ETV Bharat / science-and-technology

ಕಳೆದೆರಡು ವರ್ಷಗಳಿಂದ ಉದ್ಯೋಗಗಳಿಗೆ ಕತ್ತರಿ.. ಪ್ರತಿ ಗಂಟೆಗೆ 23 ಟೆಕ್ಕಿಗಳು ವಜಾ

ಕೋವಿಡ್​ ಬಳಿಕ ಟೆಕ್​ ಕ್ಷೇತ್ರದಲ್ಲಿ ಉದ್ಯೋಗ ವಜಾ ನಿರಂತರವಾಗಿ ನಡೆದಿದ್ದು, ಅನೇಕ ದೈತ್ಯ ಕಂಪನಿಗಳು ಈ ಕ್ರಮಕ್ಕೆ ಮುಂದಾಗಿವೆ.

author img

By ETV Bharat Karnataka Team

Published : Oct 14, 2023, 4:59 PM IST

23 techies were laid off every hour in the last couple of years

ನವದೆಹಲಿ: ಜಗತ್ತಿನಲ್ಲಿರುವ ಸ್ಟಾರ್ಟ್​​ಅಪ್​ ಸೇರಿದಂತೆ ಅನೇಕ ಟೆಕ್​ ಕಂಪನಿಗಳು ಕಳೆದೆರಡು ವರ್ಷಗಳಿಂದ ಇಲ್ಲಿಯವರೆಗೆ ಅಂದರೆ ಅಕ್ಟೋಬರ್​ 13ರ ವರೆಗೆ 4,00,000 ಉದ್ಯೋಗಿಗಳನ್ನು ವಜಾ ಮಾಡಿದೆ. ಇದರಲ್ಲಿ ಭಾರತದಲ್ಲಿ 30,000 ಉದ್ಯೋಗಿಗಳನ್ನು 110 ಭಾರತೀಯ ಸ್ಟಾರ್ಟ್​ಅಪ್​ಗಳು ತೆಗೆದುಹಾಕಿವೆ.

ಗ್ಲೋಬಲ್​ ಮ್ಯಾಕ್ರೋಎಕಾನಾಮಿಕ್​ ಪರಿಸ್ಥಿತಿ ಮಾಹಿತಿ ಅನುಸಾರ, ದೊಡ್ಡ ಟೆಕ್​ ಸಂಸ್ಥೆ ಮತ್ತು ಸ್ಟಾರ್ಟ್​ಅಪ್​ಗಳು ಉದ್ಯೋಗಿಗಳನ್ನು ವಜಾ ಮಾಡಿವೆ. ಇನ್ನೂ ಕೂಡ ಈ ವಜಾ ಪ್ರಕ್ರಿಯೆ ಮುಂದುವರೆದಿದೆ.

layoff.fyi ವೆಬ್​ಸೈಟ್​ನ ಇತ್ತೀಚಿನ ವರದಿ ಪ್ರಕಾರ, ವೆಬ್​ಸೈಟ್​​ ಟೆಕ್​ ವಲಯದಲ್ಲಿನ ಉದ್ಯೋಗ ಕಡಿತವನ್ನು ಟ್ರಾಕ್​ ಮಾಡಿದ್ದು, ಜಾಗತಿಕವಾಗಿ 2,120 ಟೆಕ್​ ಕಂಪನಿಗಳು 4,04,962 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ ಎಂಬ ಮಾಹಿತಿ ನೀಡಿದೆ.

2022ರಲ್ಲಿ 1,061 ಟೆಕ್​ ಕಂಪನಿಗಳು 1,64,769 ಉದ್ಯೋಗಿಗಳನ್ನು ವಜಾ ಮಾಡಿವೆ. ಇದರ ನಡುವೆ 1,059 ಕಂಪನಿಗಳು 2023ರಿಂದ ಇಲ್ಲಿಯವರೆಗೆ 2,40,193 ಉದ್ಯೋಗಿಗಳ ಕಡಿತಗೊಳಿಸಿವೆ.

