ETV Bharat / science-and-technology

ವಿಶ್ವಸಂಸ್ಥೆಯ ಎಐ ಸಲಹಾ ಮಂಡಳಿಯಲ್ಲಿ ಸ್ಥಾನ ಪಡೆದ ಮೂವರು ಭಾರತೀಯರು

author img

By ETV Bharat Karnataka Team

Published : Oct 27, 2023, 12:23 PM IST

ಕೃತಕ ಬುದ್ದಿಮತ್ತೆ ಉನ್ನತ ಮಟ್ಟದ ಮಲ್ಟಿಸ್ಟೇಕ್ ​ಹೋಲ್ಡರ್​​ ಅನ್ನು ವಿಶ್ವಸಂಸ್ಥೆ ಮುಖ್ಯಸ್ಥರು ಘೋಷಿಸಿದರು

3 Indian experts named to UN's new AI advisory body announced by Secretary General Guterres

ಜಿನೀವಾ: ಹೆಚ್ಚುತ್ತಿರುವ ಕೃತಕ ಬುದ್ದಿಮತ್ತೆಯನ್ನು ನಿಯಂತ್ರಿಸುವ ಅಂತಾರಾಷ್ಟ್ರೀಯ ಸಮುದಾಯದ ಪ್ರಯತ್ನವನ್ನು ಬೆಂಬಲಿಸಲು 30 ಸದಸ್ಯರ ಜಾಗತಿಕ ಸಲಹಾ ಮಂಡಳಿಯನ್ನು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟೇರಸ್​ ಘೋಷಿಸಿದ್ದಾರೆ. ಈ ಸದಸ್ಯರ ತಂಡದಲ್ಲಿ ಭಾರತದ ಪ್ರಮುಖ ತಂತ್ರಜ್ಞಾನ ತಜ್ಞರು ಕೂಡ ಸ್ಥಾನ ಪಡೆದಿದ್ದಾರೆ.

ಕೃತಕ ಬುದ್ದಿಮತ್ತೆ ಉನ್ನತ ಮಟ್ಟದ ಮಲ್ಟಿಸ್ಟೇಕ್ ​ಹೋಲ್ಡರ್​​ ಅನ್ನು ವಿಶ್ವಸಂಸ್ಥೆ ಮುಖ್ಯಸ್ಥರು ಘೋಷಿಸಿದರು. ಖಾಸಗಿ ವಲಯ, ಸಂಶೋಧನಾ ಸಮುದಾಯ, ನಾಗರಿಕ ಸಮಾಜ ಮತ್ತು ಶೈಕ್ಷಣಿಕ ತಜ್ಞರನ್ನು ಒಟ್ಟುಗೂಡಿಸುತ್ತದೆ. ಸವಾಲುಗಳು, ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ ಕೃತಕ ಬುದ್ದಿಮತ್ತೆಯನ್ನು ಬಳಸಿಕೊಳ್ಳಲು ಸಹಾಯ ಮಾಡುವುದು. ಕೃತಕ ಬುದ್ದಿಮತ್ತೆ ಆಡಳಿತದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವುದು ಎಂದರು.

ಇನ್ನು ಈ ಸಲಹಾ ಸಮಿತಿಗೆ ನೇಮಕವಾದ ಭಾರತೀಯರು ಎಂದರೆ ಐಸ್ಪಿರಿಟ್​ ಫೌಂಡೆಶನ್​ನ ಶರದ್​ ಶರ್ಮಾ, ತಂತ್ರಜ್ಞಾನದ ಸೆಕ್ರೆಟರಿ ಜನರಲ್‌ನ ತಂತ್ರಜ್ಞಾನ ರಾಯಭಾರಿ ಅಮನ್​ದೀಪ್​ ಸಿಂಗ್​ ಗಿಲ್​, ಹಗ್ಗಿಂಗ್​ ಫೇಸ್​​ನ ಪ್ರಮುಖ ಸಂಶೋಧಕರಾದ ನಸೀನ್​ ರಜನಿ.

ಅಮನ್​ದೀಪ್​ ಸಿಂಗ್​ ಗಿಲ್: ತಂತ್ರಜ್ಞಾನದ ಸೆಕ್ರೆಟರಿ ಜನರಲ್‌ನ ರಾಯಭಾರಿಯಾಗಿ ನೇಮಕಗೊಳ್ಳುವ ಮೊದಲು ಗಿಲ್​ ಐ-ಡಿಎಐಆರ್​ ಯೋಜನೆಯ ಸಿಇಒ ಆಗಿದ್ದಾರೆ. ಇದಕ್ಕೂ ಮೊದಲು ಅವರು 2018-19ರಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಡಿಜಿಟಲ್ ಸಹಕಾರದ ಉನ್ನತ ಮಟ್ಟದ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಹ-ನಾಯಕರಾಗಿದ್ದರು. ಗಿಲ್ ಅವರು ಜಿನೀವಾದಲ್ಲಿ 2016-2018 ನಡೆದ ನಿರಸ್ತ್ರೀಕರಣದ ಸಮ್ಮೇಳನಕ್ಕೆ ಭಾರತದ ರಾಯಭಾರಿ ಮತ್ತು ಖಾಯಂ ಪ್ರತಿನಿಧಿಯಾಗಿದ್ದರು.

