ಮಾಲ್ಡಾ(ಪಶ್ಚಿಮ ಬಂಗಾಳ): 12 ವರ್ಷದ ಬಾಲಕನೊಬ್ಬ ಮನೆಯಲ್ಲಿ ಕುಳಿತು ಬಾಹ್ಯಾಕಾಶದ ನಿಗೂಢತೆ ಹುಡುಕುತ್ತಿದ್ದಾರೆ. ಇದು ಕುತೂಹಲಕಾರಿ ಎನಿಸಿದರೂ ಸತ್ಯ. ಹೌದು ಈ ಬಾಲಕ ಈಗಾಗಲೇ ಕ್ಷುದ್ರಗ್ರಹಗಳು, ನಕ್ಷತ್ರಪುಂಜಗಳು ಮತ್ತು ಸೂಪರ್ ನೋವಾಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಲ್ಡಾದ ಶೌರ್ಯ ಪಾಲ್ ಈಗ ನಾಸಾ ಅಥವಾ ಇಸ್ರೋ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಪರಿಚಿತ ಹೆಸರು.
ರೀಜೆಂಟ್ ಪಾರ್ಕ್ ನಿವಾಸಿಯಾಗಿರುವ ಶೌರ್ಯ, ನಗರದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾನೆ. ಅವರ ತಂದೆ ಸುಭೇಂದು ಪಾಲ್ ಮತ್ತು ತಾಯಿ ಅರ್ಪಿತಾ ಪಾಲ್ ಅವರು ತಮ್ಮ ಮಗನ ಸಾಧನೆಯ ಬಗ್ಗೆ ಸಹಜವಾಗಿ ಹೆಮ್ಮೆಪಡುತ್ತಿದ್ದಾರೆ. ಅವರ ಒಬ್ಬನೇ ಮಗ ಬಾಲ್ಯದಿಂದಲೂ ಆಕಾಶದ ಗೀಳು ಹಚ್ಚಿಕೊಂಡಿದ್ದಾನೆ. ಬೆಳದಂತೆ ಬೆಳದಂತೆ ಆತನ ಬಾಹಾಕ್ಯಾಶದ ಗೀಳು ಹೆಚ್ಚಾಗುತ್ತಲೇ ಸಾಗಿದೆ.
ಶೌರ್ಯನ ಈ ಗೀಳು ದೆಹಲಿಯ ನಾಗರಿಕ ವಿಜ್ಞಾನಿ ಮತ್ತು ಮಾಲ್ಡಾದ ಮೂಲದ ಶೋಭನ್ ಆಚಾರ್ಯ ಅವರನ್ನು ಹುಡುಕಿಕೊಂಡು ಹೋಗಲು ಸಹಾಯ ಅಂತಾರೆ ಈ ಬಾಲಕನ ತಂದೆ ತಾಯಿ. ಅಷ್ಟೇ ಅಲ್ಲ ಶೌರ್ಯನ ಬಾಹ್ಯಾಕಾಶದ ಮಹತ್ವಾಕಾಂಕ್ಷೆ ಕಂಡ ಪೋಷಕರು, ‘ದಿ ಸಿಟಿಜನ್ ಸೈಂಟಿಸ್ಟ್’ ಎಂಬ ವಾಟ್ಸ್ಆ್ಯಪ್ ಗ್ರೂಪ್ ಗೆ ಸೇರ್ಪಡೆ ಮಾಡಿದ್ದರು.
ಅಂದ ಹಾಗೆ ಈ ಪ್ರತಿಷ್ಠಿತ ದಿ ಸಿಟಿಜನ್ ಸೈಂಟಿಸ್ಟ್ ಗುಂಪಿನಲ್ಲಿ ಪ್ರಪಂಚದಾದ್ಯಂತ ಬಾಹ್ಯಾಕಾಶ ಅಭ್ಯಾಸ ಮಾಡುವ ಅನೇಕ ಜನರಿದ್ದಾರೆ. ಹೀಗಾಗಿ ಈ ವಾಟ್ಸ್ಆ್ಯಪ್ ಗ್ರೂಪ್ ಶೌರ್ಯ ಬಾಹ್ಯಾಕಾಶದ ಬೆರಗನ್ನು ಭೇದಿಸಲು ಸಹಾಯ ಮಾಡಿದೆ. ಈ ಗ್ರೂಪ್ನಿಂದಾಗಿ ಶೌರ್ಯನಿಗೆ ಬಾಹ್ಯಾಕಾಶದ ಬಗ್ಗೆ ಹೆಚ್ಚೆಚ್ಚು ತಿಳಿಯುವಂತಾಗಿದೆ. ನಂತರ ಅವರು IASC ಎಂಬ ವಿದೇಶಿ ಸಂಸ್ಥೆಗೆ ಸೇರಿಕೊಂಡರು. ಈ ಸಂಸ್ಥೆಯ ನಾಸಾದ ಅಂಗಸಂಸ್ಥೆಯಾಗಿದೆ. IASC ಗಾಗಿ, ಅವರು ಬಾಹ್ಯಾಕಾಶದಲ್ಲಿ ಹರಡಿರುವ ಹಲವಾರು ಕ್ಷುದ್ರಗ್ರಹಗಳು, ನಕ್ಷತ್ರಪುಂಜಗಳು ಮತ್ತು ಸೂಪರ್ನೋವಾಗಳ ಸ್ಥಳಗಳನ್ನು ಗುರುತಿಸುವ ಆರಂಭಿಕ ಕೆಲಸ ಮಾಡಿದರು.
