಗಳಿಂದ ಈ ಚಟ ಉಂಟಾಗುತ್ತದೆ.

ಇದನ್ನೂ ಓದಿ : ನ್ಯೂಸ್ ನೋಡಲು ಅತಿ ಜನಪ್ರಿಯ ಪ್ಲಾಟ್​ಫಾರ್ಮ್ ಯೂಟ್ಯೂಬ್: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.