ಶರದ್​ ಶರ್ಮಾ: ಐಸ್ಪಿರಿಟ್​ನ ಸಹ ಸಂಸ್ಥಾಪಕ ಶರದ್​ ಶರ್ಮಾ, ಸಿಸ್ಕೊ ಭಾಗವಾಗಿರುವ ವೈರ್‌ಲೆಸ್ ಇನ್ಫ್ರಾಸ್ಟ್ರಕ್ಚರ್ ಸ್ಟಾರ್ಟ್ಅಪ್ ಟೆಲ್ಟಿಯರ್ ಟೆಕ್ನಾಲಜೀಸ್ ಅನ್ನು ಸಹ ಸ್ಥಾಪಿಸಿದರು. ಎರಡು ಡಜನ್‌ಗಿಂತಲೂ ಹೆಚ್ಚು ಹೂಡಿಕೆಗಳನ್ನು ಹೊಂದಿರುವ ಸಕ್ರಿಯ ಏಂಜೆಲ್ ಹೂಡಿಕೆದಾರರು, ಅವರು ಭಾರತದ ಮೊದಲ ಐಪಿ-ಕೇಂದ್ರಿತ ನಿಧಿಯಾದ ಇಂಡಿಯಾ ಇನ್ನೋವೇಶನ್ ಫಂಡ್‌ನ ಯಶಸ್ಸಿನಲ್ಲಿ ಪ್ರಮುಖರಾಗಿದ್ದರು. ನ್ಯಾಷನಲ್ ಸ್ಟಾರ್ಟ್ಅಪ್ ಅಡ್ವೈಸರಿ ಕೌನ್ಸಿಲ್, ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ ಹಣಕಾಸು ಮತ್ತು ನಿಯಂತ್ರಕ ತಂತ್ರಜ್ಞಾನ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಆಸ್ತಿ ಟೋಕನೈಸೇಶನ್ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಟಾಸ್ಕ್ಫೋರ್ಸ್ ಕುರಿತು ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ನಸೀನ್​ ರಜನಿ: ನಸೀನ್​ ರಜನಿ ಹಗ್ಗಿಂಗ್ ಫೇಸ್‌ನಲ್ಲಿ ಸಂಶೋಧನಾ ಪ್ರಮುಖರಾಗಿದ್ದಾರೆ. ಕೃತಕ ಬುದ್ಧಿಮತ್ತೆ ಸುರಕ್ಷತೆ ಮತ್ತು ಜೋಡಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಮಾನವ ಪ್ರತಿಕ್ರಿಯೆಯೊಂದಿಗೆ ಬಲವರ್ಧನೆಯ ಕಲಿಕೆಯನ್ನು ನಿಯಂತ್ರಿಸುತ್ತಾರೆ. ಎಲ್​ಎಲ್​ಎಂನ ದೃಢತೆ ಮತ್ತು ಮೌಲ್ಯಮಾಪನದಲ್ಲಿ ಪರಿಣಿತಿ ಹೊಂದಿದ್ದಾರೆ ಸೇಲ್ಸ್‌ಫೋರ್ಸ್ ರಿಸರ್ಚ್‌ನಲ್ಲಿ ಗೌರವಾನ್ವಿತ ಸಂಶೋಧಕರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆಸ್ಟಿನ್​ನ ಟೆಕ್ಸಾಸ್​ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್​​ ಸೈನ್ಸ್​​ ಡಾಕ್ಟರೇಟ್​ ಅನ್ನು ಸಂಪಾದಿಸಿದ್ದಾರೆ. ಇಲ್ಲಿ ಇವರು ನೈಸರ್ಗಿಕ ಭಾಷಾ ಪ್ರಕ್ರಿಯೆ ಮತ್ತು ಮೆಷಿನ್​ ಲರ್ನಿಂಗ್​ ಮಾದರಿ ಮೇಲೆ ಹೆಚ್ಚು ಕೇಂದ್ರಿಕರಣವಹಿಸಿದ್ದರು.

ಇದನ್ನೂ ಓದಿ: ಭಾರತೀಯ ಅಮೆರಿಕನ್​ ವಿಜ್ಞಾನಿಗಳಿಗೆ ಅಮೆರಿಕದ ರಾಷ್ಟ್ರೀಯ ಗೌರವ: ಸುರೇಶ್​, ಅಶೋಕ್​ ಗಾಡ್ಗಿಲ್​ಗೆ ಬೈಡನ್​ ರಿಂದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.