ಈ ಬಗ್ಗೆ ಮಾತನಾಡಿರುವ ಬಾಲಕ ಶೌರ್ಯ, "ನಾನು ಚಿಕ್ಕವನಿದ್ದಾಗ, ನನ್ನ ಹೆತ್ತವರೊಂದಿಗೆ ಛಾವಣಿಯ ಮೇಲೆ ಹೋಗಿ ಆಕಾಶವನ್ನು ನೋಡುತ್ತಿದ್ದೆ. ಸ್ವಲ್ಪ ದೊಡ್ಡವನಾದಾಗ, ನಕ್ಷತ್ರಗಳ ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದೆ, ಆಕಾಶವು ನನ್ನನ್ನು ತುಂಬಾ ಆಕರ್ಷಿಸಿತು. ಹೀಗಾಗಿ ನಿಜವಾಗಿಯೂ ಏನೆಂದು ತಿಳಿಯಲು ಬಯಸಿದೆ. ನಕ್ಷತ್ರವು ಹೇಗೆ ಕಾಣುತ್ತದೆ, ಅದರ ಬೆಳಕಿನ ಬಣ್ಣ ಏನು ಎಂಬುದನ್ನು ತಿಳಿದುಕೊಳ್ಳಲು ಬೆನ್ನು ಬಿದ್ದೆ. ಆಳಕ್ಕೆ ಇಳಿದಂತೆ ಸ್ವಲ್ಪ ಸ್ವಲ್ಪವೇ ತಿಳಿಯುತ್ತಾ ಹೋಯಿತು ಎಂದು ಆರಂಭಿಕ ಆಸಕ್ತಿ ಬಗ್ಗೆ ವಿವರಣೆ ನೀಡಿದ್ದಾರೆ.
"ನಾನು ನಿಜವಾಗಿಯೂ ದೂರದರ್ಶಕ ಖರೀದಿಸಲು ಬಯಸುತ್ತೇನೆ. ದೂರದರ್ಶಕ ಇದ್ದರೆ ನಾನು ಮನೆಯಲ್ಲಿ ಹೆಚ್ಚು ಆಕಾಶವನ್ನು ನೋಡಬಹುದು. ನಾವು ಮುಖ್ಯವಾಗಿ ನಾಗರಿಕ ವಿಜ್ಞಾನ ಯೋಜನೆಗಳಲ್ಲಿ ಕೆಲಸ ಮಾಡುತ್ತೇವೆ. ವಾಸ್ತವವಾಗಿ, ಬ್ರಹ್ಮಾಂಡವು ತುಂಬಾ ದೊಡ್ಡದಾಗಿದೆ, ಬಾಹ್ಯಾಕಾಶ ವಿಜ್ಞಾನಿಗಳು ಎಲ್ಲವನ್ನೂ ಟ್ರ್ಯಾಕ್ ಮಾಡುವುದು ತುಂಬಾ ಕಷ್ಟಕರವಾಗಿದೆ ಅಂತಾರೆ ಬಾಲಕ ಶೌರ್ಯ.
"ಹವಾಯಿ ದ್ವೀಪಗಳಲ್ಲಿನ ಪ್ಯಾನ್‌ಸ್ಟಾರ್ ಒನ್ ಮತ್ತು ಟು ಎರಡು ದೊಡ್ಡ ದೂರದರ್ಶಕಗಳಿಂದ ಚಿತ್ರಗಳನ್ನು ನಮಗೆ ಕಳುಹಿಸಲಾಗಿದೆ. ಆ ಚಿತ್ರವನ್ನು ನೋಡುವ ಮೂಲಕ, ನಾವು ಹೊಸ ವಿಷಯಗಳನ್ನು ಹುಡುಕಿದೆವು. ಮತ್ತು ಗ್ಯಾಲಕ್ಸಿ ವರ್ಗೀಕರಣದಲ್ಲಿ, ನಾನು ಎರಡು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ - ನವೋಜ್ ಮತ್ತು ಪುಣೆ ನಾಲೆಡ್ಜ್ ಕ್ಲಸ್ಟರ್ - Naoz ಗಾಗಿ ನಾನು ಒಂದು ತಿಂಗಳಲ್ಲಿ 1000 ಗೆಲಾಕ್ಸಿ ವರ್ಗೀಕರಣ ಮಾಡಿದ್ದೇವೆ. ಇಡೀ ಪ್ರಪಂಚದಲ್ಲಿ 118 ಜನರು ಈ ಕೆಲಸವನ್ನು ಮಾಡುತ್ತಿದ್ದೇವೆ. ಅದರಲ್ಲಿ ನಾನು ಕೂಡಾ ಒಬ್ಬ. ಇಲ್ಲಿಯವರೆಗೆ ನಾನು ಮೂರು ಹೊಸ ಕ್ಷುದ್ರಗ್ರಹಗಳನ್ನು ಗುರುತಿಸಿದ್ದೇನೆ. ಹೊಸ ಸೂಪರ್ನೋವಾವನ್ನು ಸಹ ಕಂಡುಹಿಡಿದಿದ್ದೇನೆ. ನಾನು ದೊಡ್ಡವನಾದ ಮೇಲೆ ಖಗೋಳ ಭೌತಶಾಸ್ತ್ರವನ್ನು ಅಧ್ಯಯನ ಮಾಡಲು ಬಯಸುತ್ತೇನೆ ಎಂದು ಶೌರ್ಯ ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಸ್ಪೇಸ್ಎಕ್ಸ್ ಸ್ಟಾರ್ಶಿಪ್ ಮೊದಲ ಪರೀಕ್ಷಾ ಹಾರಾಟ ಏಪ್ರಿಲ್ 10ಕ್ಕೆ