ಸರಾಸರಿ, ಪ್ರತಿ ಒಂದು ಗಂಟೆಗೆ 23 ಉದ್ಯೋಗಿಗಳು ಅಥವಾ ಕಳೆದೆರಡು ವರ್ಷಗಳಿಂದ ಪ್ರತಿನಿತ್ಯ 555 ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಜನವರಿ ಒಂದೇ ತಿಂಗಳಲ್ಲಿ 89,554 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಉದ್ಯೋಗ ಕಡಿತದ ಪ್ರಕ್ರಿಯೆ ಮುಂದುವರೆದಿದೆ. ಕಳೆದ ತಿಂಗಳು 4,632 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ದತ್ತಾಂಶ ವಿವರಿಸಿದೆ.

ವಲಯಗಳ ಮಟ್ಟದಲ್ಲಿ ನೋಡುವುದಾದರೆ, ರಿಟೇಲ್​ ಟೆಕ್​ ಮತ್ತು ಕನ್ಸುಮರ್​ ಟೆಕ್​ನಲ್ಲಿ ಈ ವರ್ಷ ಅಧಿಕ ಉದ್ಯೋಗಗಳನ್ನು ಕಡಿಗೊಳಿಸಲಾಗಿದೆ. ರಿಟೇಲ್​ ಅಂದರೆ ಚಿಲ್ಲರೆ ಟೆಕ್​ ವಲಯದಲ್ಲಿ 29,161 ಮತ್ತು ಕನ್ಸುಮರ್​ (ಗ್ರಾಹಕ) ಟೆಕ್​ ಉದ್ಯಮದಲ್ಲಿ 28,873 ಉದ್ಯೋಗಿಗಳು ವಜಾಗೊಂಡಿದ್ದಾರೆ ಎಂದು ದತ್ತಾಂಶ ತೋರಿಸಿದೆ.

2023 ವರ್ಷ ಅಂತ್ಯಕಾಣುವ ಮುನ್ನ ಇನ್ನೂ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಚಿಪ್​ -ಉತ್ಪಾದಕ ಸಂಸ್ಥೆ ಕ್ವಾಲ್ಕೊಮ್ ಈಗಾಗಲೇ ಘೋಷಿಸಿರುವಂತೆ ತಮ್ಮ ಕ್ಯಾಲಿಫೋರ್ನಿಯಾ ಮತ್ತು ಯುಎಸ್​​ ಕಚೇರಿಗಳಿಂದ ಸುಮಾರು 1,258 ಮಂದಿಯನ್ನು ವಜಾ ಮಾಡಲು ಸಿದ್ಧವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದೆಡೆ ಅಮೆರಿಕದ ಮೂಲದ ಟೆಕ್​ ಸಂಸ್ಥೆಗಳಾದ ಫ್ಲೆಕ್ಸ್​, ಸಿಸ್ಕೋ, ಪೈ ಇನ್ಸೂರೆನ್ಸ್​ ಮತ್ತು ಅನೇಕ ಸಂಸ್ಥೆಗಳು ಇತ್ತೀಚಿನ ತಿಂಗಳಲ್ಲಿ ಅನೇಕ ಉದ್ಯೋಗಿಗಳನ್ನು ವಜಾ ಮಾಡಿವೆ. ಕಳೆದ ತಿಂಗಳು ಪ್ರಂಟ್ನೈಟ್​​ ಗೇಮ್​ ಡೆವಲಪರ್​ ಎಪಿಕ್​ ಗೇಮ್ಸ್​​​ ಶೇ 16ರಷ್ಟು ಅಂದರೆ ಸುಮಾರು 870 ಉದ್ಯೋಗಳ ವಜಾ ಮಾಡುವುದಾಗಿ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಆ್ಯಂಡ್ರಾಯ್ಡ್​​ ಬೆಟಾ ಆ್ಯಪ್​ಗೆ ಹೊಸ ಅಪ್ಡೇಟ್​ ಇಂಟರ್​​ಫೇಸ್​​ ಪರಿಚಯಿಸಲು ಮುಂದಾದ ವಾಟ್ಸ್​ಆ್ಯಪ್​ ​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.